ಸೈಕಾಲಜಿಕಲ್ ಹಾರರ್, ಥ್ರಿಲ್ಲರ್‌ನ 'ಕಟ್ಲೆ' ಟ್ರೇಲರ್ ಬಿಡುಗಡೆ
Psychological horror thriller 'Katle' trailer released
ಒಂದುವರೆ ದಶಕದ ಕಾಲ ಹಾಸ್ಯ ಕಲಾವಿದನಾಗಿ ಸುಮಾರು 75ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಕೆಂಪೇಗೌಡ ಈಗ ನಾಯಕನಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಆ ಚಿತ್ರದ ಹೆಸರು 'ಕಟ್ಲೆ'. ಸಸ್ಪೆನ್ಸ್, ಸೈಕಾಲಜಿಕಲ್ ಥ್ರಿಲ್ಲರ್ ಕಥಾ ಹಂದರ ಒಳಗೊಂಡ ಈ ಚಿತ್ರದಲ್ಲಿ ಕೆಂಪೇಗೌಡ ಅವರು ಸಾಫ್ಟವೇರ್ ಇಂಜಿನಿಯರ್ ಪಾತ್ರ ಮಾಡಿದ್ದಾರೆ. ಚಿತ್ರವನ್ನು ಶ್ರೀವಿಧಾ ಅಭಿನಂದನ್ ನಿರ್ದೇಶನ ಮಾಡಿದ್ದು, ಭರತ್ ಗೌಡ ಮೂವೀಸ್ ಬ್ಯಾನರ್‌ನಲ್ಲಿ ಭರತ್ ಗೌಡ ನಿರ್ಮಾಣ ಮಾಡಿದ್ದಾರೆ. ಹೊಸಕೋಟೆ ಮೂಲದ ಉದ್ಯಮಿಯಾದ ಭರತ್ ಅವರು ನಿರ್ದೇಶಕರಿಂದ ಈ ಚಿತ್ರದ ಕಥೆ ಕೇಳಿ, ಚಿಕ್ಕದಾಗಿ ಸಿನಿಮಾ ಮಾಡುವುದಾಗಿ ಶುರು ಮಾಡಿದರು.
ಅದು ದೊಡ್ಡ ಮಟ್ಟದ ಕಮರ್ಷಿಯಲ್ ಚಿತ್ರವಾಗಿ ಇದೇ ಫೆಬ್ರವರಿ 6ರಂದು ರಾಜ್ಯಾದ್ಯಂತ ತೆರೆಗೆ ಸಿದ್ದವಾಗಿದೆ. ಇತ್ತೀಚೆಗೆ 'ಕಟ್ಲೆ' ಸಿನಿಮಾ ಟ್ರೇಲರ್ ಬಿಡುಗಡೆ ಮಾಡಿದ ಮಾಜಿ ಉಪಮುಖ್ಯಮಂತ್ರಿ, ಶಾಸಕ ಸಿ.ಎನ್ ಅಶ್ವಥ್ ನಾರಾಯಣ್ 'ಈ ಚಿತ್ರದ ಟ್ರೇಲರ್ ರೀಲೀಸ್ ಮಾಡುವ ಮೂಲಕ ಗೆಳೆಯನ ಚಿತ್ರಕ್ಕೆ ಶುಭ ಹಾರೈಸುತ್ತೇನೆ. ಕೆಂಪೇಗೌಡ ಅವರ ಸಿನಿಮಾ ಅದ್ಬುತವಾಗಿ ಬಂದಿದೆ. ಕ್ವಾಲಿಟಿ ತುಂಬಾ ಚನ್ನಾಗಿದೆ. ಈ ಸಿನಿಮಾ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ. ಸಿನಿಮಾದಲ್ಲಿ ನಟಿಸುವ ಕನಸು ತುಂಬಾ ಜನಕ್ಕೆ ಇರುತ್ತದೆ. ಆದರೆ ಕೆಲವೊಂದು ಜನರ ಕನಸು ಇಡೇರುತ್ತವೆ. ಕೆಂಪೇಗೌಡ ಅವರ ನಾಯಕನಾಗುವ ಆಸೆ ಇಡೇರಿದೆ' ಎಂದು ಶುಭ ಹಾರೈಸಿದರು. ಕಾರ್ಯಕ್ರಮಕ್ಕೆ ಮಂಡ್ಯ ಶಾಸಕ ರವಿ ಗಣಿಗ, ನಟ ಕಾಕ್ರೋಜ್ ಸುಧಿ, ಪ್ರಥಮ್ ಮುಂತಾದವರು ಅತಿಥಿಗಳಾಗಿ ಆಗಮಿಸಿದ್ದರು.
