ಸ್ಟಾಕ್ ಇದ್ದರೂ ಪೆಟ್ರೋಲ್-ಡೀಸೆಲ್ ನೀಡದ ಬಂಕ್ ಮಾಲಿಕರು : ಸಾರ್ವಜನಿಕರಿಂದ ಆಕ್ರೋಶ
Public outrage at petrol and diesel fuel depot owners who do not provide petrol and diesel despite h
ಕೊಲ್ಹಾರ 21 : ಬಂಕಗಳಲ್ಲಿ ಪೆಟ್ರೋಲ್-ಡೀಸೆಲ್ ಸ್ಟಾಕ್ ಇದ್ರೂ ಸಾರ್ವಜನಿಕರಿಗೆ ನೀಡದೆ ತೊಂದರೆ ಕೋಡುತ್ತಿರುವ ಪೆಟ್ರೋಲ್ ಬಂಕ್ ಮಾಲಿಕರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಬುಧವಾರ ಪಟ್ಟಣದ ಸಾರ್ವಜನಿಕರು ರೈತ ಮುಖಂಡರು ಆಕ್ರೋಶ ಹೊರ ಹಾಕಿದ್ದಾರೆ. ಕೊಲ್ಹಾರ ತಾಲ್ಲೂಕಿನಲ್ಲಿ ಬರುವ ಕೆಲವೊಂದು ಪೆಟ್ರೋಲ್ ಬಂಕ್ ಗಳಲ್ಲಿ ಪೆಟ್ರೋಲ್-ಡೀಸೆಲ್ ಸ್ಟಾಕ್ ಇದ್ರೂ ಸಹ ರೈತರಿಗೆ ಹಾಗೂ ಸಾರ್ವಜನಿಕರಿಗೆ ಡೀಸೆಲ್ ಪೆಟ್ರೋಲ್ ಕೊಡದೆ ಅಲೆದಾಡಿಸಿ ಬಂಕ್ ಮಾಲಿಕರು ತೊಂದರೆ ಕೋಡುತ್ತಿದ್ದಾರೆ ತಾಲೂಕಿನಲ್ಲಿ ಸಾಕಷ್ಟು ವಾಹನಗಳು ಡೀಸೆಲ್ ಪೆಟ್ರೋಲ್ ಕಾಲಿಯಾಗಿ ನಡು ರಸ್ತೆಯಲ್ಲೇ ನಿಂತಿರುವ ಘಟನೆಗಳು ಜರುಗಿವೆ ನಿನ್ನೆ ರಾತ್ರಿಯಿಂದಲೇ ಕೊಲ್ಹಾರ ಪಟ್ಟಣದ ಬಹುತೇಕ ಪೆಟ್ರೋಲ್ ಬಂಕ್ಗಳ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಪೆಟ್ರೋಲ್, ಡೀಸೆಲ್ ಹಾಕಿಸಿಕೊಳ್ಳಲು ಸರದಿ ಸಾಲಿನಲ್ಲಿ ನಿಲ್ಲುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ಇಂದು ಬೆಳಗ್ಗೆ ಕೂಡ ವಾಹನ ಸವಾರರು ಪೆಟ್ರೋಲ್ ಬಂಕ್ಗಳಿಗೆ ಕ್ಯಾನ್ಗಳನ್ನು ಹಿಡಿದು ತಮ್ಮ ವಾಹನಕ್ಕೆ ಹಾಕಿಸಿಕೊಂಡಿರುವುದಲ್ಲದೇ ಹೆಚ್ಚುವರಿಯಾಗಿ ತುಂಬಿಸಿಕೊಂಡು ಹೋಗುತ್ತಿದ್ದಾರೆ ಪಟ್ಟಣದ ಬಸವನ ನಗರ ಹತ್ತಿರ ಇರುವ ಸತ್ಯವರ್ಧನ ಕಿಸಾನ್ ಸೇವಾ ಕೇಂದ್ರ ಇಂಡಿಯನ್ ಪೆಟ್ರೋಲ್ ಬಂಕ್ ನಲ್ಲಿ ಡೀಸೆಲ್ ಪೆಟ್ರೋಲ್ ಸ್ಟಾಕ್ ಇದ್ರು ಸಾರ್ವಜನಿಕರಿಗೆ ಡೀಸೆಲ್ ಪೆಟ್ರೋಲ್ ಇಲ್ಲ ಎಂದು ಇಲ್ಲಿನ ಮ್ಯಾನೇಜರ್ ಹೇಳಿದ್ದಾರೆ ನಂತರ ಸ್ಥಳಿಯ ಸಾರ್ವಜನಿಕರು ರೈತ ಮುಖಂಡರು ಬಂಕ್ ಮ್ಯಾನೇಜರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದಂತೆ ಸ್ಥಳಕ್ಕೆ ಕೊಲ್ಹಾರ ಪೊಲೀಸ್ ಠಾಣೆಯ ಸಿಬ್ಬಂದಿಗಳು ದೌಡಾಯಿಸಿ ಬಂಕ್ ಮ್ಯಾನೇಜರನ್ನು ವಿಚಾರಿಸಿದಾಗ ಪೆಟ್ರೋಲ್ ಬಂಕಿನಲ್ಲಿ ಡೀಸೆಲ್ ಪೆಟ್ರೋಲ್ ಸ್ಟಾಕ್ ಇರುವುದು ಗೊತ್ತಾಗಿದೆ ಬಳಿಕ ಬಂಕ್ ಮ್ಯಾನೇಜರ್ ಎಲ್ಲ ವಾಹನಗಳಿಗೆ ಡೀಸೆಲ್ ಪೆಟ್ರೋಲ್ ಹಾಕುವಂತೆ ಸೂಚಿಸಿದ್ದಾರೆ.
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್ 