ಹೂವಿನಹಡಗಲಿಯಲ್ಲಿ ವಿಶೇಷಚೇತನರು, ಹಿರಿಯ ನಾಗರಿಕರಿಂದ ಪ್ರತಿಭಟನೆ
Protest by differently-abled persons and senior citizens in Hoovina Hadagali
ಹೂವಿನಹಡಗಲಿ 25: ವಿಶೇಷಚೇತನರು ಮತ್ತು ಪಾಲಕರ ಒಕ್ಕೂಟ, ನಗರ ಘಟಕ ಹೂವಿನಹಡಗಲಿ ಹಾಗೂ ತಾಲೂಕಿನ ವಿವಿಧ ವಿಶೇಷಚೇತನರ ಸಂಘಟನೆಗಳ ನೇತೃತ್ವದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಟ್ಟಣದ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸರ್ಕಾರದ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿ ವಿಶೇಷಚೇತನರು ಹಾಗೂ ಹಿರಿಯ ನಾಗರಿಕರಿಗೆ ನೀಡಲಾಗುತ್ತಿದ್ದ ಮಾಸಾಶನವನ್ನು ಸ್ಥಗಿತಗೊಳಿಸಿರುವುದರಿಂದ ಹಡಗಲಿ ತಾಲೂಕಿನ 5,490 ಫಲಾನುಭವಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸುಮಾರು 500ಕ್ಕೂ ಹೆಚ್ಚು ವಿಶೇಷಚೇತನರು ಹಾಗೂ ಹಿರಿಯ ನಾಗರಿಕರು ಮಲ್ಲನಕೇರಿ ಮಠದಿಂದ ಮೆರವಣಿಗೆ ನಡೆಸಿ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಬಳಿಕ ತಹಶೀಲ್ದಾರ್ ಗುರುಬಸವರಾಜ ಅವರಿಗೆ ಮನವಿ ಸಲ್ಲಿಸಿದರು.
ಪ್ರಮುಖ ಬೇಡಿಕೆಗಳು
ಸಿಕಳೆದ ನಾಲ್ಕು ತಿಂಗಳಿಂದ ಬಾಕಿ ಉಳಿದಿರುವ ಮಾಸಾಶನವನ್ನು ತಕ್ಷಣ ಬಿಡುಗಡೆ ಮಾಡಬೇಕು.
ಸಿವಾರ್ಷಿಕ ಆದಾಯ ಮಿತಿ ?32,000 ನಿಬಂಧನೆಯನ್ನು ವಿಶೇಷಚೇತನ ಫಲಾನುಭವಿಗಳಿಗೆ ಸಡಿಲಗೊಳಿಸಬೇಕು.
ಸಿವಿಶೇಷಚೇತನರ ಮಾಸಾಶನವನ್ನು ?5,000ಕ್ಕೆ ಹೆಚ್ಚಿಸಬೇಕು.
ಪ್ರತಿಭಟನೆಯಲ್ಲಿ ತಾಲೂಕು ಒಕ್ಕೂಟದ ಅಧ್ಯಕ್ಷ ಎಸ್. ಚಂದ್ರ್ಪ, ರಾಜ್ಯ ವಿಶೇಷಚೇತನರು ಮತ್ತು ಪಾಲಕರ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ರಂಗಪ್ಪ ದಾಸರ್, ಉಪಾಧ್ಯಕ್ಷ ಜಾಡರ್ ನಿಂಗಪ್ಪ, ನಗರ ಘಟಕದ ಅಧ್ಯಕ್ಷ ಎನ್.ಎಂ. ಕೊಟ್ರೇಶ್, ಉಪಾಧ್ಯಕ್ಷ ದಾದಾ ಖಲಂದರ್, ತಾಲೂಕು ಎಂಆರ್ಡಬ್ಲ್ಯು, ವಿಆರ್ಡಬ್ಲ್ಯು, ಯುಆರ್ಡಬ್ಲ್ಯು ಒಕ್ಕೂಟದ ಅಧ್ಯಕ್ಷ ಎಸ್. ಕೃಷ್ಣನಾಯ್ಕ, ಮಾಜಿ ಅಧ್ಯಕ್ಷ ಎಂ. ಸೋಮಪ್ಪ ಸೇರಿದಂತೆ ಮಂಗಳ, ವಿಜಯಾ, ಚೆನ್ನಬಸಮ್ಮ, ವೀರೇಶ್, ವಿಶ್ವನಾಥ, ಮಂಜುನಾಥ, ಹನುಮಂತಪ್ಪ, ಜಗದೀಶ, ರಾಘವೇಂದ್ರ, ಹಾಲೇಶ್, ಕುರುವಪ್ಪ, ಶಿವಪ್ಪ, ಜಯಪ್ಪ, ಬಸವರಾಜ್ ಹಾಗೂ ಇತರರು ಭಾಗವಹಿಸಿದ್ದರು.
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ
ಬಡ ಅಂಗವಿಕಲ ಸರ್ಫರಾಜ್ ಬಿಸ್ತಿಗೆ ಫೇಸ್ಬುಕ್ ಫ್ರೆಂಡ್ಸ್ ಸರ್ಕಲ್ ತಂಡದಿಂದ ಹೊಸ ವೀಲ್ಚೇರ್ ಉಡುಗೊರೆ
ಅದ್ದೂರಿಯಿಂದ ಜರುಗಿದ ಕೋಣ ಬಿಡುವ ಸಂಪ್ರದಾಯ ಕಾರ್ಯಕ್ರಮ : ಸಂಕೇಶ್ವರ ಮಹಾಲಕ್ಷ್ಮೀ ಜಾತ್ರೆಯ ಚೊಚ್ವಲು ಕಾರ್ಯಕ್ಕೆ ಚಾಲನೆ
ನಂದು ಮುಡಶಿ ಬೆವರು ಸುರಿಸಿ ಸ್ವಂತ ಜಮೀನಿನಲ್ಲಿ ಬೆಳೆದ ಅಕ್ಕಿ, ಜೋಳ ತಂದು ಕೊಟ್ಟಿಲ್ಲ. ಎಲ್ಲಿಂದ ಬಂದಿವೆ, ಆತನ ಸಾತಭಾರ ನನಗೆ ಗೊತ್ತಿದೆ : ಬಸನಗೌಡಾ 