ಗವಿಮಠ ಶ್ರೀಗಳ ಪದವಿ ಗೆಳೆಯರಿಂದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪ್ರಸಾದ

ಗವಿಮಠ ಶ್ರೀಗಳ ಪದವಿ ಗೆಳೆಯರಿಂದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪ್ರಸಾದ Prasadam offered to hostel students by Gavi Matha Sri's graduate friends

             ಕೊಪ್ಪಳ 22:   ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಯದಲ್ಲಿ 1997-98 ನೇ ಸಾಲಿನಲ್ಲಿ ಪದವಿ ಅಭ್ಯಾಸ ಮಾಡಿರುವ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಜಿಗಳ ಪದವಿ ಗೆಳೆಯರ ಬಳಗದ ವತಿಯಿಂದ  ಶ್ರೀ ಗವಿಸಿದ್ಧೇಶ್ವರ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪ್ರಸಾದ ವ್ಯವಸ್ಥೆ ಮತ್ತು ಸುರಭಿ ವೃದ್ಧಾಶ್ರಮದಲ್ಲಿ ವೃದ್ಧರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಯಿತು. ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ  1997-98 ನೇ ಸಾಲಿನಲ್ಲಿ ಅಭ್ಯಾಸ ಮಾಡಿದ ಪದವಿ ಗೆಳೆಯರು ಎಲ್ಲರೂ ಸೇರಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಒಂದು ದಿನದ ಪ್ರಸಾದ ವ್ಯವಸ್ಥೆ ಮಾಡುವ ಸಂಕಲ್ಪವನ್ನು ಮಾಡಲಾಗಿದ್ದು, ಅದರಂತೆ ಕಳೆದೆರಡು ವರ್ಷಗಳಿಂದ ಮಾಡಿಕೊಂಡು ಬರಲಾಗುತ್ತದೆ.

            ಬೆಳಗ್ಗೆಯೇ ವಿವಿಧೆಡೆಯಿಂದ ಬಂದಿದ್ದ ಪದವಿ ಗೆಳೆಯರು ಎಲ್ಲರೂ ಸೇರಿ ಮೊದಲು ಸುರಭಿ ವೃದ್ಧಾಶ್ರಮದಲ್ಲಿರುವ ಹಿರಿಯರೊಂದಿಗೆ ಮಾತುಕತೆ ನಡೆಸಲಾಗುತ್ತದೆ. ಅವರೊಂದಿಗೆ ಹರಟೆ ಹೊಡೆದು, ಅವರನ್ನು ಸಂತಸಗೊಳಿಸಲಾಯಿತು. ಅದಾದ ಮೇಲೆ ಅವರಿಗೂ  ಅಚ್ಚುಕಟ್ಟಾದ  ಊಟದ ವ್ಯವಸ್ಥೆಯನ್ನು ಮಾಡಲಾಯಿತು. ಅದಾದ ಮೇಲೆ   ಶ್ರೀ ಗವಿಸಿದ್ಧೇಶ್ವರ ಹಾಸ್ಟೆಲ್ ನಲ್ಲಿ  ಎಲ್ಲ ಮಕ್ಕಳಿಗೂ ಗೋಧಿ ಹುಗ್ಗಿ, ಫಲಾವ್, ಅನ್ನ, ಸಾಂಬರ್, ಬದನೇಕಾಯಿ ಫಲ್ಯವನ್ನೊಳಗೊಂಡ ಪ್ರಸಾದ ವ್ಯವಸ್ಥೆಯನ್ನು ಮಾಡಲಾಯಿತು. 22ಕೆಪಿಎಲ್21 ಸುರಭಿ ವೃದ್ಧಾಶ್ರಮದಲ್ಲಿ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ಪದವಿ ಗೆಳೆಯರು 22ಕೆಪಿಎಲ್22 ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಹಾಸ್ಟೆಲ್ ನಲ್ಲಿ ಪ್ರಸಾದ ವ್ಯವಸ್ಥೆ ಮಾಡಿರುವುದು.