ಪುನೀತ್ ರಾಜಕುಮಾರ್ ಅವರ ನಾಲ್ಕನೇ ವರ್ಷದ ಪುಣ್ಯ ಸ್ಮರಣೋತ್ಸವ

ಪುನೀತ್ ರಾಜಕುಮಾರ್ ಅವರ ನಾಲ್ಕನೇ ವರ್ಷದ  ಪುಣ್ಯ ಸ್ಮರಣೋತ್ಸವ  Puneeth Rajkumar's Fourth Year Commemoration

ರಾಣೇಬೆನ್ನೂರು  30:  ಬಸ್ಟ್ಯಾಂಡ್ ರಸ್ತೆಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ವೃತ್ತದಲ್ಲಿ  ಡಾಕ್ಟರ್ ಪುನೀತ್ ರಾಜಕುಮಾರ್ ಅವರ ನಾಲ್ಕನೇ ವರ್ಷದ  ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮವು ನೂರಾರು ಅಭಿಮಾನಿಗಳ ಮಧ್ಯ ಅತ್ಯಂತ ಭಾವಪೂರ್ಣವಾಗಿ ನಡೆಯಿತು.  

ಕಾರ್ಯಕ್ರಮದ ಯಶಸ್ವಿಗೆ ಸ್ವಾಕರವೇ ನೇತೃತ್ವದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು ತಮ್ಮ ಸಂಪೂರ್ಣ ಸಹಕಾರ ಒದಗಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಅಧ್ಯಕ್ಷ ನಿತ್ಯಾನಂದ ಕುಂದಾಪುರ ಅವರು, ಸದ್ದಿಲ್ಲದ ಸಾಧಕ ಪುನೀತ್ ರಾಜಕುಮಾರ್, ಭೌತಿಕವಾಗಿ ಇಂದು ನಮ್ಮ ಮಧ್ಯೆ ಇಲ್ಲದೆ ಹೋದರು, ಅವರು ಮಾಡಿದ ಜನಪರ ಸೇವೆಗಳು ಅವರ ಜೀವಂತಿಕೆಯನ್ನು ತೋರಿಸುತ್ತದೆ ಎಂದರು.       ಬಾಲ್ಯದಲ್ಲಿಯೇ ತಂದೆಯ ಗರಡಿಯಲ್ಲಿ ಬೆಳೆದ ಡಾಕ್ಟರ್ ಡಾಕ್ಟರ್ ಪುನೀತ್ ರಾಜ್ ಅವರು, ಸಮಾಜ ಇದ್ದರೂ ಇಲ್ಲದಂತಿದ್ದರು. ಅವರ ಮರಣ ನಂತರ ಅವರು ಮಾಡಿದ ಸಮಾಜ ಸೇವೆ ಬೆಳಕಿಗೆ ಬಂದಿತು. ತಾವು ಕಂಡ ನಂತರ ಎಲ್ಲವೂ ದಾನ ನೀಡಿ ಕಣ್ಣಿನ ಮಹತ್ವ  ಮತ್ತು ದೇಹ ದಾನ ಅಗತ್ಯ,ಅವಷ್ಯ ಎಷ್ಟು ಎನ್ನುವುದು ಸಮಾಜಕ್ಕೆ ತೋರಿಸಿದ್ದಾರೆ ಎಂದರು.   ಹೆಣ್ಣುಮಕ್ಕಳ ಉದ್ಯೋಗ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ಕೊಡಿಗೆ ನೀಡಿದ್ದಾರೆ. ಇಂಥ ಒಬ್ಬ ಮಹಾನಾಯಕನ ಪುಣ್ಯ ಸ್ಮರಣೆ ಆಚರಿಸುತ್ತಿರುವುದು ನಾಡಿನ ಸೌಭಾಗ್ಯ ಎಂದರು.   ಪುಣ್ಯ ಸ್ಮರಣೆ ನಿಮಿತ್ತವಾಗಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. 

ಕಾರ್ಯಕ್ರಮದ ಮುಂಚೂಣಿಯಲ್ಲಿ  ಶಿವಕುಮಾರ್ ಜಾಧವ್, ಸಿದ್ದಾರೋಡ ಗುರುಂ, ಕೊಟ್ರೇಶಪ್ಪ ಎಮ್ಮೆ, ಮಲ್ಲಿಕಾರ್ಜುನ್ ಸಾವಕ್ಕಳ್ಳವರ್, ಚಂದ್ರ​‍್ಪ ಬಣಕಾರ್, ಗೋಪಿ ಕುಂದಾಪುರ, ಪ್ರಭಾಕರ್ ಶಿಗ್ಲಿ ಪರಶುರಾಮ್, ಕುರುವತ್ತಿ ರಿಯಾಜ್, ದೊಡ್ಡಮನಿ ಪರಶುರಾಮ್ ಕೋಲಕಾರ, ಆನಂದ ಲಮಾಣಿ, ಶ್ರೀಧರ್ ಛಲವಾದಿ, ಭಾಷಾ ಹಂಪಾಪಟ್ಟಣ, ಅಣ್ಣಪ್ಪ, ಮಂಜುನಾಥ್ ಚಲವಾದಿ, ಹಾಲೇಶ್ ಚಲವಾದಿ, ಶಂಕರ್ ಹಳ್ಳಪ್ಪನವರ, ಅಶೋಕಪ್ಪ ಮುರಡಪ್ಪನವರ ಸೇರಿದಂತೆ  ಮತ್ತಿತರರು ಉಪಸ್ಥಿತರಿದ್ದರು.