’45’ ಚಿತ್ರದ ಪ್ರಮೋಷನಲ್ ’ಆಫ್ರೋ ಟಪಾಂಗ್ ಸಾಂಗ್ ಬಿಡುಗಡೆ’45’ ಚಿತ್ರದ ಪ್ರಮೋಷನಲ್ ’ಆಫ್ರೋ ಟಪಾಂಗ್ ...’ ಸಾಂಗ್ ಬಿಡುಗಡೆ
Promotional 'Afro Tapang' song from the movie '45' released. Promotional 'Afro Tapang...' song from
’45’ ಚಿತ್ರದ ಪ್ರಮೋಷನಲ್ ’ಆಫ್ರೋ ಟಪಾಂಗ್ ಸಾಂಗ್ ಬಿಡುಗಡೆ’45’ ಚಿತ್ರದ ಪ್ರಮೋಷನಲ್ ’ಆಫ್ರೋ ಟಪಾಂಗ್ ...’ ಸಾಂಗ್ ಬಿಡುಗಡೆ
ಶಿವಣ್ಣ, ಉಪ್ಪಿ, ರಾಜ್ ಜೊತೆಗೆ ಉಗಾಂಡದ ಘೆಟ್ಟೋ ಕಿಡ್ಸ್ ಸ್ಟೇಪ್ಸ್ ಗಳಿಗೆ ಪ್ರೇಕ್ಷಕರು ಫಿದಾಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಮುಖ್ಯ ಪಾತ್ರ ನಿರ್ವಹಿಸಿರುವ ಬಹು ನೀರೀಕ್ಷಿತ 45 ಸಿನಿಮಾದ ಪ್ರಮೋಷನಲ್ ಸಾಂಗ್ ’ಆಫ್ರೋ ಟಪಾಂಗ್ ...’ ಕನ್ನಡ ರಾಜ್ಯೋತ್ಸವದಂದು ಬಿಡುಗಡೆ ಆಗಿದೆ. ಆನಂದ ಆಡಿಯೋ ಯೂಟ್ಯೂಬ್ ಚಾಲನೆ ನಲ್ಲಿ ರೀಲೀಸ್ ಆದ ಈ ಹಾಡನ್ನು ಹದಿನೈದು ಗಂಟೆಯಲ್ಲಿ 2 ಮಿಲಿಯನ್ ಗೂ ಹೆಚ್ಚು ಜನರಿಂದ ವೀಕ್ಷಣೆ ಮಾಡಲಾಗಿದೆ. ಎಂ.ಸಿ ಬಿಜ್ಜು ಹಾಗೂ ನಿಶಾನ್ ರಾಯ್ ಬರೆದು ಹಾಡಿರುವ ಈ ಗೀತೆಯಲ್ಲಿ ಶಿವಣ್ಣ, ಉಪೇಂದ್ರ, ರಾಜ್ ಜೊತೆ ಉಗಾಂಡದ ಘೆಟ್ಟೋ ಕಿಡ್ಸ್ ಹೆಜ್ಜೆ ಹಾಕಿದ್ದಾರೆ. ಅದ್ದೂರಿ ವೇದಿಕೆಯಲ್ಲಿ ಈ ಹಾಡನ್ನು ನಿರ್ಮಾಪಕರ ಮಗ ಸೂರಜ್ ಬಿಡುಗಡೆ ಮಾಡಿದರು. ಸಿನಿಮಾದಲ್ಲಿ ಹಾಡುಗಳು ಇಲ್ಲ. ಹಾಗಾಗಿ ತಂಡ ಈ ಗೀತೆಯನ್ನು ಪ್ರಮೋಷನ್ ಗಾಗಿ ಬಳಸಿಕೊಳ್ಳುತ್ತಿದೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮೊದಲಬಾರಿಗೆ ಆ್ಯಕ್ಷನ್ ಕಟ್ ಹೇಳಿರುವ 45 ಚಿತ್ರದ ಹಾಡು ಬಿಡುಗಡೆ ವೇದಿಕೆಯಲ್ಲಿ ಮಾತನಾಡಿದ ಅರ್ಜುನ್ ಜನ್ಯ, ’ಶಿವಣ್ಣ ಅವರಿಂದ ನಿರ್ದೇಶಕ ಆದೆ. ಕಥೆಯಲ್ಲಿ ಹಾಡಿಗೆ ಸ್ಥಾನ ಇರಲಿಲ್ಲ ಹಾಗಾಗಿ ಇದನ್ನು ಸಿನಿಮಾ ಪ್ರಮೋಷನ್ ಗಾಗಿ ಮಾಡಲಾಗಿದೆ. 15 ಜನ ಘೆಟ್ಟೋ ಕಿಡ್ಸ್ ಗಳನ್ನು ಉಗಾಂಡದಿಂದ ಕರೆದುಕೊಂಡು ಬಂದು ಶೂಟಿಂಗ್ ಮಾಡಿದ್ದೇವೆ. ಈ ಹಾಡಿಗೆ ಜಾನಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಸಾಂಗ್ ಪ್ರಾರಂಭದ ಮೊದಲೇ ಶಿವಣ್ಣ ಅವರ ಜೋಗಿ ಸ್ಟೆಪ್, ಉಪೇಂದ್ರ ಅವರ ಗಂಗಮ್ ಹಾಗೂ ರಾಜ್ ಅವರ ಹುಲಿ ಕುಣಿತ ಬಳಸಿಕೊಳ್ಳಲು ಯೋಚಿಸಿದ್ದೆ.
