ಸಾರ್ವಜನಿಕ ಕುಂದುಕೊರತೆ ಮತ್ತು ಅಹವಾಲು ಸ್ವೀಕಾರ ಸಭೆ
Public Grievance and Complaint Reception Meeting
ಲೋಕದರ್ಶನ ವರದಿ
ಜಮಖಂಡಿ 11 : ನಗರದ ತಾಲೂಕಾಡಳಿತ ಸೌಧದಲ್ಲಿ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳಿಂದ ಸಾರ್ವಜನಿಕ ಕುಂದುಕೊರತೆ ಮತ್ತು ಅಹವಾಲು ಸ್ವೀಕಾರ ಸಭೆ ಕಾಟಾಚ್ಚಾರ ಸಭೆಯಾಗಿ ಜರುಗಿತು. ತಾಲೂಕಿನ ಸುತ್ತಮುತ್ತಲಿನ ಸಾಕಷ್ಟು ಸಾರ್ವಜನಿಕರು ವಿವಿಧ ಸರಕಾರಿ ಇಲಾಖೆಯಲ್ಲಿ ಸರಿಯಾದ ಸಮಯಕ್ಕೆ ದಾಖಲಾತಿಗಳನ್ನು ನೀಡದೆ ಸತಾಯಿಸುತ್ತಿರುವ ಇಲಾಖೆಯ ಕುರಿತು ಅಹವಾಲು ತೆಗೆದುಕೊಂಡು ಬಂದ ಸಾರ್ವಜನಿಕರು ಬಾಗಿನಲ್ಲಿ ಕೆಲಕಾಲ ನಿಂತು ಕಾಯುವ ಪರಿಸ್ಥಿತಿ ಬಂದಿದ್ದು. ಜಿಲ್ಲಾ ಲೋಕಾಯುಕ್ತರಿಗೆ ಅಹವಾಲುಗಳನ್ನು ನೀಡಿದರೆ. ಲೋಕಾ ಅಧಿಕಾರಿಗಳು ಪರೀಶೀಲನೆ ಮಾಡುತ್ತವೆ. ಮತ್ತೇ ನಿಮ್ಮಗೆ ಮಾಹಿತಿ ನೀಡುತ್ತೇವೆ ಎಂದು ಸಬೂಬ ಉತ್ತರವನ್ನು ನೀಡಿ ಹೇಳಿ ಕಳಿಸುತ್ತಿದ್ದಾರೆ ಎಂದು ಸಾರ್ವಜನಿಕರು ಲೋಕಾಯುಕ್ತ ಅಧಿಕಾರಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ತಾಲೂಕ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಕುರಿತು ವಿವರವನ್ನು ನೀಡಿದರು. ಮಧ್ಯದಲ್ಲಿ ಉಪವಾಭಾಗ ಅಧಿಕಾರಿ ಶ್ವೇತಾ ಬೀಡಿಕರ ಅವರು ಎಲ್ಲ ಇಲಾಖೆಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಬುಬೂ ಉತ್ತರವನ್ನು ನೀಡುತ್ತಿದ್ದರು. ನಗರಸಭೆ ಅಧಿಕಾರಿ ಅವರನ್ನು ಲೋಕಾಯುಕ್ತ ಅಧಿಕಾರಿಗಳಿಗೆ ಇಲಾಖೆಯ ಬಗ್ಗೆ ಲಕ್ಷ-ಲಕ್ಷ ಮತ್ತು ಕೋಟಿ-ಕೋಟಿ ಹಣದ ಬಗ್ಗೆ ವಿವರಣೆಯನ್ನು ನೀಡಿದರು. ಲೋಕೋಪಯೋಗಿ ಇಲಾಖೆ ಅಧಿಕಾರಿ ದೇಸಾಯಿ ವೃತ್ತ ಹಾಗೂ ಡಾ,ಅಂಬೇಡ್ಕರ್ ವೃತ್ತದ ರಸ್ತೆ ಬಗ್ಗೆ ವಿವರಣೆ ನೀಡುತ್ತಿದ್ದರು ಸಹ ಲೋಕಾಯುಕ್ತ ಅಧಿಕಾರಿ ಸರಿಯಾಗಿ ಕೆಲಸ ಮಾಡಿ ಎಂದರು. ಸರಕಾರಿ ಉಪವಿಭಾಗ ಆಸ್ಪತ್ರೆಯ ಬಗ್ಗೆ ಯಾವ ರೋಗಿಗಳಿಂದ ಹಣ ಪಡೆಯಬಾರದು. ಯಾರಾದರೂ ದೂರು ನೀಡಿದರೆ ಮಾತ್ರ ತನಿಖೆ ಮಾಡಲಾಗುತ್ತದೆ ಎಂದು ಕಾಟಾಚ್ಚಾರಕ್ಕೆ ಉತ್ತರ ನೀಡುತ್ತಿದ್ದರು. ಅಂತು-ಇಂತು ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳಿಂದ ಸಾರ್ವಜನಿಕ ಕುಂದುಕೊರತೆ ಮತ್ತು ಅಹವಾಲು ಸ್ವೀಕಾರ ಸಭೆ ಕಾಟಾಚ್ಚಾರ ಸಭೆಯಾಗಿ ಜರುಗಿತು ಎಂದು ಬಂದ ಸಾರ್ವಜನಿಕರು ಮಾತನಾಡುತ್ತಿರುವುದು ಕಂಡು ಬಂದಿತ್ತು.
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್ 