ದ್ವೀತಿಯ ಪಿಯುಸಿಯಲ್ಲಿ ಪ್ರೇರಣಾ ಚಲವಾದಿ ಸಾಧನೆ
Prerana Chalwadi's achievement in second PUC
ಲೋಕದರ್ಶನ ವರದಿ
ಜಮಖಂಡಿ 15: ನಗರದ ಸಂಜಯ ಚಲವಾದಿ ದಂಪತಿ ಮಗಳಾದ ಪ್ರೇರಣಾ ಚಲವಾದಿ ಅವರು ದ್ವೀತಿಯ ಪಿಯುಸಿಯಲ್ಲಿ 600ಕ್ಕೆ 592 ಅಂಕಗಳನ್ನು ಪಡೆದುಕೊಂಡು ತಾಲೂಕಿಗೆ ಕೀರ್ತಿಯನ್ನು ತಂದಿದ್ದಾಳೆಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಂತೋಷ ತಳಕೇರಿ ಹೇಳಿದರು.
ನಗರದ ಹೊರವಲಯದಲ್ಲಿ ಇರುವ ಸಂಜಯ ಚಲವಾದಿ ಅವರ ಮನೆಗೆ ಭೇಟಿ ನೀಡಿ. ಬಸವ ಟ್ರಸ್ಟ್ ಸಮಿತಿ ವತಿಯಿಂದ ಪ್ರೇರಣಾ ತಂದೆ-ತಾಯಿಯವರಿಗೆ ಸನ್ಮಾನಿಸಿ ಮಾತನಾಡಿದ ಅವರು, ಪ್ರೇರಣಾ ಅವರು ತಮ್ಮ ಕಠಿಣ ಪರಿಶ್ರಮದ ವಿದ್ಯಾಭ್ಯಾಸವನ್ನು ಮಾಡುವ ಜೊತೆಗೆ ಮನೆಯಲ್ಲಿ ತಂದೆ-ತಾಯಿಗಳ ಪ್ರೋತ್ಸಾಹದಿಂದ ದ್ವೀತಿಯ ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದುಕೊಂಡು ಸಾಧನೆಯನ್ನು ಮಾಡಿದ್ದಾಳೆ ಮುಂದೆಬರುವ ಮಕ್ಕಳಿಗೆ ಸ್ಪೂರ್ತಿಯಾಗಿದ್ದಾಳೆ ಎಂದರು.
ಪ್ರೇರಣಾ ತಂದೆಯವರು ತಮ್ಮ ಮಕ್ಕಳ ಕುರಿತು ಅವಳ ಪರಿಶ್ರಮ, ಸಾಧನೆ, ಓದುವ ಅಭಿರುಚಿಯ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಬಸವ ಟ್ರಸ್ಟ್ ಸಮಿತಿಯ ಪದಾಧಿಕಾರಿಗಳಾದ ಎ,ಆರ್,ಹೊಸಮನಿ, ಪ್ರಭು ಬಿದರಿ, ಅರವಿಂದ ನವನಿ, ಮಹದೇವ ಪೋತರಾಜ, ಜಗದೀಶ ಕಾಂಬಳೆ, ಟಿ,ಎಸ್,ನಾಗರಾಳ, ಶ್ರೀಶೈಲ್ ಚಲವಾದಿ, ನಿಜವ್ವ ಚಲವಾದಿ ಹಾಗೂ ಚಲವಾದಿ ಸಮಾಜದ ಅಧ್ಯಕ್ಷ ಶಶಿಕಾಂತ ತೇರದಾಳ, ಪತ್ರಕರ್ತರಾದ ಯಶವಂತ ಕಲೂತಿ, ರವಿ ದೊಡಮನಿ ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 