ಮಕ್ಕಳ ಆರೋಗ್ಯ ರಕ್ಷಣೆಗೆ ಪಲ್ಸ್‌ ಪೋಲಿಯೋ ಮಹತ್ವ: ಸಚಿವರ ಕರೆ

ಮಕ್ಕಳ ಆರೋಗ್ಯ ರಕ್ಷಣೆಗೆ ಪಲ್ಸ್‌ ಪೋಲಿಯೋ ಮಹತ್ವ: ಸಚಿವರ ಕರೆ  Pulse polio is important for protecting children's health: Minister's call

ಬೆಳಗಾವಿ 29:  ಜಿಲ್ಲೆಯ ವಂಟಮೂರಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಜಿಲ್ಲಾಮಟ್ಟದ ರಾಷ್ಟ್ರೀಯ ಪಲ್ಸ್‌ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಜೂನ್ 28ರಂದು ಉದ್ಘಾಟಿಸಲಾಯಿತು. ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸಿಫ್ (ರಾಜು) ಶೇಟ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಪೋಲಿಯೋ ನಿರ್ಮೂಲನೆ ಹಾಗೂ ಮಕ್ಕಳ ಆರೋಗ್ಯ ರಕ್ಷಣೆಗೆ ಈ ಅಭಿಯಾನದ ಮಹತ್ವವನ್ನು ಒತ್ತಿಹೇಳಿದರು.  ಕಾರ್ಯಕ್ರಮದಲ್ಲಿ 0ಹಿ5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವ ಗುರಿಯಾಗಿ ಒಟ್ಟು 4,71,041 ಮಕ್ಕಳನ್ನು ಒಳಗೊಂಡ ಯೋಜನೆ ರೂಪಿಸಲಾಗಿದೆ.

ಇದಕ್ಕಾಗಿ 2331 ಲಸಿಕಾ ಕೇಂದ್ರಗಳು, 49 ಸಂಚಾರಿ ತಂಡಗಳು, 74 ಟ್ರಾನ್ಸಿಟ್ ತಂಡಗಳು ಹಾಗೂ ಸಾವಿರಾರು ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.  ಪೋಲಿಯೋ ಭಾರತದಲ್ಲಿ ನಿರ್ಮೂಲನೆಯಾಗಿದ್ದರೂ, ನೆರೆಯ ರಾಷ್ಟ್ರಗಳಲ್ಲಿ ಪ್ರಕರಣಗಳು ವರದಿಯಾಗುತ್ತಿರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕಾ ಅಭಿಯಾನ ಮುಂದುವರಿಸಲಾಗುತ್ತಿದೆ ಎಂದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಿಳಿಸಿದರು.  ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು, ನಗರ ಸೇವಕರು ಹಾಗೂ ವಿವಿಧ ಇಲಾಖೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.