ಜಾನಪದ ಕಲೆಯ ರಕ್ಷಣೆ ಪ್ರತಿಯೊಬ್ಬರ ಹೊಣೆ
Protecting folk art is everyone's responsibility.
ಯರಗಟ್ಟಿ 07: ಜಾನಪದ ಕಲೆಯ ರಕ್ಷಣೆ ಪ್ರತಿಯೊಬ್ಬರ ಹೊಣೆ ಎಂದು ಗ್ರಾಮದ ಹಿರಿಯರಾದ ಪರಶುರಾಮ ಸಿಂಗನ್ನವರ ಹೇಳಿದರು.ಸಮೀಪದ ಯರರ್ಝವಿ ಗ್ರಾಮದ ಅಂಬಾದೇವಿ ಜಾತ್ರಾ ನಿಮಿತ್ಯವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಶ್ರೀ ನಾಟ್ಯ ಸರಸ್ವತಿ ಕಲಾ ಪೋಷಕ ಸಂಘ ಹಲಗ ಇವರ ಆಶ್ರಯದಲ್ಲಿ ಜಾನಪದ ಕಲಾ ಮೇಳ ಹಾಗೂ ಬಯಲಾಟ ಉತ್ಸವ 2026 ಉದ್ಘಾಟಿಸಿ ಮಾತನಾಡಿದರು. ಇಂದು ಹೆಚ್ಚಿನ ಜನರು ಚಲನಚಿತ್ರ ಟಿವಿ ವ್ಯಾಮೋಹದ ಮೂಡಿಗೆ ಸಿಲುಕಿದರಿಂದ ನಾನಾ ಕಲೆಗಳು ಜೀವನದಿಂದ ದೂರಾಗುತ್ತಿವೆ ಗ್ರಾಮೀಣ ಪ್ರದೇಶದಲ್ಲಿ ಇಂತ ಜನಪದ ಕಲಾ ಮೇಳ ಏರಿ್ಡಸುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಸಾನಿಧ್ಯವನ್ನು ತಿಪ್ಪಯ್ಯ ಹಿರೇಮಠ ವಹಿಸಿದರು, ರೂಪ ಸುತಾರ ಅಧ್ಯಕ್ಷರು ನಾಟ್ಯ ಸರಸ್ವತಿ ಕಲಾ ಪೋಷಕ ಸಂಘ ಹಲಗ ನೇತೃತ್ವ ವಹಿಸಿದರು, ಅತಿಥಿಗಳಾಗಿ ಗೋವಿಂದಪ್ಪ ಪತ್ತಾರ್ಳ, ಸಿದ್ದಪ್ಪ ಭೂಷಿ, ಬಯಲಾಟ ಕಲಾವಿದರಾದ ಈಶ್ವರಚಂದ್ರ ಬೆಟಿಗೇರಿ, ಜಾನಪದ ಕಲಾವಿದರಾದ ಮಾರುತಿ ಮಾಳಗಿ, ಲಕ್ಷ್ಮಣ ಇಮ್ಮಡಿ, ಚಿದಾನಂದ ಬಡಿಗೇರ, ಕಮಲಸಾಬ ನದಾಫ, ಬಾಳಪ್ಪ ಮೆಟಗುಂಪಿ, ಚಾಯಪ್ಪ ಸಿಂಗನವರ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ನಂತರ ನಡೆದ ಕಲಾ ಮೇಳದಲ್ಲಿ ರಮೇಶ ಪೂಜಾರಿ ಹಾಗೂ ಸಂಗಡಿಗರಿಂದ ಗೀಗಿ ಪದ ಹಾಗೂ ಕಣ್ಣಮ್ಮದೇವಿ ಗಾಯನ ಸಂಘ ಇವರಿಂದ ಡೊಳ್ಳಿನ ಪದ, ಶ್ರೀ ಬಾಳೆಯ ಸ್ವಾಮಿ ಭಜನಾ ಮಂಡಳ ಇವರಿಂದ ಭಜನಾ ಪದ ಚಿದಾನಂದ ಬಡಿಗೇರ ಇವರಿಂದ ತತ್ವಪದ ದುರ್ಗಪ್ಪ ಮರಿಯಪ್ಪಗೊಳ ಇವರಿಂದ ಕನಿವಾದನ ಶ್ರೀ ದುರ್ಗಾದೇವಿ ನಾಟ್ಯ ಸಂಘ ಇವರಿಂದ ಸಂಗ್ಯಾ ಬಾಳ್ಯ ಸಣ್ಣಾಟ ಶ್ರೀ ಬಲ ಭೀಮ ನಾಟ್ಯ ಸಂಘ ಇವರಿಂದ ಶ್ರೀ ನಿಜಗುಣ ಶಿವಯೋಗಿ ಎಂಬ ಪೌರಾಣಿಕ ನಾಟಕ ಜರುಗಿದವು. ಯಲ್ಲಪ್ಪ ನಾಯ್ಕರ ಕಾರ್ಯಕ್ರಮ ನಿರೂಪಿಸಿದರು ಶ್ರೀಕಾಂತ ಹರಿಜನ ವಂದಿಸಿದರು.
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್
ಬಹುಕೋಟಿ ವಂಚನೆ : ನೀಲಣ್ಣವರ, ಪತ್ನಿ ಸೇರಿ ಆಪ್ತರ ಕಚೇರಿ, ನಿವಾಸಗಳ ಮೇಲೆ ಇಡಿ ದಾಳಿ 