ಮಕ್ಕಳ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ: ಯೋಗಾನಂದ ಲೇಬಗೇರಿ

ಮಕ್ಕಳ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ: ಯೋಗಾನಂದ ಲೇಬಗೇರಿ  Protecting children's rights is everyone's primary duty: Yogananda Lebageri

                ಕೊಪ್ಪಳ 19: ಪ್ರತಿಯೊಬ್ಬ ಮಕ್ಕಳಿಗೆ ಇರುವ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬರು ಆದ್ಯ ಕರ್ತವ್ಯವಾಗಿದೆ ಎಂದು ಗ್ರಾಮ ಪಂಚಾಯತ ಅಧ್ಯಕ್ಷರಾದ ಯೋಗಾನಂದ ಲೇಬಗೇರಿ ಹೇಳಿದರು. ಅವರು ತಾಲೂಕಿನ ಬಹದ್ದೂರಬಂಡಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ್ನು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಮಕ್ಕಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮತ್ತು ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗ್ಗೆ ಮಾತನಾಡಲು ಮಕ್ಕಳ ಹಕ್ಕುಗಳ ಗ್ರಾಮ ಸಭೆಯು ಒಂದು ಉತ್ತಮ ವೇದಿಕೆಯಾಗಲಿದೆ. ಅಲ್ಲದೇ ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವುದಲ್ಲದೇ ಅವುಗಳ ರಕ್ಷಣೆ ಮಾಡುವ ಕೆಲಸ ಪ್ರತಿಯೊಬ್ಬರದಾಗಿದೆ.

                ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ್ನು ಆಯೋಜನೆ ಮಾಡುವುದರಿಂದ ಶಾಲೆಯಲ್ಲಿನ ಭೌತೀಕ ಸಮಸ್ಯೆಗಳ ಜೊತೆಗೆ ಗ್ರಾಮದಲ್ಲಿನ ಬಾಲ್ಯ ವಿವಾಹ ತಡೆಗಟ್ಟುವಿಕೆ, ಸಮುದಾಯದ ಅಭಿವೃದ್ದಿ, ಆರೋಗ್ಯ ಸೇರಿದಂತೆ ವಿವಿಧ ವಿಚಾರಗಳನ್ನು ಚರ್ಚೆ ಮಾಡುವುದರ ಜೊತೆಯಲ್ಲಿ ಪರಿಹಾರ ಕಂಡುಕೊಳ್ಳು ಸಾಧ್ಯವಾಗುತ್ತದೆ ಎಂದು ಹೇಳಿದರು. ನಿಕಟಪೂರ್ವ ಬಹದ್ದೂರಬಂಡಿ ಸಿ.ಆರ್‌.ಪಿ.ಹನುಮಂತಪ್ಪ ಕುರಿ ಮಾತನಾಡುತ್ತಾ, ಶೈಕ್ಷಣಿಕ ಅಭಿವೃದ್ದಿಯಾಗಬೇಕಾದರೆ ಕೇವಲ ಇಲಾಖೆಯಿಂದ ಮಾತ್ರ ಸಾಧ್ಯವಿಲ್ಲ. ಇಲಾಖೆಯ ಜೊತೆಯಲ್ಲಿ ಸಮುದಾಯದ ಸಹಕಾರ ಕೂಡಾ ಅಷ್ಟೇ ಮುಖ್ಯವಾಗಿದೆ.ಮಕ್ಕಳ ಹಕ್ಕುಗಳು ಹಾಗೂ ಅವುಗಳ ರಕ್ಷಣೆಯ ವಿಚಾರದಲ್ಲಿ ಪ್ರತಿಯೊಬ್ಬರು ಕೈ ಜೊಡಿಸಬೇಕಿದೆ ಎಂದು ಹೇಳಿದರು. 

            ಬಹದ್ದೂರಬಂಡಿ ಶಾಲೆಯ ಮುಖ್ಯೋಪಾಧ್ಯಾಯರಾದ ಬೀರ​‍್ಪ ಅಂಡಗಿ ಮಾತನಾಡುತ್ತಾ,ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ್ನು ಆಯೋಜನೆ ಮಾಡುವುದರಿಂದ ಮಕ್ಕಳಲ್ಲಿ ಜವಾಬ್ದಾರಿ,ವಿಮರ್ಶಾತ್ಮಕ ಚಿಂತೆನೆ  ಮತ್ತು ಮಾತನಾಡುವ ಕೌಶಲ್ಯಗಳನ್ನು ಬೆಳೆಸಲು ಸಹಕಾರಿ ಆಗುವುದರ ಜೊತೆಯಲ್ಲಿ ಪಂಚಾಯತ ಅಭಿವೃದ್ದಿ ಯೋಜನೆಯಲ್ಲಿ ಮಕ್ಕಳ ಸಲಹೆಗಳನ್ನು ಸೇರಿಸಲು ಅವಕಾಶ ಸಿಗಲಿದೆ ಎಂದು ಹೇಳಿದರು. ಪಂಚಾಯತ ಅಭಿವೃದ್ದಿ ಅಧಿಕಾರಿಗಳಾದ ಬಸವರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. 

            ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾದ ಪಾರ್ವತಿ ತಂಬ್ರಹಳ್ಳಿ,ಶಾಲಾ ಅಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಮಂಜುನಾಥ ಕುರಿ,ಗ್ರಾಮ ಪಂಚಾಯತ ಸದಸ್ಯರಾದ ಮಹಮ್ಮರಫಿ ಹಿರೇಮಸೂತಿ, ಶಿವಮೂರ್ತೆಪ್ಪ, ಪಂಚಾಯತಿ ಕಾರ್ಯದರ್ಶಿ ರುದ್ರಸ್ವಾಮಿ,ಸಿ.ಆರ್‌.ಪಿ.ಮುದ್ದು ಬಸವ, ಉರ್ದು ಶಾಲಾ ಅಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಮೌಲಾಹುಸೇನ ಕಮ್ಮಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪ್ರತಿಭಾ ಕಾಶಿಮಠ, ಪ್ರಶಾಂತ ರಡ್ಡೇರ, ಮುಂತಾದವರು ಹಾಜರಿದ್ದರು. ಕಾರ್ಯಕ್ರಮವನ್ನು ಶಿಕ್ಷಕರಾದ ಹನುಮಂತಪ್ಪ ಕಬ್ಬೇರ ನಿರೂಪಿಸಿದರು. ಬಹದ್ದೂರಬಂಡಿ ಕ್ಲಸ್ಟ ರ್ ಸಿ.ಆರ್‌.ಪಿ.ಮುದ್ದುಬಸವ ಸ್ವಾಗತಿಸಿ,ಶಿಕ್ಷಕರಾದ ರಾಜಾಹುಸೇನ ವಂದಿಸಿದರು.