ಖಾನಾಪುರ ತಾಲೂಕ ತಹಶೀಲ್ದಾರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ
Protest by besieging the Khanapur Taluk Tahsildar's office
ಖಾನಾಪುರ 01 : ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ ಸಂಘಟನೆಯಿಂದ ಖಾನಾಪುರ ತಾಲೂಕ ತಹಶೀಲ್ದಾರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಯಿತು. ನೆರಸಿ ಗ್ರಾಮಕ್ಕೆ ನೀಡಿದ ಹಿಡಿಕಲ್ ಡ್ಯಾಮ್ 4 ಎಕರೆ ಭೂಮಿಯಲ್ಲಿ ಸ್ಮಶಾನಕ್ಕೆ ಹಾಗೂ ಇನ್ನಿತರ ಗ್ರಾಮದ ಜನರ ಅನುಕೂಲಕ್ಕೆ ನೀಡಿದ್ದು. ಆ ಗ್ರಾಮದ ಒಂದು ಕುಟುಂಬ ಆ ಜಮೀನಿನಲ್ಲಿ ಒತ್ತುವರಿಯಾಗಿ ಸಾಗುವಳಿ ಮಾಡುತ್ತಿದ್ದು ಈ ವಿಚಾರವಾಗಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಬೇಜವಾಬ್ದಾರಿ ವಹಿಸಿದ ಖಾನಾಪುರ ತಹಶೀಲ್ದಾರ ಕಚೇರಿ ವಿರುದ್ಧ ರಾಜ್ಯಾದ್ಯಕ್ಷರಾದ ಮಹೇಶ್ ಶೀಗಿಹಳ್ಳಿ ರವರ ನೇತೃತ್ವದಲ್ಲಿ ಪ್ರತಿಭಟನೆ ಮಾಡಿ ಕಚೇರಿಗೆ ಮುತ್ತಿಗೆ ಹಾಕಲಾಯಿತು. ಸ್ಥಳಕ್ಕೆ ದವಡಾಯಿಸಿದ ತಹಶೀಲ್ದಾರ ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಜರುಗಿಸುತ್ತೇನೆ ಎಂದು ತಿಳಿಸಿದರು. ಈ ಸಂದರ್ಬದಲ್ಲಿ (ಖಾನಾಪುರ ತಾಲೂಕಿನ ಅದ್ಯಕ್ಷರಾದ ಆನಂದ ಊದಿ )(ತಾಲೂಕು ಗೌರವ ಅಧ್ಯಕ್ಷ ರಾಜು ನಾಯಕ ) (ಬೆಳಗಾವಿ ಗ್ರಾಮೀಣ ಅಧ್ಯಕ್ಷ ಲಕ್ಷ್ಮಣ ಬಾಗಡಿ)(ಬೆಳಗಾವಿ ಜಿಲ್ಲಾ ಗೌರವ ಅಧ್ಯಕ್ಷ ರಾಮ್ ಪೂಜಾರಿ ) (ರುದ್ರ್ಪ ಮುಖಾರಿ ಖಾನಾಪುರ ನಗರ ಅದ್ಯಕ್ಷರು)(ಸುನೀಲ ಬಾಳನ್ನವರ ಖಾನಾಪುರ ನಗರ ಉಪಾದ್ಯಕ್ಷ )(ಕಾರ್ಯದರ್ಶಿ ಹನಮಂತ ನಾಯಕ)(ಶುಭಂ ತಳವಾರ)(ಆಕಾಶ್ ಸರಿಕಾರ)(ರೋಹಿತ್ ಅರಳಗುಂದಿ ಹಾಗೂ ಇನ್ನು ಉಳಿದ ಪದಾದಿಕಾರಿಗಳು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 