ರಾಜೀನಾಮೆ ಒತ್ತಾಯಿಸಿ ಪ್ರತಿಭಟನೆ: ನಕಲಿ ಸಹಿ ಆರೋಪದ ಬಗ್ಗೆ ತನಿಖೆಗೆ ಆಗ್ರಹ
Protest demanding resignation: Demand for inquiry into fake signature allegations.
ಲೋಕದರ್ಶನ ವರದಿ
ಗದಗ .೨೪: ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷರ ನೇತೃತ್ವದಲ್ಲಿ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಕಳೆದ ಕೆಲ ದಿನಗಳಿಂದ ನಡೆದ ಪ್ರತಿಭಟನೆ ವಿಶೇಷ ಹಾಗೂ ವಿಭಿನ್ನವಾಗಿತ್ತು.
ನಾಗೇಂದ್ರ ಅವರ ಮೇಲಿರುವ ಆರೋಪಗಳ ಸತ್ಯಾಸತ್ಯತೆ ತಿಳಿಯಲು ವಿವಿಧ ಸಂಘಟನೆಗಳು ಕಾರ್ಯನಿರ್ವಹಿಸುತ್ತಿದ್ದು, ಸಂಘಟನೆಗಳಿAದ ವರದಿ ಬಂದಿಲ್ಲವೆAದು ತಿಳಿದಿದ್ದರೂ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗಿದೆ. ಇದೇ ವೇಳೆ ಗದಗ-ಬೆಟಗೇರಿ ನಗರಸಭಾ ಸದಸ್ಯರು ನಕಲಿ ಸಹಿ ಮಾಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸದಸ್ಯತ್ವ ಅನರ್ಹಗೊಳಿಸಿದ ಸಂದರ್ಭದಲ್ಲಿ, ತಾವು ನೇರವಾಗಿ ತಮ್ಮ ಸದಸ್ಯರಿಂದ ರಾಜೀನಾಮೆ ಪಡೆದು ನಗರಸಭೆ ಹಾಗೂ ಅವಳಿ ನಗರದ ಅಭಿವೃದ್ಧಿಗೆ ಸಹಕರಿಸಬಹುದಿತ್ತೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ಈ ರೀತಿಯ ಹೋರಾಟಕ್ಕೆ ಪಕ್ಷದವರು ನೀಡಿರುವ ಜಿಲ್ಲೆಯ ಕಾಳಜಿಗೆ ತಕ್ಕಂತೆ ಸ್ಥಳೀಯ ಜವಾಬ್ದಾರಿಯನ್ನೂ ಹೆಚ್ಚಿಸಿಕೊಳ್ಳಬೇಕು. ಗದಗ ಜಿಲ್ಲೆ ಹಾಗೂ ಗದಗ-ಬೆಟಗೇರಿ ಅವಳಿ ನಗರದ ಹಲವು ಸಮಸ್ಯೆಗಳನ್ನು ಕೈಗೆತ್ತಿಕೊಂಡು, ಸ್ಥಳದಲ್ಲೇ ಪರಿಹಾರ ದೊರೆಯುವವರೆಗೆ ಹೋರಾಟ ನಡೆಸಿದರೆ ಪಕ್ಷಕ್ಕೆ ಸಲ್ಲಿಸಿದ ನಿಜವಾದ ಸೇವೆಯಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
ಕಾಂಗ್ರೆಸ್ ಪಕ್ಷದ ಅವಧಿಯಲ್ಲೂ ಸ್ಥಳೀಯ ನಗರಸಭೆ ಆಡಳಿತವನ್ನು ಸೂಕ್ತವಾಗಿ ಗಮನಿಸಿ, ಉಳಿದಿರುವ ಅವಧಿಯಲ್ಲಿ ಆಡಳಿತ ನಡೆಸಲು ಕಾನೂನಾತ್ಮಕ ಅಂಶಗಳನ್ನು ಕಂಡುಕೊAಡು ಅವಳಿ ನಗರದ ಜನತೆ ಹಾಗೂ ಮತದಾರರ ಚಲಾಯಿಸಿದ ಮತಗಳಿಗೆ ಸ್ಥಳೀಯ ಆಡಳಿತದ ನ್ಯಾಯ ಒದಗಿಸಬೇಕು ಎಂದು ಗದಗ ಜಿಲ್ಲೆ ಹಾಗೂ ಅವಳಿ ನಗರದ ಅಭಿವೃದ್ಧಿ ಮತ್ತು ಸಾಮಾಜಿಕ ಚಿಂತಕರಾದ ವಿಶ್ವನಾಥ ಶೀರಿ ಅಭಿಪ್ರಾಯಪಟ್ಟಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 