ನಂತರ ಚಿತ್ರದ ನಿರ್ದೇಶಕ ಅಭಿನಂದನ್ ಮಾತನಾಡಿ, 'ಈ ಚಿತ್ರಕ್ಕೆ 'ಕಟ್ಲೆ'ನೇ ಒಂದು ಕಂಟೆಂಟ್. ಕಟ್ಲೆ ಒಂದು ಟೈಮ್ ಪೀರಿಯಡ್ ಎನ್ನಬಹುದು. ಇದು ಅಳಿಸುತ್ತೆ. ನಗಿಸುತ್ತೆ. ಕೊನೆಗೆ ಮೆಸೇಜ್ ಕೊಡುತ್ತದೆ. ಸಸ್ಪೆನ್ಸ್, ಥ್ರಿಲ್ಲರ್ ಸೈಂಟಿಫಿಕ್ ಕಥೆ ಇಟ್ಟುಕೊಂಡು ಚಿತ್ರ ಮಾಡಿದ್ದೇವೆ. ಶೀರ್ಷಿಕೆ ಬಗ್ಗೆ ತುಂಬಾ ಜನ ಕೇಳಿದ್ದಾರೆ. ನಮ್ಮ ಚಿತ್ರದಲ್ಲಿ 'ಕಟ್ಲೆ'ಗೆ ಕಾಲ ಚಕ್ರ ಎನ್ನಬಹುದು' ಎಂದು ಹೇಳಿದರು. ಚಿತ್ರದ ನಾಯಕ ಕೆಂಪೇಗೌಡ ಮಾತನಾಡಿ, 'ಒಬ್ಬ ಹಾಸ್ಯ ನಟನನ್ನು ಇಟ್ಟುಕೊಂಡು ನಿರ್ಮಾಪಕರು ಒಂದು ದೊಡ್ಡ ಸಿನಿಮಾ ಮಾಡಿದ್ದಾರೆ. ನಾನಿಲ್ಲಿ ಸಾಫ್ಟವೇರ್ ಇಂಜಿನಿಯರ್ ಪಾತ್ರ ಮಾಡಿದ್ದೇನೆ. ಸಾಮಾನ್ಯವಾಗಿ ಸಾಫ್ಟವೇರ್ ಕೆಲಸಗಾರರು ವೀಕ್‌ಎಂಡ್ ಎಂದು ಟ್ರಿಪ್‌ಗೆ ಹೆಚ್ಚಾಗಿ ಹೋಗುತ್ತಾರೆ. ನಾನು ಚಿತ್ರದಲ್ಲಿ ಟ್ರಿಪ್‌ಗೆ ಹೋದಾಗ ಒಂದಿಷ್ಟು ಘಟನೆಗಳು ನಡೆಯುತ್ತವೆ. ಅದು ಎನು. ಮುಂದೆ ಏನೆಲ್ಲಾ ಆಗುತ್ತೆ ಎಂಬುದನ್ನು ಕಾಮಿಡಿ ಜೊತೆಗೆ ಲವ್, ಸೆಂಟಿಮೆಂಟ್ ಹಿಗೆ ಎಲ್ಲಾ ಅಂಶ ಇಟ್ಟುಕೊಂಡು ಚಿತ್ರ ಮಾಡಿದ್ದು, ಸಿನಿಮಾ ತುಂಬಾ ಚನ್ನಾಗಿ ಬಂದಿದೆ' ಎನ್ನುವರು.
ಫೆಬ್ರವರಿ 6ರಂದು ತೆರೆಗೆ ಬರುತ್ತಿರುವ ಈ ಚಿತ್ರದ ನಾಯಕಿಯರಾಗಿ ಸನ್ಮಿತಾ, ಅಮೃತಾ ರಾಜ್ ಅಭಿನಯ ಮಾಡಿದ್ದಾರೆ. ಮತ್ತೊಂದು ಮುಖ್ಯ ಪಾತ್ರಕ್ಕೆ ಹರ್ಷಿಕಾ ಪೊಣಚ್ಚ ಬಣ್ಣ ಹಚ್ಚಿದ್ದಾರೆ. ಉಳಿದ ತಾರಾಗಣದಲ್ಲಿ ಗಣೇಶ್ ರಾವ್ ಕೇಸರ್ಕರ್, ತಬಲಾ ನಾಣಿ, ಹರೀಶ್ ರಾಜ್, ರಮೇಶ್ ಪಂಡಿತ್, ನಿಸರ್ಗ ಅಪ್ಪಣ್ಣ, ಶರಣ್ಯ, ಟೆನ್ನಿಸ್ ಕೃಷ್ಣ, ಬಿರಾಧಾರ್, ಉಮೇಶ್, ಕರಿ ಸುಬ್ಬು, ಯತಿರಾಜ್, ಮುಂತಾದವರು ಇದ್ದಾರೆ. ಚಿತ್ರಕ್ಕೆ ಶ್ರೀಧರ್ ವಿ. ಸಂಭ್ರಮ ಸಂಗೀತ, ಅನಿರುಧ್ ಛಾಯಾಗ್ರಹಣ, ಚೆಲುವ ಮೂರ್ತಿ ಸಂಕಲನ, ಡಾ. ವಿ. ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್ ಹಾಗೂ ಕಿನ್ನಾಲ್ ರಾಜ್ ಸಾಹಿತ್ಯವಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 