ಪ್ರಜಾಸೌಧ ಸ್ಥಳ ವಿವಾದ ಸ್ಫೋಟ! 31ನೇ ದಿನಕ್ಕೂ ಧರಣಿ : ಅಧಿಕಾರಿಗಳ ಮೌನಕ್ಕೆ ಜನರ ಕಿಡಿ

ಪ್ರಜಾಸೌಧ ಸ್ಥಳ ವಿವಾದ ಸ್ಫೋಟ! 31ನೇ ದಿನಕ್ಕೂ ಧರಣಿ : ಅಧಿಕಾರಿಗಳ ಮೌನಕ್ಕೆ ಜನರ ಕಿಡಿ Praja Soudha location controversy erupts! Protest enters 31st day: People's anger at officials' sile

“ಪಟ್ಟಣ ಬಿಟ್ಟು ನಿರ್ಜನದಲ್ಲಿ ಕಟ್ಟಡ ಯಾಕೆ?” ರೈತರ ಸಂಘ ಕಿಡಿಕಾರಿಕೆ, ಭಾರೀ ಹೋರಾಟ ಎಚ್ಚರಿಕೆ

ತಾಳಿಕೋಟೆ 26: ಪ್ರಜಾಸೌಧ ನಿರ್ಮಾಣ ಸ್ಥಳ ಆಯ್ಕೆ ವಿಚಾರ ಇದೀಗ ದೊಡ್ಡ ವಿವಾದಕ್ಕೆ ತಿರುಗಿದ್ದು, ತಾಲೂಕಿನ ಮೈಲೇಶ್ವರ ಗ್ರಾಮದ ಸಮೀಪ ನಿಗದಿಪಡಿಸಿರುವ ಸ್ಥಳದ ವಿರುದ್ಧ ಜನರ ಆಕ್ರೋಶ ಸ್ಫೋಟಗೊಂಡಿದೆ. ಪ್ರಜಾಸೌಧವನ್ನು ತಾಳಿಕೋಟೆ ಪಟ್ಟಣದಲ್ಲಿಯೇ ನಿರ್ಮಿಸಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವು 31ನೇ ದಿನಕ್ಕೂ ಮುಂದುವರಿದಿದ್ದು, ಹೋರಾಟ ತೀವ್ರಗೊಳ್ಳುತ್ತಿದೆ.

ಪಟ್ಟಣದ ಬಸವೇಶ್ವರ ವೃತ್ತದ ಬಳಿ ನಡೆಯುತ್ತಿರುವ ಧರಣಿ ದಿನದಿಂದ ದಿನಕ್ಕೆ ಉಗ್ರ ಸ್ವರೂಪ ಪಡೆಯುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 30 ದಿನಗಳಿಂದಲೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದಿರುವುದು ಜನರ ಕೋಪವನ್ನು ಮತ್ತಷ್ಟು ಹೆಚ್ಚಿಸಿದೆ. ರಾಷ್ಟ್ರೀಯ ರೈತರ ಸಂಘ ಮೈದಾನಕ್ಕೆ ಹಿ ಹೋರಾಟಕ್ಕೆ ಬಲಗುರುವಾರ ನಡೆದ ಧರಣಿಗೆ ರಾಷ್ಟ್ರೀಯ ರೈತರ ಸಂಘ ತಾಲೂಕು ಘಟಕ ತಾಳಿಕೋಟೆ ಸಂಪೂರ್ಣ ಬೆಂಬಲ ಸೂಚಿಸಿದ್ದು, ಹಿರಿಯರು ಮತ್ತು ಯುವಕರು ಭಾರಿ ಸಂಖ್ಯೆಯಲ್ಲಿ ಭಾಗವಹಿಸಿ ಸರ್ಕಾರದ ವಿರುದ್ಧ ಕಿಡಿಕಾರಿದರು. ಗ್ರಾಮ ಮಟ್ಟದಲ್ಲಿ ಹೋರಾಟಕ್ಕೆ ಭಾರೀ ಬೆಂಬಲ ವ್ಯಕ್ತವಾಗಿದೆ. “ಮಹಿಳೆಯರಿಗೆ ಅಪಾಯ, ಜನರಿಗೆ ಅಸೌಕರ್ಯ” ರಾಷ್ಟಿಯ ರೈತ ಸಂಘದ ರಾಜ್ಯ ಮಹಿಳಾ ಕಾರ್ಯದರ್ಶಿ ರೇಣುಕಾ ಪಾಟೀಲ್ ಹಾಗೂ ತಾಲೂಕಾ ಅಧ್ಯಕ್ಷ ಅಶೋಕಗೌಡ ಪಾಟೀಲ ಮಾತನಾಡಿ,“ನಿಗದಿಪಡಿಸಿರುವ ಸ್ಥಳ ಪಟ್ಟಣದಿಂದ ದೂರದ ನಿರ್ಜನ ಪ್ರದೇಶ. ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ಸುರಕ್ಷತೆ ಪ್ರಶ್ನಾರ್ಥಕ. ಜನರಿಗೆ ಸುಲಭವಾಗುವಂತೆ ಪಟ್ಟಣದಲ್ಲಿಯೇ ಕಟ್ಟಡ ನಿರ್ಮಿಸಬೇಕು”ಎಂದು ಒತ್ತಾಯಿಸಿದರು. ಮನವಿ ಮಾಡಿದರೂ ಕ್ರಮವಿಲ್ಲ ಹಿ ಸ್ವಹಿತಾಸಕ್ತಿ ಶಂಕೆಈ ಕುರಿತು ಶಾಸಕರಿಗೂ ಹಾಗೂ ಜಿಲ್ಲಾಡಳಿತಕ್ಕೂ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ನಿಗದಿಪಡಿಸಿದ ಜಾಗದ ಆಯ್ಕೆ ಹಿಂದೆ ಸ್ವಹಿತಾಸಕ್ತಿ ಇರುವ ಶಂಕೆಯನ್ನೂ ಹೋರಾಟಗಾರರು ವ್ಯಕ್ತಪಡಿಸಿದ್ದಾರೆ. “ಇದು ತಾಲೂಕಿನ ಹಕ್ಕಿನ ಹೋರಾಟ” - ಉಗ್ರ ಎಚ್ಚರಿಕೆ“ಇದು ಕೇವಲ ಒಂದು ಗ್ರಾಮದ ಸಮಸ್ಯೆಯಲ್ಲ, ಇಡೀ ತಾಲೂಕಿನ ಹಕ್ಕಿನ ಪ್ರಶ್ನೆ. ಬೇಡಿಕೆ ಈಡೇರಿಸುವವರೆಗೆ ಹೋರಾಟ ನಿಲ್ಲದು” ಎಂದು ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.

