ಶರಣ ನವರಾತ್ರಿ ಧರ್ಮ ಸಮ್ಮೇಳನಕ್ಕೆ ಪೂರ್ವಭಾವಿ ಸಭೆ

  ಶರಣ ನವರಾತ್ರಿ ಧರ್ಮ ಸಮ್ಮೇಳನಕ್ಕೆ ಪೂರ್ವಭಾವಿ ಸಭೆ Preparatory meeting for the Sharana Navaratri Dharma Sammelana

ಲೋಕದರ್ಶನ ವರದಿ 

ಜಮಖಂಡಿ 31 : ಸರ್ವಧರ್ಮದಿಂದ ವಿಶ್ವಕ್ಕೆ ಶಾಂತಿ ಲಭಿಸಲಿದೆ. ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಸಾಹಿತ್ಯ, ಸಂಸ್ಕೃತಿ ಅಳವಡಿಕೊಂಡು ಶಾಂತಿ ಸಮೃದ್ಧಿ ಲಭಿಸುವ ನಿಟ್ಟಿನಲ್ಲಿ ಅಕ್ಟೋಬರ್ 10 ರಿಂದ ಸತತ 11 ದಿನಗಳವರೆಗೆ ನಗರದ ಮುರಗೋಡ ಕಲ್ಯಾಣ ಮಂಟಪದಲ್ಲಿ ರಂಭಾಪುರಿ ಜಗದ್ಗುರು ನೇತೃತ್ವದಲ್ಲಿ ಶರಣ್ಣ ರಾತ್ರಿ ಧರ್ಮ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮುತ್ತಿನಕಂತಿ ಮಠದ ಶಿವಲಿಂಗ ಪಂಡಿತರಾಧ್ಯ ಶಿವಾಚಾರ್ಯ ಶ್ರೀಗಳು ಹೇಳಿದರು. 

ನಗರದ ಮುತ್ತಿನಕಂತಿ ಹಿರೇಮಠದ ಸದ್ವಿಚಾರ ಚಿಂತನೆ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಳೆಹೊನ್ನೂರದ ಶ್ರೀಗಳಾದ ಜಗದ್ಗುರು ರಂಭಾಪುರಿ ವೀರಸಿಂಹಾಸನಾಧೀಶ್ವರ 1008 ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ದಿವ್ಯ ಸಾನ್ನಿಧ್ಯದಲ್ಲಿ ಸತತ 11 ದಿನಗಳವರೆಗೆ ಧಾರ್ಮಿಕ ಕಾರ್ಯಕ್ರಮಗಳ ಸಹಿತ ಪವಿತ್ರ ಶರಣ್ಣರಾತ್ರಿ ದಸರಾ ಧರ್ಮ ಸಮ್ಮೇಳನ ಪ್ರತಿಯೊಬ್ಬರ ಜೀವನದ ದಿಕ್ಕು ಬದಲಾವಣೆಗೆ ದಾರೀದೀಪ ಆಗಲಿದೆ ಎಂದರು. 

ಶರನ್ನವರಾತ್ರಿ ದಸರಾ ಸಮ್ಮೇಳನ ಯಶಸ್ಸಿಗಾಗಿ ಎಲ್ಲ ಸಮುದಾಯದ ಹಿರಿಯರ, ಯುವಕರ, ಮಹಿಳೆಯರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಸಪ್ಟೆಂಬರ 2 ರಂದು ಸಾಯಂಕಾಲ 4 ಗಂಟೆಗೆ ನಗರದ ಕುಂಬಾರಗಲ್ಲಿರುವ ಕಲ್ಯಾಣ ಮಠದಲ್ಲಿ ಸಾರ್ವಜನಿಕ ಸಭೆಯನ್ನು ಕರೆಯಲಾಗಿದೆ. ಅಂದಿನ ಸಾರ್ವಜನಿಕ ಸಭೆಗೆ ತಾಲೂಕಿನ ಎಲ್ಲ ಸಮಾಜದ ಗುರು ಹಿರಿಯರನ್ನು ಸೇವಕರು, ಯುವತಿಯರು, ಹೆಣ್ಣುಮಕ್ಕಳನ್ನು ಆಹ್ವಾನಿಸಲಾಗಿದೆ. ಈಗಾಗಲೆ ಒಂದು ಪೂರ್ವಭಾವಿ ಮಾಡಲಾಗಿದೆ.

ಸಪ್ಟೆಂಬರ್ 2 ರಂದು ನಡೆಯಲಿರುವ 2ನೇ ಪೂರ್ವಭಾವಿ ಸಭೆಯಲ್ಲಿ ಮಹತ್ವದ ನಿರ್ಧಾರಗಳು ಕೈಗೊಳ್ಳುವ ಸಾಧ್ಯತೆಯಿದೆ. ಈಗಾಗಲೇ ಸ್ವಾಗತ ಸಮಿತಿ ಮತ್ತು ಹಣಕಾಸಿನ ಸಮಿತಿ ಮತ್ತು ಕಾರ್ಯನಿರ್ವಹಣೆ ಸಮಿತಿ ಸಹಿತ ಬಹಳಷ್ಟು ಸಮಿತಿಗಳು ರಚನೆಗೊಂಡಿದ್ದು, ಅಂತಿಮ ಸಮೀತಿ ಪಟ್ಟಿ ಬಿಡುಗಡೆಗೊಳ್ಳಲಿದ್ದು, ಪ್ರತಿಯೊಬ್ಬರು ಸಭೆಗೆ ಆಗಮಿಸಿ ಸಲಹೆ ಸೂಚನೆಗಳನ್ನು ನೀಡಬೇಕೆಂದರು  ಸುದ್ದಿಗೋಷ್ಠಿಯಲ್ಲಿ ಕಲ್ಯಾಣಮಠದ ಗೌರಿಶಂಕರ ಶಿವಾಚಾರ್ಯರು, ಬನಹಟ್ಟಿಯ ಶರಣಬಸವ ಶಿವಾಚಾರ್ಯರು, ಹಿರೇಪಡಸಲಗಿಯ ಸಿದ್ಧಲಿಂಗ ಶಿವಾಚಾರ್ಯರು ಇದ್ದರು.