ಕಾರ್ಮಿಕರ ಮಕ್ಕಳ ವಸತಿ ಶಾಲೆಗೆ 9 ಎಕರೆ ಜಮೀನಿಗೆ ಪ್ರಸ್ತಾವನೆ
Proposal for 9 acres of land for a residential school for workers' children
ವರದಿ: ಪರಶುರಾಮ ಕೊಣ್ಣೂರಮುದ್ದೇಬಿಹಾಳ: ತಾಲೂಕಿನ ಕಾರ್ಮಿಕರ ಮಕ್ಕಳಿಗೆ ವಸತಿ ಸಹಿತ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ರಾಜ್ಯ ಸರಕಾರ ಮುದ್ದೇಬಿಹಾಳ ಮತಕ್ಷೇತ್ರಕ್ಕೆ ಶ್ರಮಿಕ ಶಾಲೆ ಮಂಜೂರು ಮಾಡಿದ್ದು, ಕಟ್ಟಡ ನಿರ್ಮಾಣಕ್ಕೆ ಕಂದಾಯ ಇಲಾಖೆಯು ತಾಲೂಕಿನಲ್ಲಿ 9 ಎಕರೆ ಜಾಗ ಗುರುತಿಸಿದೆ.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಕಾರ್ಮಿಕರ ಮಕ್ಕಳಿಗಾಗಿ ರಾಜ್ಯದಲ್ಲಿ ಒಟ್ಟು 76 ನೂತನ ಶ್ರಮಿಕ ವಸತಿ ಶಾಲೆಗಳನ್ನು ಆರಂಭಿಸಲಾಗುವುದು ಎಂದು ಸಿಎಂ ಘೋಷಣೆ ಮಾಡಿದ್ದಾರೆ. ನೋಂದಾಯಿತ ಕಾರ್ಮಿಕರ 6 ರಿಂದ 12ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ಮಕ್ಕಳು ಈ ಶಾಲೆಗಳಲ್ಲಿ ಉಚಿತ ವಸತಿ ಶಿಕ್ಷಣ ಪಡೆಯಬಹುದಾಗಿದೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ, ಬಸವನ ಬಾಗೇವಾಡಿ, ಬಬಲೇಶ್ವರ, ನಾಗಠಾಣ, ಸಿಂದಗಿ, ಇಂಡಿ ಮತಕ್ಷೇತ್ರವಾರು ತಲಾ ಒಂದು ಶಾಲೆಗಳು ತೆರೆಯಲಿವೆ. ಶ್ರಮಿಕ ಶಾಲೆಗಳನ್ನು ನಿರ್ಮಾಣ ಮಾಡಲು ರಾಜ್ಯ ಸರಕಾರ ನಿರ್ಧರಿಸಿತ್ತು. ಅದರಂತೆ 2026-27ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಮುದ್ದೇಬಿಹಾಳಕ್ಕೆ ಶ್ರಮಿಕ ಶಾಲೆ ಮಂಜೂರುಗೊಂಡಿದೆ.
ಶಾಲೆಗೆ ಜಾಗ ಪ್ರಸ್ತಾವನೆ
ಕಾರ್ಮಿಕ ಇಲಾಖೆ ಅಡಿ ಕಾರ್ಯನಿರ್ವಹಿಸುವ ಶ್ರಮಿಕ ಶಾಲೆಯ ನಿರ್ಮಾಣಕ್ಕಾಗಿ ಅಗತ್ಯವಾದ ಜಾಗವನ್ನು ಗುರುತಿಸುವ ಪ್ರಕ್ರಿಯೆಯೂ ವೇಗವಾಗಿ ನಡೆದಿದ್ದು, ತಾಲೂಕಿನ ಕವಡಿಮಟ್ಟಿ ಗ್ರಾ.ಪಂ ವ್ಯಾಪ್ತಿಯ ಸರೂರು ಗ್ರಾಮದ ಸರ್ವೆ ನಂ. 249 ರ ಒಟ್ಟು 21 ಎಕರೆ 35 ಗುಂಟೆಯಲ್ಲಿ ಕಂದಾಯ ಇಲಾಖೆಯು ಸುಮಾರು 9 ಎಕರೆ ಜಾಗವನ್ನು ಗುರುತಿಸಿದೆ. ಈ ಜಾಗವನ್ನು ಶೀಟ್ ಮಾಡಿ ಮಂಜೂರಿಗಾಗಿ ಜಿಲ್ಲಾಧಿಕಾರಿ ಕಚೇರಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಅಧಿಕೃತ ಮಂಜೂರು ದೊರೆಯುವ ನೀರೀಕ್ಷೆ ಇದೆ.
