ಸಿಂದಗಿ 08: 2025-26ನೇ ಸಾಲಿನ ಬಜೆಟ್ ಸಭೆ ಕರೆಯುವಂತೆ ಕಳೆದ ಮಾರ್ಚ 26ರಂದು ಮುಖ್ಯಾಧಿಕಾರಿ ಎಸ್ ರಾಜಶೇಖರ ಅವರಿಗೆ ಪತ್ರ ಬರೆಯಲಾಗಿತ್ತು. ಪಟ್ಟಣದ ಪುರಸಭೆ ಬಜೆಟ್ ಸಭೆ ಈವರೆಗೂ ನಡೆದಿಲ್ಲ. ಅದರಿಂದ ಅಭಿವೃದ್ಧಿ ಕಾರ್ಯಕ್ರಮಗಳು ನಿಂತುಹೋಗಿದ್ದು ಕಾರಣ ಇದೆ 9 ರಂದು ಬಜೆಟ್ ಸಭೆ ನಡೆಸಬೇಕು ಎಂದು ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಸೂಚನೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಾರ್ಚ27 ರಂದು ಬಜೆಟ್ ಸಭೆ ಕರೆದಿದ್ದೆ ಆದರೆ ಯಾವುದೇ ಮುನ್ಸೂಚನೆಯಿಲ್ಲದೆ ನನ್ನ ಮಾತು ಹಾಗೂ ಮೇಲಾಧಿಕಾರಿಗಳ ಗಮನಕ್ಕೂ ತರದೇ ಏಕಾಏಕಿಯಾಗಿ ಮಾರ್ಚ 26 ರಂದು ಮುಖ್ಯಾಧಿಕಾರಿ ಅವರು ಸಭೆಯನ್ನು ರದ್ದುಪಡಿಸಿ ಅದಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ದೂರಿದರು.
ಬಜೆಟ್ ಸಭೆ ನಡೆಸದ ಕಾರಣ ಪಟ್ಟಣದ ಸಾರ್ವಜನಿಕರಿಗೆ ಮತ್ತು ಪುರಸಭೆ ಕಾರ್ಯಾಲಯದ ಸಿಬ್ಬಂದಿಗೆ, ಪೌರ ಕಾರ್ಮಿಕರಿಗೆ ತೊಂದರೆ ಉಂಟಾಗಿ ಪುರಸಭೆ ಆಡಳಿತ ಯಂತ್ರ ಸಂಪೂರ್ಣ ಹಾಳಾಗಿ ಹೋಗಿದೆ. ಪುರಸಭೆ ಆರ್ಥಿಕವಾಗಿ ನಷ್ಟ ಎದುರಿಸಲು ಕಾರಣವಾಗಿದೆ.ಇದಕ್ಕೆ ಮುಖ್ಯಾಧಿಕಾರಿ ಸಂಪೂರ್ಣ ಹೊಣೆಗಾರರು ಆಗಿದ್ದಾರೆ ಎಂದು ಗಂಬೀರ ಆರೋಪ ಮಾಡಿದ್ದಾರೆ.