ಅದನ್ನು ಜಾನಿ ಮಾಸ್ಟರ್ ಗೆ ಹೇಳಿದಾಗ ಖುಷಿಯಿಂದ ಸಪೋರ್ಟ್ ಮಾಡಿದರು’ ಎಂದು ಹೇಳಿದರುನಂತರ ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿ ಮಾತನಾಡಿ, ’ಈ ಸಾಂಗ್ ಗಾಗಿ ಶಿವಣ್ಣ ಆಸ್ಪತ್ರೆಯಿಂದ ಬಂದ 15 ದಿನದಲ್ಲಿ ಶೂಟಿಂಗ್ ಗೆ ಬಂದರು. ಅವರ ಎನರ್ಜಿ ಮೆಚ್ಚಲೇ ಬೇಕು. ಘೆಟ್ಟೋ ಕಡ್ಸ್ ಉಗಾಂಡದಿಂದ ಬಂದು ಕ್ರೇಜಿ ಆಗಿ ಡ್ಯಾನ್ಸ್ ಮಾಡಿದರು. ಇಡೀ ಇಂಡಿಯಾದಲ್ಲಿ ಯಾರೂ ಘೆಟ್ಟೋ ಕಿಡ್ಸ್ ಗಳನ್ನು ಕರೆದುಕೊಂಡು ಬಂದು ಹಾಡು ಮಾಡಲ್ಲ. ನಮ್ಮ ಚಿತ್ರದಿಂದಲೇ ಈ ಪ್ರಯತ್ನವಾಗಿದೆ. ಎಲ್ಲಾ ಕ್ರೆಡಿಟ್ ನಿರ್ದೇಶಕರಿಗೆ ಹೋಗಬೇಕು. ಹಾಡು ಹೀಗೆ ಇದ್ದಾಗ ಸಿನಿಮಾ ಹೇಗೆ ಬಂದಿದೆ ಎಂದು ನಿವೇ ಹೇಳಬೇಕು’ ಎಂದರು. ನಟ ರಾಜ್ ಬಿ ಶೆಟ್ಟಿ, ’ಇದು ನಂಗೆ ತುಂಬಾ ಕಲಿಯಲು ಸಿಕ್ಕ ಅವಕಾಶ. ಇದು ಭಾರತಕ್ಕೆ ಒಂದು ಒಳ್ಳೆ ಸಿನಿಮಾ ಆಗಬೇಕು. ಶಿವಣ್ಣ ಉಪೇಂದ್ರ ಅವರ ಪ್ರತಿ ಸೀನ್ ಗೂ ಥಿಯೇಟರ್ ನಲ್ಲಿ ಸಿಳ್ಳೆ, ಚಪ್ಪಾಳೆ ಬರುತ್ತವೆ. ಹಾಗಾಗಿ ನಾನು ಕಾಯತಾ ಇದ್ದೇನೆ’ ಎಂದು ಹೇಳಿದರು.ಕೋಣೆಯಲ್ಲಿ ಮಾತನಾಡಿದ ಶಿವಣ್ಣ, ’ಈ ಕಥೆ ಹೇಳಿದಾಗ ನಿವೇ ನಿರ್ದೇಶನ ಮಾಡಬೇಕು ಎಂದು ಅರ್ಜುನ್ ಗೆ ಹೇಳಿದೆ. ಎಲ್ಲಾ ಪಾತ್ರ ತುಂಬಾ ಚನ್ನಾಗಿವೆ. ಈ ಸಾಂಗ್ ನಲ್ಲಿಯೇ ಸಿನಿಮಾ ಕಥೆ ಇದೆ. ಘೆಟ್ಟೋ ಕಿಡ್ಸ್ ಚನ್ನಾಗಿ ಹೆಜ್ಜೆ ಹಾಕಿದ್ದಾರೆ. ನಂಗೆ ಕ್ಯಾನ್ಸರ್ ಇದೆ ಎಂದು ಗೊತ್ತಾದಾಗ ಇಡೀ ತಂಡ ಮಗು ತರಾ ನೋಡಿಕೊಂಡಿದೆ. ಈ ಸಿನಿಮಾ ಮೇಲೆ ತುಂಬಾ ಲವ್ ಇದೆ ನಂಗೆ. ಸತ್ಯ ಒಳ್ಳೆಯ ಛಾಯಾಗ್ರಾಹಕ. ಎಲ್ಲರ ನಟನೆ ನೋಡಲು ನಾನು ಕೂಡ ಕಾಯತಾ ಇದ್ದೇನೆ. ಇದು ಎಲ್ಲರಿಗೂ ಇಷ್ಟ ಆಗಲಿ ಎಂದು ಆ ದೇವರಲ್ಲಿ ಕೇಳಿಕೊಳ್ಳುವೆ ಎಂದರು. ವೇದಿಕೆಯಲ್ಲಿ ಛಾಯಾಗ್ರಾಹಕ ಸತ್ಯ ಹೆಗ್ಡೆ ತಮ್ಮ ಅನುಭವ ಹಂಚಿಕೊಂಡರು. ದೊಡ್ಡ ಪರದೆಯ ಮೇಲೆ ಹಾಡು ಬರುತ್ತಿದ್ದಂತೆ ಶಿವಣ್ಣ ಅಭಿಮಾನಿಗಳೊಂದಿಗೆ ಹೆಜ್ಜೆ ಹಾಕಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 