ಪೈಗಂಬರರ ಜಯಂತ್ಯೋತ್ಸವ: ವಿವಿಧ ಸಂಘಟನೆಗಳ ಯುವಕರಿಂದ ಸಂಭ್ರಮಾಚರಣೆ

ಪೈಗಂಬರರ ಜಯಂತ್ಯೋತ್ಸವ: ವಿವಿಧ ಸಂಘಟನೆಗಳ ಯುವಕರಿಂದ ಸಂಭ್ರಮಾಚರಣೆ  Prophet's Birthday Celebrations: Youths from various organizations celebrate with enthusiasm

ಲೋಕದರ್ಶನ ವರದಿ 

ಜಮಖಂಡಿ 27: ನಗರದಾದ್ಯಂತ ಪ್ರವಾದಿ ಮೊಹಮ್ಮದ್ ಪೈಗಂಬರರ ಜಯಂತ್ಯೋತ್ಸವದ ಅಂಗವಾಗಿ ವಿವಿಧ ಶಾಲಾ ಮಕ್ಕಳು ಹಾಗೂ ವಿವಿಧ ಮುಸ್ಲಿಂ ಸಂಘಟನೆಗಳ ಯುವಕರು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಪೈಗಂಬರರ ಘೋಷಣೆಗಳನ್ನು ಕೂಗುತ್ತಾ ಸಂಭ್ರಮಿಸಿದರು.  ನಂತರ ಮುಧೋಳ ರಸ್ತೆಯ ಶ್ಯಾಲಮ್ ಗೇಟ್ ಬಳಿಯ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನಡೆದ ಜುಶ್ನೆ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಯುವಕರು ಹಾಗೂ ಶಾಲಾ ಮಕ್ಕಳು ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಪೈಗಂಬರರ ಜೀವನಾದರ್ಶಗಳು ಹಾಗೂ ಸಂದೇಶಗಳನ್ನು ಸ್ಮರಿಸಲಾಯಿತು.