ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆ ಕಾರ್ಯದ ಒತ್ತಡ: ಬಿಎಲ್‌ಒ ಅಸ್ವಸ್ಥ

ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆ ಕಾರ್ಯದ ಒತ್ತಡ: ಬಿಎಲ್‌ಒ ಅಸ್ವಸ್ಥ  Pressure of special electoral roll revision work: BLO falls ill


ಶಿರಹಟ್ಟಿ 13: ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆ ಕಾರ್ಯದ ಒತ್ತಡವು ಕೆಳ ಹಂತದ ಕಾರ್ಯಕರ್ತರಾದ ಬಿಎಲ್‌ಒಗಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಸೋಮವಾರ ಬೆಳಗ್ಗೆ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಎನ್ಯೂಮರೇಷನ್ ಫಾರ್ಮ್ಗಳನ್ನು ಸಂಗ್ರಹಿಸುವ ವೇಳೆ ಬಿಎಲ್‌ಒ ಅಸ್ವಸ್ಥಗೊಂಡ ಘಟನೆ ನಡೆದಿದೆ.  

ತಾಲೂಕಿನ ಸುಗ್ನಹಳ್ಳಿ ಗ್ರಾಮದ ಮತಗಟ್ಟೆ ಸಂಖ್ಯೆ 174ರಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಧಾ ಹೇಮಗಿರಿಮಠ ಅವರು ಮನೆ ಮನೆಗೆ ತೆರಳಿ ಎನ್ಯೂಮರೇಷನ್ ಫಾರ್ಮ್‌ ಸಂಗ್ರಹಿಸುವ ಸಂದರ್ಭದಲ್ಲಿ ಅಸ್ವಸ್ಥರಾಗಿದ್ದಾರೆ. ಗ್ರಾಮಸ್ಥರು ತಕ್ಷಣ ಅವರಿಗೆ ನೀರು ಕುಡಿಸಿ ನೆರವು ನೀಡಿದ್ದು, ಬಳಿಕ ಮೇಲಾಧಿಕಾರಿ ಬಸವರಾಜ ನಂದಗಾವಿ ಅವರಿಗೆ ಮಾಹಿತಿ ನೀಡಿದ್ದಾರೆ.  

ಮಾಹಿತಿ ತಿಳಿದ ತಕ್ಷಣ ಬಸವರಾಜ ನಂದಗಾವಿ ಸ್ಥಳಕ್ಕೆ ಆಗಮಿಸಿ, ತಮ್ಮ ಕಾರಿನ ಮೂಲಕ ಅವರನ್ನು ಬೆಳ್ಳಟ್ಟಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ನಂತರ ವಿಷಯ ತಿಳಿದ ಕಂದಾಯ ನೀರೀಕ್ಷಕ ಬಸವರಾಜ ಕಾತರಾಳ ಅವರು ಆಸ್ಪತ್ರೆಗೆ ಭೇಟಿ ನೀಡಿ ಬಿಎಲ್‌ಒ ಅವರ ಆರೋಗ್ಯ ವಿಚಾರಿಸಿದರು.