ಅಂಬಿಗರ ಚೌಡಯ್ಯನವರ ನೂತನ ಪಲ್ಲಕ್ಕಿ ಮೆರವಣಿಗೆ
Procession of Ambigara Chowdayya's new palanquin
ತಾಳಿಕೋಟೆ 18: ಪಟ್ಟಣದ ಅಂಬಿಗರ ಚೌಡಯ್ಯನವರ ನೂತನವಾಗಿ ನಿರ್ಮಿಸಲಾದ ಪಾಲ್ಕಿಯ ಭವ್ಯ ಮೆರವಣಿಗೆಯು ಸೋಮವಾರ ಭಕ್ತಿ, ಶ್ರದ್ಧೆಗಳಿಂದ ನೆರವೇರಿತು. ಸಮಾಜದ ದಾನಿಗಳಾದ ಶಾಂತಾಬಾಯಿ ಮತ್ತು ಅಯ್ಯಪ್ಪ ಬಸವಂತಪುರ ದಂಪತಿಯಿಂದ ಕೊಡ ಮಾಡಿದ ಈ ಪಾಲ್ಕಿಯನ್ನು ಹುಣಸಗಿ ರಸ್ತೆಯಲ್ಲಿರುವ ಕಲಾಕಾರ ಲಕ್ಷ್ಮೀಕಾಂತ ಬಡಿಗೇರ ಬಿಳೇಭಾವಿ ಅವರು ನಿರ್ಮಾಣ ಮಾಡಿದ್ದಾರೆ. ಅಲ್ಲಿಂದ ಹೊರಟ ಮೆರವಣಿಗೆಯು ಡಾ.ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತದ ಮೂಲಕ ಅಂಬಿಗರ ಚೌಡಯ್ಯನವರ ಸಮುದಾಯ ಭವನವನ್ನು ತಲುಪಿತು. ನಂತರ ದಾನಿಗಳಿಗೆ ಸಮಾಜದ ವತಿಯಿಂದ ಗೌರವ ಸನ್ಮಾನವನ್ನು ಜರುಗಿಸಲಾಯಿತು.
ಸಮಾಜದ ತಾಲೂಕಾ ಘಟಕದ ಅಧ್ಯಕ್ಷ ಪರಶುರಾಮ ತಂಗಡಗಿ, ನಗರ ಘಟಕದ ಅಧ್ಯಕ್ಷ ರಮೇಶ ಮೂಕಿಹಾಳ, ಶಶಿ ಮೂಕಿಹಾಳ, ಭೀಮಾಶಂಕರ ಅಂಬಿಗೇರ, ಮಲ್ಲು ರುದ್ರ್ಪ ನಾಯ್ಕೊಡಿ, ಮಲ್ಲು ಅಸ್ಕಿ, ಅಶೋಕ ಮೂಕಿಹಾಳ, ಕೃಷ್ಣಾ ಹದಗಲ್ಲ, ನಾಯ್ಕೋಡಿ, ಬಸವರಾಜ ಯಡಹಳ್ಳಿ, ಮಲ್ಲಿಕಾರ್ಜುನ ಯಡಹಳ್ಳಿ ಕಾಶಿನಾಥ ಮದರಿ, ಮಾಣಪ್ಪ ನಾಯ್ಕೋಡಿ, ತೋಟಪ್ಪ ಏವೂರ, ರೇವಪ್ಪ ಕಲ್ಲೂರ, ಭೀಮಣ್ಣ ತಳವಾರ, ಮಲ್ಲು ರಾಮಪ್ಪ ನಾಯ್ಕೋಡಿ, ಚಂದ್ರು ಗೊರಗುಂಡಗಿ ಇತರರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 