*ಶಾಸಕ ಸಿ.ಎಸ್ ನಾಡಗೌಡ ಪ್ರಯತ್ನಕ್ಕೆ ದೊರೆತ ಫಲ*
ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಮಿಕ ಇಲಾಖೆಯಿಂದ "ಶ್ರಮಿಕ ವಸತಿ" ಶಾಲೆ ಮಂಜೂರು ಮಾಡುವಂತೆ ಕಾರ್ಮಿಕ ಸಚಿವ ಸಂತೋಷ ಲಾಡ್‌ರಿಗೆ ಮನವಿ ಸಲ್ಲಿಸಿ, ಸರಕಾರದ ಮೇಲೆ ಶಾಸಕ ಸಿ.ಎಸ್ ನಾಡಗೌಡರು ಒತ್ತಡ ಹೇರಿದ್ದರು. ಶಾಸಕರ ಮನವಿಯನ್ನು ಪುರಸ್ಕರಿಸಿದ ಸಚಿವರು ಹಾಗು ರಾಜ್ಯ ಕಾಂಗ್ರೆಸ್ ಸರಕಾರ 2026-27ನೇ ಸಾಲಿನ ಬಜೆಟ್‌ನಲ್ಲಿ ಮುದ್ದೇಬಿಹಾಳ ಕ್ಷೇತ್ರಕ್ಕೆ ಶ್ರಮಿಕ ಶಾಲೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದರು. ಶಾಸಕರ ಪ್ರಯತ್ನದ ಫಲವಾಗಿ ಈಗ ಜಾಗ ಮಂಜೂರಾಗುವುದು ಬಹುತೇಕ ಖಚಿತವಾಗಿದೆ.
*ಮಕ್ಕಳ ಭವಿಷ್ಯದ ಬೆಳಕು*
ತಾಲೂಕು ಕೇಂದ್ರ ಸ್ಥಾನದಿಂದ ಕೇವಲ 7 ಕಿ.ಮೀ. ದೂರದ ಜಾಗದಲ್ಲಿ ಹಾಗೂ ಸರೂರು ಗ್ರಾಮದಿಂದ 1 ಕಿ.ಮೀ ದೂರದ ಜಾಗದಲ್ಲಿ ಶ್ರಮಿಕ ವಸತಿ ಶಾಲೆ ನಿರ್ಮಾಣವಾಗುತ್ತಿರುವುದು ಕಾರ್ಮಿಕರ ಮಕ್ಕಳ ಉಜ್ವಲ ಭವಿಷ್ಯಕ್ಕೆ ಪೂರಕ ಹೆಜ್ಜೆಯಾಗಿದೆ. ಈ ಶಾಲೆಯಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರ ಮಕ್ಕಳಿಗೆ ವ್ಯಾಸಂಗ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ವಸತಿಯುತ ವ್ಯವಸ್ಥೆ ಇರುವುದರಿಂದ ದೂರದ ಪ್ರದೇಶಗಳ ವಿದ್ಯಾರ್ಥಿಗಳಿಗೂ ಶಿಕ್ಷಣ ಪಡೆಯಲು ಅನುಕೂಲವಾಗಲಿದೆ. ಈ ಶಾಲೆಗಾಗಿ ಢವಳಗಿ, ನೆರಬೆಂಚಿ, ಹಡಲಗೇರಿ, ದೇವರ ಹುಲಗಬಾಳ ಗ್ರಾಮಗಳ ಸರ್ಕಾರಿ ಜಾಗವನ್ನು ನೋಡಲಾಗಿತ್ತು.
ಆದರೆ ರಸ್ತೆ, ಹಾಗೂ ಜಾಗ ಕಡಿಮೆ ಹೀಗೆ ಹಲವು ಸಮಸ್ಯೆ ಇರುವ ಕಾರಣಕ್ಕೆ ಈ ಗ್ರಾಮಗಳಲ್ಲಿ ಶ್ರಮಿಕ ಶಾಲೆ ಕೈಬಿಟ್ಟು, ಸರೂರ ಗ್ರಾಮಕ್ಕೆ ಶ್ರಮಿಕ ಶಾಲೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ.
ಎಲ್ಲರಿಗೂ ಸಮಾನ ಶಿಕ್ಷಣ ದೊರೆಯಬೇಕೆಂಬುದು ಡಾ.ಬಿ ಆರ್ ಅಂಬೇಡ್ಕರ್ ಅವರ ಕನಸಾಗಿತ್ತು. ಅವರ ಆಶಯದಂತೆ ಸರೂರು ಗ್ರಾಮದಲ್ಲಿ ಸರ್ಕಾರಿ ಜಮೀನಿನಲ್ಲಿ ಶಾಸಕ ಅಪ್ಪಾಜಿ ಸಿ.ಎಸ್ ನಾಡಗೌಡ ಅವರು ಶ್ರಮಿಕ ಶಾಲೆ ತೆಗೆದುಕೊಂಡು ಬಂದಿರುವುದು ನಮಗೆ ಸಂತಸ ತಂದಿದೆ. ಹಿಂದುಳಿದ ವರ್ಗದ ಮಕ್ಕಳಿಗೆ ಈ ಶಾಲೆ ಕಲಿಕೆ ಮೂಲಕ ವರದಾನವಾಗಲಿದೆ. ಮುದ್ದೇಬಿಹಾಳ ಮತಕ್ಷೇತ್ರದ ಕಾರ್ಮಿಕರ ಪರವಾಗಿ ಶಾಸಕರಿಗೆ ಅಭಿನಂದನೆಗಳು.
ಪ್ರಕಾಶ ಚಲವಾದಿ ಸರೂರ ದಲಿತ ಮುಖಂಡರು ಮುದ್ದೇಬಿಹಾಳ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 