ಅಮಿತ ಶಾ ಹೇಳಿಕೆ ಖಂಡಿಸಿ ಪ್ರತಿಭಟನೆ

Protest against Amita Shah's statement

ರಾಯಬಾಗ 23: ಡಾ.ಬಿ.ಆರ್‌. ಅಂಬೇಡ್ಕರರವರ ಬಗ್ಗೆ ಸದನದಲ್ಲಿ ಕೇಂದ್ರ ಗೃಹ ಸಚಿವ ಅಮಿತ ಶಾ ಅವರು ನೀಡಿರುವ ಅವಹೇಳನಕಾರಿ ಹೇಳಿಕೆ ಖಂಡಿಸಿ ಸೋಮವಾರ ತಾಲೂಕಿನ ವಿವಿಧ ದಲಿತ ಸಂಘಟನೆಗಳಿಂದ ಪಟ್ಟಣದ ಅಂಬೇಡ್ಕರ ವೃತ್ತದಿಂದ ಝೆಂಡಾ ಕಟ್ಟೆವರೆಗೆ ಪ್ರತಿಭಟನೆ ನಡೆಸಿ, ಝೆಂಡಾ ಕಟ್ಟೆ ಹತ್ತಿರ ಮಾನವ ಸರಪಳಿ ನಿರ್ಮಿಸಿ, ರಸ್ತೆ ಬಂದ ಮಾಡಿ, ಟೈಯರಗೆ ಬೆಂಕಿ ಹಚ್ಚಿ ಅಮಿತ ಶಾ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. 

ನಂತರ ತಹಶೀಲ್ದಾರ ಸುರೆಶ ಮುಂಜೆ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.ವಿಶ್ವ ರತ್ನ ಡಾ. ಬಾಬಾಸಾಹೇಬ ಅಂಬೇಡ್ಕರರ ಹೆಸರನ್ನು ಪ್ರಸ್ತಾಪಿಸುವುದರ ಬದಲಾಗಿ ದೇವರ ಹೆಸರನ್ನು ಪ್ರಸ್ತಾಪಿಸಿದರೆ ಏಳು ಜನ್ಮ ಸ್ವರ್ಗ ಸಿಗುತ್ತಿತ್ತು ಎಂದು  ಹೇಳುವ ಮೂಲಕ ಅಂಬೇಡ್ಕರರವರಿಗೆ ಅಗೌರವ ತೋರಿರುವ ಗೃಹ ಸಚಿವ ಅಮಿತ ಶಾ ಅವರನ್ನು ಕೂಡಲೇ ಗೃಹ ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದರು.   ತೆಗೆದು ಹಾಕುವ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. 

ಸಿಪಿಐ ಬಿ.ಎಸ್‌.ಮಂಟೂರ, ಪಿಎಸ್‌ಐ ಶಿವಶಂಕರ ಮುಕರಿ, ವಕೀಲರಾದ ರಾಜು ಶಿರಗಾಂವೆ, ದಲಿತ ಮುಖಂಡರಾದ ನಾಮದೇವ ಕಾಂಬಳೆ   ಸಿದ್ದಾರ್ಥ ಸಿಂಗೆ, ಲೋಕೇಶ ಕಾಂಬಳೆ, ದೀಲಿಪ ಪಾಯನ್ನವರ, ಗಣೇಶ ಕಾಂಬಳೆ, ಶಶಿಕಾಂತ ಕಾಂಬಳೆ, ಅಶೋಕ  ಶಿಂಗೆ,  ಹಾಜಿ ಮುಲ್ಲಾ, ಶ್ರಾವಣ ಕಾಂಬಳೆ, ಉತ್ತಮ ಕಾಂಬಳೆ, ಕಾಡೇಶ ಐಹೋಳೆ, ಸಾಗರ ಜೆಂಡೆನ್ನವರ, ಮಹಾವೀರ ಸಾನೆ,  ಅನೀಲ ಮೋಹಿತೆ, ಪರಶುರಾಮ ಟೊನಪೆ, ಜ್ಯೋತಿಬಾ ಮಾನೆ, ಮಹೇಶ ಕಾಂಬಳೆ,  ಸುಜಾತಾ ಕಾಂಬಳೆ, ಲಕ್ಕವ್ವಾ ಜೋಡಟ್ಟಿ,  ವಿನಾಯಕ ಕಾಂಬಳೆ, ರಾಜು ಅಸೋದೆ,  ಉಮೇಶ ಸಿಂಗೆ, ಪ್ರೇಮ ಸಾನೆ,  

ರಾಕೇಶ್ ಅವಳೆ ಹಾಗೂ ತಾಲೂಕಿನ ವಿವಿಧ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು, ಚಿಂತಕರು, ದಲಿತಪರ ಹೋರಾಟಗಾರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.