ಗ್ರಾಮೀಣ ಭಾಗದಲ್ಲಿ ನಾಡಿನ ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ: ಬಿ. ವೀಣಾ ಕುಮಾರಿ
Preserve and develop the country's literary culture in rural areas: B. Veena Kumari
ಗ್ರಾಮೀಣ ಭಾಗದಲ್ಲಿ ನಾಡಿನ ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ: ಬಿ. ವೀಣಾ ಕುಮಾರಿ
ಬಳ್ಳಾರಿ 14: ನಾಡಿನ ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅವಶ್ಯಕತೆಯಿದೆ ಎಂದು ಹಿರಿಯ ರಂಗಭೂಮಿ ಕಲಾವಿದೆ ಬಿ. ವೀಣಾ ಕುಮಾರಿ ಅವರು ಹೇಳಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಮಸಾಗರ ಇವರ ಸಂಯುಕ್ತಾಶ್ರಯದಲ್ಲಿ ಕಂಪ್ಲಿ ತಾಲ್ಲೂಕಿನ ರಾಮಸಾಗರ ಸ.ಹಿ.ಪ್ರಾ.ಶಾಲೆ ಆವರಣದಲ್ಲಿ ಭಾನುವಾರ ಏರಿ್ಡಸಿದ್ದ “ಸೌರಭ ಸಾಂಸ್ಕೃತಿಕ” ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಗ್ರಾಮೀಣ ಭಾಗದ ಮಕ್ಕಳು ತಮ್ಮಲ್ಲಿನ ಕಲಾ ಪ್ರತಿಭೆಗಳನ್ನು ಹೊರಹಾಕಬೇಕು. ಸಾಂಸ್ಕೃತಿಕವಾಗಿ ದೇಶಕ್ಕೆ ಕೊಡುಗೆ ನೀಡಬೇಕು ಎಂದು ಹೇಳಿದರು.ರಾಮಸಾಗರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎಮ್. ಆಶಾ ಅವರು ಮಾತನಾಡಿ, ರಾಮಸಾಗರದಲ್ಲಿ ಅನೇಕ ಜಾನಪದ ಕಲಾವಿದರು ಮತ್ತು ವಿದ್ವಾಂಸರನ್ನು ಹೊಂದಿದ್ದು, ನಾಡಿಗೆ ಅನನ್ಯ ಕೂಡುಗೆಯನ್ನು ನೀಡಿದ್ದಾರೆ ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ.ನಾಗರಾಜ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ನಾಟಕವು ರಂಗ ಕಲೆಯ ಶ್ರೀಮಂತ ನೆಲೆಯಾಗಿದ್ದು, ಇದಕ್ಕೆ ಪ್ರಾಚೀನ ಇತಿಹಾಸವಿದೆ. ಗ್ರಾಮೀಣ ಭಾಗದ ಎಲ್ಲಾ ಕಲಾವಿದರು ಇಂತಹ ಕಾರ್ಯಕ್ರಮಗಳ ವೇದಿಕೆಯನ್ನು ಸದುಪಯೋಗ ಪಡೆಸಿಕೊಂಡು ತಮ್ಮಲ್ಲಿರುವ ಕಲೆಯನ್ನು ಹೊರಹಾಕಬೇಕು ಎಂದು ತಿಳಿಸಿದರು.
ಬಳಿಕ ಕಾರ್ಯಕ್ರಮದಲಿ ಬಳ್ಳಾರಿಯ ಮೋಹನ್ ಕಲಬುರಗಿ ಅವರಿಂದ ವಾಯಲಿನ್ ವಾದನ, ಕೆ.ದೊಡ್ಡಬಸಪ್ಪ ಗವಾಯಿ ತಂಡದಿಂದ ಸುಗಮ ಸಂಗೀತ, ವನಮಾಲ ಕುಲಕರ್ಣಿ ಸಂಗಡಿಗರಿಂದ ಸಮೂಹ ನೃತ್ಯ, ಯಲ್ಲನಗೌಡ ಶಂಕರಬಂಡೆ ತಂಡದಿಂದ ಜಾನಪದ ಗೀತೆ, ಏಳುಬೆಂಚಿಯ ಸಿ.ಎಂ.ಕರುಣಾಮೂರ್ತಿ ಅವರಿಂದ ಕಥಾ ಕೀರ್ತನೆ, ಬಳ್ಳಾರಿಯ ವರಲಕ್ಷ್ಮೀ ಸಂಗಡಿಗರಿಂದ ಐತಿಹಾಸಿಕ “ಹೇಮರೆಡ್ಡಿ ಮಲ್ಲಮ್ಮ” ನಾಟಕ ಸೇರಿದಂತೆ ಇತರೆ ವೈವಿಧಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
*ಸಾಂಸ್ಕೃತಿಕ ಮೆರವಣಿಗೆ:*ಸಾಂಸ್ಕೃತಿಕ ಸೌರಭ ಅಂಗವಾಗಿ “ಜಾನಪದ ಕಲಾ ತಂಡ”ಗಳ ಮೆರವಣಿಗೆ ನಡೆಯಿತು. ಕಂಪ್ಲಿಯ ಶಿಕಾರಿ ರಾಮು ಮತ್ತು ಸಂಗಡಿಗರಿಂದ ತಾಷರಂಡೋಲ್, ಹಳೇ ದರೋಜಿಯ ವೈ, ಮಲ್ಲಿಕಾರ್ಜುನಪ್ಪ ಮತ್ತು ಸಂಗಡಿಗರಿಂದ ಹಗಲುವೇಷಗಾರಿಕೆ, ತಾರನಗರದ ಎನ್.ಎಂ. ಚಂದ್ರಯ್ಯ ಸ್ವಾಮಿ ಮತ್ತು ಸಂಗಡಿಗರಿಂದ ವೀರಗಾಸೆ ಸೇರಿದಂತೆ ಇನ್ನಿಯರೆ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿ ಮೆರಗು ನೀಡಿದವು.
ಈ ಸಂದರ್ಭದಲ್ಲಿ ರಾಮಸಾಗರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಆರ್.ಎಂ ರಾಮಯ್ಯ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಅಭಿವೃದ್ಧಿ ನಿರ್ವಹಣಾ ಸಮಿತಿ ಅಧ್ಯಕ್ಷರಾದ ಎಂ. ಪ್ರಶಾಂತ್, ರಂಗಭೂಮಿ ಕಲಾವಿದೆ ಎ.ವರಲಕ್ಷ್ಮೀ, ಹಿರಿಯ ನೃತ್ಯ ಕಲಾವಿದರಾದ ವನಮಾಲ ಕುಲಕರ್ಣಿ, ಸೀತಾ ಚಪ್ಪರ್ ಸೇರಿದಂತೆ ಶಾಲಾ ಶಿಕ್ಷಕರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 