ಗೋವಿನಜೋಳ ಬೆಂಬಲ ಬೆಲೆಗಾಗಿ ರೈತ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ
Protest led by farmers' union for support price for cowpea
ಶಿಗ್ಗಾವಿ 25 : ಜಿಲ್ಲೆಯಲ್ಲಿ ರೈತರು ಬೆಳೆದಿರುವ ಗೋವಿನಜೋಳಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನ್ಯಾಯಯುತವಾದ ಬೆಂಬಲ ಬೆಲೆ ಹಾಗೂ ಪ್ರೋತ್ಸಾಹಧನವನ್ನು ನೀಡುವ ಕುರಿತು ಕೂಡಲೇ ತೀರ್ಮಾನ ಕೈಗೊಳ್ಳಬೇಕು ಎಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತಸಂಘ ಹಾಗೂ ತಾಲೂಕಿನ ರೈತ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಎಪಿಎಂಸಿಯಿಂದ ಚನ್ನಮ್ಮ ಸರ್ಕಲ್‌ವರೆಗೆ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಾಲೂಕಾ ತಹಶೀಲ್ದಾರ ಯಲ್ಲಪ್ಪ ಗೊಣೆಣ್ಣವರ ಅವರ ಮೂಲಕ ಮನವಿ ಅರ್ಿಸಲಾಯಿತು. ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪೂರ ಮಾತನಾಡಿ, ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್ ಗೋವಿನ ಜೋಳಕ್ಕೆ ವೈಜ್ಞಾನಿಕ ಬೆಂಬಲ ಬೆಲೆ 2,400 ರೂ.ಗಳನ್ನು ನಿಗದಿಪಡಿಸಿದ್ದೇವೆಂದು 308 ಕೊಚ್ಚಿಕೊಳ್ಳುತ್ತಿದೆ. ಆದರೆ ಇದು ಸಮಂಜಸವಲ್ಲ, ನ್ಯಾಯಸಮ್ಮತವಲ್ಲ. ಆವೈಜ್ಞಾನಿಕವಾದ ಬೆಂಬಲ - ಬೆಲೆಯನ್ನು ಕೇಂದ್ರ ನಿಗದಿಪಡಿಸಿದೆ. ಈಗ ಕೇಂದ್ರ ಸರ್ಕಾರ ರೈತರ ಸಂದಿಗ್ಧ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಈ ಪೂರ್ವದಲ್ಲಿ ಘೋಷಣೆ ಮಾಡಿರುವ ಬೆಂಬಲ ಬೆಲೆಯನ್ನು ಮರು ಪರೀಶೀಲಿಸಿ ಕ್ವಿಂಟಲ್ ಗೋವಿನ ಜೋಳಕ್ಕೆ 3000 ರೂ. ನಿಗದಿಪಡಿಸಲೇಬೇಕು.
ಇದನ್ನು ಕೇಂದ್ರ ಚಾಚೂ ತಪ್ಪದೇ ಜಾರಿಗೆ ತರಲೇಬೇಕು ಎಂದರು. ಅಖಂಡ ಕರ್ನಾಟಕ ರೆ ಕ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ ಬಾರ್ಕಿ ಮಾತನಾಡಿ, ರಾಜ್ಯ ಸರ್ಕಾರವು ಪ್ರತಿ ಕ್ವಿಂಟಲ್ ಗೋವಿನಜೋಳಕ್ಕೆ ಪ್ರೋತ್ಸಾಹಧನವಾಗಿ 600 ರೂ. ಗಳನ್ನು ನಿಗದಿಪಡಿಸಿ ಗೋವಿನಜೋಳ ಬೆಳೆದ ರಾಜ್ಯ ರೈತ ವರ್ಗಕ್ಕೆ ಕೂಡಲೇ ಪ್ರೋತ್ಸಾಹಧನ ಜಾರಿಗೊಳಿಸಬೇಕು, ಹಾವೇರಿ ಜಿಲ್ಲೆಯ ರಾಜ್ಯದ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗೋವಿನಜೋಳವನ್ನು ಬೆಳೆಯುತ್ತಿದ್ದು, ಇದು ಹಾವೇರಿ ಜಿಲ್ಲೆಯ ರೈತರ ಪ್ರಧಾನ ವಾಣಿಜ್ಯ ಬೆಳೆಯಾಗಿರುತ್ತದೆ. ಬೆಳೆಯಾಗಿರುತ್ತದೆ. ಆದರೆ ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಗೋವಿನಜೋಳ ಬೆಳೆಯನ್ನು ಬೆಳೆದು ರೈತರು ಕಂಗಾಲಾಗಿದ್ದಾರೆ. ಈಗಿನ ರೈತರ ಕೆಟ್ಟ ಪರಿಸ್ಥಿತಿಯಲ್ಲಿ ಗೋವಿನಜೋಳ ಬೆಳೆದ ರೈತ ವರ್ಗಕ್ಕೆ ನಿರಾಶೆಯಾಗಿದೆ. ಬೆಳೆಗಾಗಿ ಮಾಡಿದ ಸಾಲ ಹೇಗೆ ತೀರಿಸಬೇಕೆಂದು ಹೇಳತೀರದ್ದಾಗಿದೆ. ಸಾಕಷ್ಟು ಪ್ರಮಾಣದಲ್ಲಿ ಗೋವಿನಜೋಳವನ್ನು ಬೆಳೆದು ರೈತರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದರು.
ರೈತ ಮುಖಂಡ ಬಸಲಿಂಗಪ್ಪ ನರಗುಂದ ಮಾತನಾಡಿ, ಹೆಚ್ಚಿನ ಪ್ರಮಾಣದಲ್ಲಿ ರೈತರು ಗೋವಿನಜೋಳ ಬೆಳೆದಿದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಿಲ್ಲೆಯಲ್ಲಿ ಪ್ರತಿ ಗ್ರಾಮ ಪಂಚಾಯತಿಯೊಂದರಂತೆ ಗೋವಿನಜೋಳ ಖರೀದಿ ಕೇಂದ್ರವನ್ನು ತೆರೆದು ಗೋವಿನ ಜೋಳ ಖರೀದಿಗೆ ಅನುಕೂಲ ಕಲ್ಪಿಸಬೇಕು ಎಂದರು. ಧರ್ಮಗೌಡ ಹೊನ್ನಾಗೌಡ್ರ, ಜೆಡಿಎಸ್ ತಾಲೂಕಾ ಅಧ್ಯಕ್ಷ ಈರಣ್ಣ ನವಲಗುಂದ, ಮಂಜುನಾಥ ಕಂಕಣವಾಡ, ನಾಗರಾಜ ದೇಸಾಯಿ, ಗೀರೀಶ ಪಾಟೀಲ, ಕರಬಸಪ್ಪ ಆಲೂರ, ಶಿವಪ್ಪ ಕಲ್ಲೂರ, ಪ್ರಕಾಶ ನಿಕ್ಕಂ, ಪ್ರಕಾಶ ದೇವಗಿರಿ, ಸಂಜೀವ ಮಣ್ಣಣ್ಣವರ, ಚನ್ನವೀರಯ್ಯ ಹೊಸಮಠ, ರಾಮನಗೌಡ ಗಾಳಿಗೌಡ್ರ, ಬಸಯ್ಯ ಪೂಜಾರ, ಶಿವಾನಂದ ಜೇಡಿಮಠ, ಎಂ.ಎನ್. ಸವೂರ, ರಾಮನಗೌಡ್ರ ಪಾಟೀಲ ಸೇರಿದಂತೆ ರೈತ ಒಕ್ಕೂಟದ ಮುಖಂಡರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 