ಕನ್ನಡ ನಾಡು ನುಡಿ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ-ಗಾಯಕ ಗುಲ್ಸನಸಿಂಗ

ಕನ್ನಡ ನಾಡು ನುಡಿ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ-ಗಾಯಕ ಗುಲ್ಸನಸಿಂಗ Protecting the Kannada language is everyone's duty - Singer Gulsanasinghe

ಕನ್ನಡ ನಾಡು ನುಡಿ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ-ಗಾಯಕ ಗುಲ್ಸನಸಿಂಗ 

ಧಾರವಾಡ 15: ಪ್ರತಿಷ್ಠಾನದ ಎಲ್ಲಾ ಪದಾಧಿಕಾರಿಗಳು ಮತ್ತು ಯುವ ಚಿಂತನಾ ಸಮಾವೇಶದ ಪೂರಕವಾದ ವಾತಾವರಣದಲ್ಲಿ ಯುವ ಸಮುದಾಯಕ್ಕೆ ಕನ್ನಡ ನಾಡು, ನುಡಿ ರಕ್ಷಣೆ  ಉತ್ತಮ ವಾತಾವರಣ ನಿರ್ಮಾಣ ನಡೆದಿದ್ದು, ಇದು ನಾಡಿನ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಬೇಕು ಎಂದು ಗಾಯಕ ಗುಲ್ಸನಸಿಂಗ ಎನ್  ಹೇಳಿದರು.ಅವರು ಪಂ ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಧಾರವಾಡ ವತಿಯಿಂದ  ಕಲೆ, ಸಂಸ್ಕೃತಿ, ಉಪನ್ಯಾಸ, ಚಿತ್ರಕಲೆ, ಪರಿಸರ, ಸಂಗೀತ- ಸಾಹಿತ್ಯಗಳ ಚಿಂತನೆಯ 2ನೇ ಯುವ ಚಿಂತನಾ ಸಮಾವೇಶ 2025ರ ಅಂಗವಾಗಿ ಕನ್ನಡ ಗೀತೆಗಳ ಗಾಯನ ಸ್ಪರ್ಧೆಯನ್ನು ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ಹಮ್ಮಿಕೊಂಡ ಕಾರ್ಯಕ್ರಮಕ್ಕೆಚಾಲನೆ ನೀಡಿ ಮಾತನಾಡುತ್ತಾ  ಕನ್ನಡ ನಾಡು-ನುಡಿ, ಪರಂಪರೆ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು. ಅಂತಹ ಕಾರ್ಯವನ್ನು ಪ್ರತಿಷ್ಠಾನದ ಮಾರ್ತಾಂಡಪ್ಪ ಕತ್ತಿ ಅವರ ನೇತ್ರತ್ವದಲ್ಲಿ ನಡೆಯುತ್ತಿರುವುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.ಈ ಕಾರ್ಯಕ್ರಮದಲ್ಲಿ ನಟ,ನಿರ್ದೇಶಕ ಡಾ ಶಶಿಧರ ನರೇಂದ್ರ ಸಾಧಕರಿಗೆ ಸನ್ಮಾನಿಸಿ ಮಾತನಾಡಿ ನಾಡಿನ ಯುವ ಜನತೆ ರಾಜ್ಯದ ನೆಲ, ಜಲ, ಭಾಷೆ, ಸಾಂಸ್ಕೃತಿಕ ಪರಂಪರೆಯ ಮಹತ್ವ ಅರಿತು ನಮ್ಮ ಸಂಸ್ಕೃತಿ ರಕ್ಷಣೆ ಮಾಡಲು ಮುಂದಾಗಬೇಕು. ಅಂದಾಗ ಮಾತ್ರ ಪ್ರತಿಷ್ಠಾನದ ಕಾರ್ಯ ಯಶಸ್ವಿಯಾಗಿ ನಡೆದಂತೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಂಖಡರಾದ   ಸವಿತಾ ಅಮರಶೆಟ್ಟಿ ಮಾತನತಾಡಿ ಕಲೆ, ಸಂಗೀತ, ಸಾಹಿತ್ಯದಲ್ಲಿ ಅತ್ಯಂತ ಶ್ರೀಮಂತಿಕೆಯನ್ನು ಹೊಂದಿದ ಧಾರವಾಡದಲ್ಲಿ ಹೆಚ್ಚು ಹೆಚ್ಚು ಯುವಕರನ್ನು ಜಾಗೃತಿಮಾಡಬೇಕು ಆ ಕಾರ್ಯವನ್ನು ಪ್ರತಿಷ್ಠಾನ ಮಾಡುತ್ತಿದೆ ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಶಹರ ಘಟಕದ ಅಧ್ಯಕ್ಷರಾದ   ಶಾಂತಾ  ಶೀಲವಂತ, ಪ್ರತಿಷ್ಠಾನದ ಅಧ್ಯಕ್ಷರಾದ ಎಮ್ ಎಸ್ ಫರಾಸ್, ರವಿ ಹೊಸೂರ,   ರೂಪಾ ಕುಲಮೆ ಮಾತನಾಡಿದರು.ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪುಟ್ಟಾಣಿ ಸಾಧಕರಾದ ಕು.ಲಕ್ಷ್ಮಿ ಶಿವಪ್ಪ ರಾಯ ಕೊಪ್ಪ, ಕು. ರೇಣುಶ್ರೀ ಎಮ್ ಕೊಡ್ಲಿ, ಕು.ಗೌರಿ ನಾಗಲಿಂಗ ಲೋಹಾರ್, ಕು. ಅಕ್ಸಾ ಸಿ ಬಾಬಾಜಾನ್ ಮುಲ್ಲಾ, ಕು.ಶಾಂಭವಿ ಶಿವಕುಮಾರ್ ದೇಗಾವಿಮಠ ಇವರನ್ನು ಸನ್ಮಾನಿಸಲಾಯಿತು.ಕನ್ನಡ ಗೀತ ಗಾಯನ ಸ್ಪರ್ಧೆಯಲ್ಲಿ ನಿರ್ಣಾಯಕರಾಗಿ ಬಸವರಾಜ ಗೊರವರ ಕುಮುದ್ವತಿ ಭರಮಗೌಡರ, ಮಲ್ಲನಗೌಡ ಪಾಟೀಲ ಕಾರ್ಯ ಮಾಡಿದರು. ಸಂಚಾಲಕರಾದ   ಪ್ರಮೀಳಾ ಜಕ್ಕಣ್ಣವರ ನಿರೂಪಿಸಿದರು.   ನೇಹಾ ಬುದ್ನಿ ಸ್ವಾಗತಿಸಿದರು. ಮಾರ್ತಾಂಡಪ್ಪ ಕತ್ತಿ ಪ್ರಸ್ತಾವಿಕವಾಗಿ ಮಾತನಾಡಿದರು. ಸುರೇಶ ಬೆಟಗೇರಿ ವಂದಿಸಿದರು.  ಈ ಕಾರ್ಯಕ್ರಮದಲ್ಲಿ 25 ಮಹಿಳಾ ತಂಡಗಳು ಭಾಗವಹಿಸಿ ಯಶಸ್ವಿಯಾಗಿ ನಡೆಸಲು ಸಹಕರಿಸಿದರು.ಮಾರ್ತಾಂಡಪ್ಪ ಎಮ್ ಕತ್ತಿಶ್ರೀವಿಜಯ ಸಾಹಿತ್ಯ ಪ್ರಶಸ್ತಿ ಪುರಸ್ಕೃತರು