ಧರಣಿಯಲ್ಲಿ ರವಿ ವನಹಳ್ಳಿ, ಹಣಮಂತ್ರಯಗೌಡ ಬಿರಾದಾರ, ಭಾಷಸಾಬ ಮನಗೂಳಿ, ಶರಣಬಸ್ಸು ಪಟ್ಟಣಶೆಟ್ಟಿ, ಶಿವರೆಡ್ಡಿ ಕರವಿನ, ಗೌಡಪ್ಪ ಚೌದ್ರಿ, ಎನ್‌.ಡಿ. ಪಾಟೀಲ, ವಿಜಯಕುಮಾರ ಉಕ್ಕಲಿ, ಮಲ್ಲಿಕಾರ್ಜುನ ಉಕ್ಕಲಿ, ವಿನೋದ ಬಿರಾದಾರ, ಗೌಡಪ್ಪಗೌಡ ಅಸ್ಕಿ, ಶಂಕ್ರಯ್ಯ ಹಿರೇಮಠ, ಮಹದೇವಪ್ಪ ಚಟ್ನಳ್ಳಿ, ಶಿವಪ್ಪ ಹೂಗಾರ, ಸಂಗಮೇಶ ಹುಣಸಗಿ ಸೇರಿದಂತೆ ಅನೇಕರು ಭಾಗವಹಿಸಿದರು. ಹೋರಾಟ ಸಮಿತಿಯ ಅಧ್ಯಕ್ಷ ದಶರತಸಿಂಗ್ ಮನಗೂಳಿ, ಎಸ್‌.ಬಿ. ಕಟ್ಟಿಮನಿ, ಮುತ್ತಪ್ಪ ಚಮಲಾಪುರ, ಕಾಶೀನಾಥ ಮುರಾಳ, ಮುರಿಗೆಪ್ಪ ಸರಶೆಟ್ಟಿ, ದತ್ತು ಹೆಬಸೂರ, ಪರಶುರಾಮ ತಂಗಡಗಿ, ವಿಜಯಸಿಂಗ್ ಹಜೇರಿ, ಮಹೇಶ ಛಲವಾದಿ, ಪ್ರಕಾಶ್ ಹಜೇರಿ, ಮುದಕಪ್ಪ ಬಡಿಗೇರ ಸೇರಿದಂತೆ ಹಲವರು ಹಾಜರಿದ್ದರು.