ರೈತ ಸಂಘಟನೆಯ ಸಾಮೂಹಿಕ ನೇತೃತ್ವದಲ್ಲಿ 24ರಂದು ಪ್ರತಿಭಟನೆ
Protest on the 24th under the collective leadership of the farmers' organization
ರಾಣೆಬೆನ್ನೂರು 22: ರೈತ ಬೆಳೆದ ಬೆಳೆಗೆ ಯಾವುದೇ ರೀತಿಯ ಸೂಕ್ತ ಬೆಂಬಲ ಬೆಲೆ ದೊರೆಯದೆ ರೈತ ಸಮುದಾಯ ಅತೀವ ಸಂಕಷ್ಟಕೀಡಾಗಿ, ರೈತರು ನಿತ್ಯವೂ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಈ ಕೂಡಲೇ ಸರ್ಕಾರ ಮುಂದಾಗಿ ಬೆಳೆದ ಬೆಳೆಗೆ ಸೂಕ್ತ ಬೆಂಬಲ ದರವನ್ನು ಘೋಷಿಸಬೇಕು ಎಂದು ಒತ್ತಾಯಿಸಿ ಇದೇ ನವೆಂಬರ್ 24, 2025 ರಂದು ನಗರದಲ್ಲಿ ವಿವಿಧ ರೈತ ಪರ ಸಂಘಟನೆಗಳ ನೇತೃತ್ವದಲ್ಲಿ ಹೋರಾಟ, ಪ್ರತಿಭಟನೆ ನಡೆಸಲು ಮುಂದಾಗಿರುವುದಾಗಿ ರೈತ ಸಂಘದ ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಹೇಳಿದರು. ಅವರು ನಗರ ಪ್ರವಾಸಿ ಮಂದಿರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಸದ್ಯದ ಸ್ಥಿತಿಯಲ್ಲಿ ಮೆಕ್ಕೆಜೋಳ ಕನಿಷ್ಠ 3000, ಸಾವಿರ ಬೆಂಬಲ ಬೆಲೆ ಮತ್ತು ಖರೀದಿ ಕೇಂದ್ರ ಸ್ಥಾಪನೆಗೆ ಮುಂದಾಗಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ರೈತ ದೇಶದ ಬೆನ್ನೆಲುಬು ಎನ್ನುವ ಸರ್ಕಾರಗಳು ಬೆಂಬಲ ಬೆಲೆ ಘೋಷಿಸದೆ ರೈತರನ್ನು ಮುರಿಯುತ್ತಿವೆ. ಸಾಲ ಸೂಲ ಮಾಡಿ ಬೆಳೆದ ಬೆಳೆಗೆ ಬೆಲೆ ಬಾರದೆ, ಸಾಗುವಳಿ ಮಾಡಿದ ಖರ್ಚು ಸಹ ಕೈಗೆ ಸಿಗದೆ ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದು ವಿವರಿಸಿದರು. ಹಾವೇರಿ ಜಿಲ್ಲೆಯಲ್ಲಿ ನಗರದ ಮಾರುಕಟ್ಟೆ ಬಹುದೊಡ್ಡಲಾಗಿದೆ . ರೈತರ ಉತ್ಪನ್ನಗಳು ಇಲ್ಲಿಗೆ ಬರುವುದು ಸಾಮಾನ್ಯ.ಸದ್ಯ 1700, ರಿಂದ 1,950 ರೂಗಳ ದರದಲ್ಲಿ ಖರೀದಿ ಮಾಡುತ್ತಿದ್ದು ಇದರಿಂದ ರೈತರಿಗೆ ಲಾಭವೆನ್ನುವುದು ಇಲ್ಲವೇ ಇಲ್ಲ ಎಂದರು. ಮೇಘ ಮಾರುಕಟ್ಟೆ ಕರ್ನಾಟಕದಲ್ಲಿ ದೊಡ್ಡದಾಗಿದೆ ಈ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು ರೈತರಿಗೆ ಸಂತೋಷವಾಗಿದ್ದರೊ, ಮಧ್ಯಾಹ್ನ 3 ರಿಂದ ಸಂಜೆ 5:30ರ ವರೆಗೆ ಮಾತ್ರ ಟೆಂಡರ್ ನಡೆಯುತ್ತಿದೆ. ಇದು ಮುಂಜಾನೆ ಎಂದಲೇ ಆರಂಭವಾಗಬೇಕು. ಇದರಿಂದ ತಾಲೂಕಿನ ರೈತರಿಗೆ ಅನುಕೂಲವಾಗಲಿದೆ ಎಂದರು. ಬೆಂಬಲ ಬೆಲೆ ಘೋಷಣೆ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಪಿಡಿಎಸ್ ನಿಂದ ರೈತರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಕೂಡಲೇ ಮನವಿಗೆ ಸ್ಪಂದಿಸಿ ರೈತರ ಸಮಸ್ಯೆಗಳನ್ನು ಪರಿಹರಿಸಬೇಕು ಇಲ್ಲವಾದಲ್ಲಿ ಸೋಮವಾರ 24, 2025 ರಂದು ಮುಂಜಾನೆ 11, ಗಂಟೆಗೆ ನಗರ ಹೊರವಲಯದ ಮೇಘಾ ಮಾರುಕಟ್ಟೆ ಎದುರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಲು ರೈತ ಸಂಘಟನೆಗಳು ನಿರ್ಧರಿಸಿರುವದಾಗಿ ಎಚ್ಚರಿಸಿದರು. ಮಾಧ್ಯಮಗೋಷ್ಠಿಯಲ್ಲಿ ರೈತ ಮುಖಂಡರಾದ ಮಹೇಶ ಕೊಟ್ಟೂರು, ರಾಜಶೇಖರ ದೂದಿಹಳ್ಳಿ, ಮಂಜುನಾಥ್ ಸಂಭೋಜಿ, ರಾಜೇಶ್ ಅಂಗಡಿ, ಬಸವರಾಜ ಮೇಗಳಗೇರಿ, ಲಲಿತಾ ಲಮಾಣಿ, ನೀಲಮ್ಮ ಮೇಗಳಗೇರಿ, ಅಮೀದಾಬಾನಿ ಶಿಡೇನೂರ, ಚಂದ್ರಶೇಖರ ಪಾಟೀಲ್, ನಿಂಗಪ್ಪ ಸತ್ಯಪ್ಪನವರ, ಪರಸಪ್ಪ ಚಿತ್ತಣ್ಣನವರ ಮತ್ತಿತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 