ಮಹಿಳೆಯರ ಆರೋಗ್ಯ ಮತ್ತು ಸಂತಾನೋತ್ಪತ್ತಿ ಸಾಮರ್ಥ್ಯ ಕುರಿತು ಕಾರ್ಯಕ್ರಮ

ಮಹಿಳೆಯರ ಆರೋಗ್ಯ ಮತ್ತು ಸಂತಾನೋತ್ಪತ್ತಿ ಸಾಮರ್ಥ್ಯ ಕುರಿತು  ಕಾರ್ಯಕ್ರಮ  Program on women's health and reproductive capacity

            ಕಂಪ್ಲಿ 22:  ಸರ್ಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ಆಂತರಿಕ ಗುಣಮಟ್ಟ ಭರವಸಾಕೋಶದ ಅಡಿಯಲ್ಲಿ, ಮಹಿಳಾ ಸಬಲೀಕರಣ ಘಟಕ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ವಿದ್ಯಾರ್ಥಿನಿಯರಿಗೆ ಮಹಿಳೆಯರ ಆರೋಗ್ಯ ಮತ್ತು ಸಂತಾನೋತ್ಪತ್ತಿ ಸಾಮರ್ಥ್ಯ ಕುರಿತು  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಆರೋಗ್ಯ ಕೇಂದ್ರದ  ಸಂಪನ್ಮೂಲ  ಅಧಿಕಾರಿ  ಡಾ.ಶೃತಿ ಆಯುಷ್ ಮಾತನಾಡಿ ಫಲವತ್ತತೆ ಎಂಬುದು ಕೇವಲ ಗರ್ಭಧಾರಣೆಯ ಸಾಮರ್ಥ್ಯವಲ್ಲ; ಅದು ಮಹಿಳೆಯ ದೇಹ, ಮನಸ್ಸು, ಹಾರ್ಮೋನ್‌ಗಳು ಮತ್ತು ಸಮಗ್ರ ಆರೋಗ್ಯದ ಸಮತೋಲನವನ್ನು ಸೂಚಿಸುವ ಸೂಚಕವಾಗಿದೆ.

           ಮಹಿಳೆಯರ ಮಾಸಿಕ ಚಕ್ರ ಫಲವತ್ತತೆಯ ಸಾಮಾನ್ಯವಾಗಿ 28 ರಿಂದ 35 ದಿನಗಳೊಳಗೆ ನಡೆಯುವ ಈ ಚಕ್ರದಲ್ಲಿ ಅಂಡೋತ್ಸರ್ಗ ಪ್ರಮುಖ ಹಂತವಾಗಿದೆ ಅಂಡೋತ್ಸರ್ಗದ ಸಮಯದಲ್ಲಿ ಮಹಿಳೆ ಗರ್ಭಧಾರಣೆಗೆ ಹೆಚ್ಚು ಸಾದ್ಯತೆ ಇರುತ್ತದೆ ಇದನ್ನು ತಿಳಿಯದೆ ಅನೇಕ ಮಹಿಳೆಯರು ತಮ್ಮದೇಹದ ಸಹಜ ಸಂಕೇತಗಳನ್ನು ಗಮನಿಸದೆ ಬಿಡುತ್ತಾರೆಬೆಳಗಿನ ದೇಹದ ತಾಪಮಾನ, ಮತ್ತುಟೆಸ್ಟ್‌ ಕಿಟ್‌ಗಳಂತಹ ಸರಳ ವಿಧಾನಗಳು ಫಲವತ್ತತೆಯ ದಿನಗಳನ್ನು ಗುರುತಿಸಲು ಸಹಕಾರಿಯಾಗುತ್ತವೆ. ಈ ವಿಷಯದಲ್ಲಿ ಜಾಗೃತಿಯಾಗಿರುವುದು ಗರ್ಭಧಾರಣೆಯನ್ನು ಯೋಜಿಸಲು ಹಾಗೂ ಆರೋಗ್ಯದ ಸ್ಥಿತಿಯನ್ನು ತಿಳಿದುಕೊಳ್ಳಲು ಸಹಾಯಕ. ಫಲವತ್ತತೆ ಕೇವಲ ಚಕ್ರದ ವಿಚಾರವಲ್ಲ; ಅದು ಮಹಿಳೆಯ ಜೀವನಶೈಲಿ ಮತ್ತು ಆರೋಗ್ಯಕ್ಕೆ ನೇರವಾಗಿ ಸಂಬಂಧಿಸಿದೆ.

             ಎಂದರು ಕಾಲೇಜು ಪ್ರ್ರಾಂಶುಪಾಲ ಡಾ. ಶ್ರೀನಿವಾಸ ರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಿಳೆಯರು. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದರು ಉಪಾನ್ಯಾಸಕರಾದ  ಡಿ ಬಸವರಾಜ ಡಾ. ಲಕ್ಷ್ಮೀಬಾಯಿ ಬಾಲಾಜಿ, ಡಾಚಂದ್ರಶೇಖರ ಡಾ.ಮಹೇಶ್ ರಾಜ್ಮಾಟಿ.ಎಂ.ಆರ್ ಎ.ಜಿ. ವೀರಭದ್ರ​‍್ಪನ ಗ್ರಂಥಪಾಲಕರು, ನಾಗಮ್ಮ ಅಧೀಕ್ಷಕರು, ಶ್ರೀ ಸಿದ್ಧರೂಢ ಬಿ. ಪ್ರಥಮದರ್ಜೆ ಸಹಾಯಕರು ಹಾಗೂ ಇತರೆ ಬೋಧಕೇತರ ಸಿಬ್ಬಂದಿ ಮತ್ತುಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.