ಪ್ರಜಾ ಜಾಗೃತಿ ವೇದಿಕೆ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಬೇಡಿಕೆಗಳ ಮನವಿ
Praja Jagruti Vedike office bearers went to the District Collector's office and through him submitte
ಲೋಕದರ್ಶನ ವರದಿ .
ವಿಜಯನಗರ 21: ಜಿಲ್ಲಾ ಪ್ರಜಾ ಜಾಗೃತಿ ವೇದಿಕೆ ಪದಾಧಿಕಾರಿಗಳು ಇಂದು ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ವೈ.ಯಮುನೇಶ್ ಮಾತನಾಡಿ ರಾಜ್ಯ ಸರ್ಕಾರ ಕಳೆದ ವರ್ಷ ಏಪ್ರೀಲ್-ಮೇ ತಿಂಗಳಲ್ಲಿ ರಾಜ್ಯಾಧ್ಯಂತ ನಗರ ಪ್ರದೇಶದ ಅನಧಿಕೃತ ಬಡಾವಣೆ ನಿವಾಸಿಗಳಿಗೆ ಬಿ-ಖಾತೆ ನೀಡಿರುವುದು, ಸ್ವಾಗತಾರ್ಹವಾಗಿದೆ. ಇದರಿಂದ ಜಿಲ್ಲಾಧಿಕಾರಿಗಳಿಂದ ಭೂ-ಪರಿವರ್ತನೆಯಾಗದ ನಗರಾಭಿವೃದ್ಧಿ ಪ್ರಾಧಿಕಾರದ ಅನುಮತಿ ಇಲ್ಲದೆ, ಕಂದಾಯ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡಿರುವ ನಿವೇಶನ ಹೊಂದಿರುವ ಲಕ್ಷಾಂತರ ಜನರಿಗೆ ಅನುಕೂಲವಾಗಿದೆ.
ಆದರೆ ಸರ್ಕಾರದ ಈ ಕ್ರಮ ಬಿ-ಖಾತಾದಾರರಿಗೆ ಪೂರ್ಣ ಪ್ರಮಾಣದಲ್ಲಿ ಪ್ರಯೋಜನವಾಗುತ್ತಿಲ್ಲ. ಏಕೆಂದರೆ ಬಿ-ಖಾತಾ ದಾಖಲೆ ಅಷ್ಠೇನು ಸುರಕ್ಷಿತ ಹಾಗೂ ಕಾನೂನು ಬದ್ಧವಾಗಿಲ್ಲ ಎಂಬ ಅಭಿಪ್ರಾಯವಿದೆ. ಅಲ್ಲದೇ ಬಿ-ಖಾತಾ ಆಸ್ತಿಯ ಮಾಲೀಕರು ತಮ್ಮ ಮಕ್ಕಳ ಮದುವೆ, ಶಿಕ್ಷಣ, ತುರ್ತು ವೈಧ್ಯಕೀಯ ಚಿಕಿತ್ಸೆ ಪಡೆಯಲು, ಹಾಗೂ ಸರ್ಕಾರದಿಂದ ಸೌಲಭ್ಯ ಪಡೆಯಲು ಕೆಲವು ಕಾನೂನಾತ್ಮಕ ಸಮಸ್ಯೆಗಳು ಎದುರಾಗುತ್ತಿವೆ. ಸರ್ಕಾರ ಈ ಸಮಸ್ಯೆಯನ್ನು ತೀವ್ರವಾಗಿ ಪರಿಗಣಿಸಿ 6 ತಿಂಗಳ ಹಿಂದೆಯೇ ಬಿ-ಖಾತಾ ಮಾಲೀಕರಿಗೆ ಎ-ಖಾತಾ ದಾಖಲೆ ನೀಡಲು ತೀರ್ಮಾನಿಸಿದ್ದರೂ, ಈವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಇದರಿಂದ ಬಿ-ಖಾತಾ ಮಾಲೀಕರಿಗೆ ವಿಪರೀತ ತೊಂದರೆಯಾಗುತ್ತಿದೆ. ಆದುದರಿಂದ ರಾಜ್ಯ ಸರ್ಕಾರವು ಕೂಡಲೇ ಬಿ-ಖಾತಾ ಆಸ್ತಿ ಮಾಲೀಕರಿಗೆ ಹೆಚ್ಚು ಸುರಕ್ಷಿತ ಹಾಗೂ ಅಧಿಕೃತ ಹಾಗೂ ಕಾನೂನು ಬದ್ದ ಎ-ಖಾತಾ ನೀಡಲು ಆಗ್ರಹ ಪಡಿಸುತ್ತೇವೆ.
ನಂತರ ವೇದಿಕೆಯ ಅಧ್ಯಕ್ಷರಾದ ಯು.ಆಂಜನೇಯಲು ಮಾತನಾಡಿ ಆಸ್ತಿ ನಿವೇಶನಗಳ ಮಾರಾಟ ಮತ್ತು ಕ್ರಯ ವ್ಯವಹಾರ ನಡೆಸುವಾಗ ಫಾರಂ-3 ಅತ್ಯಂತ ಅವಶ್ಯವಾಗಿದೆ. ಆದರೆ ಫಾರಂ-3 ನವೀಕರಣ ದಾಖಲೆ ನೀಡಿಕೆಗೆ ಹೊಸಪೇಟೆ ನಗರ ಸಭೆಯಲ್ಲಿ ಅನವಶ್ಯಕವಾಗಿ ಈ ಹಿಂದೆ ನೀಡಿದ ಕಡ್ಡಾಯ ಪಡಿಸಿರುವುದು ಸರಿಯಲ್ಲ. ಏಕೆಂದರೆ ಮೊದಲನೇ ಸಲ ಹೊಸದಾಗಿ ಫಾರಂ-3 ಪಡೆಯಲು ಅರ್ಜಿ ಸಲ್ಲಿಸುವಾಗ ಜಿಲ್ಲಾಧಿಕಾರಿಗಳ ಭೂ-ಪರಿವರ್ತನ ಆದೇಶ, ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಂತಿಮ ಅನುಮೋದನೆ, ವಸತಿ ನಿವೇಶನಗಳ ನೀಲಿ ನಕ್ಷೆ, ಪ್ರಮಾಣ ಪತ್ರ, ಸಬ್‌ರಿಜಿಸ್ಟರ್ ಕಛೇರಿಯ ಇ.ಸಿ. ತೆರಿಗೆ ಪಾವತಿ ರಶೀದಿ, ಕ್ರಯ ಪತ್ರ, ಪಾಲುವಿಭಾಗ ಪತ್ರ, ಈ ಎಲ್ಲಾ ದಾಖಲೆಗಳನ್ನು ಮೊದಲೇ ನಗರಸಭೆಗೆ ಸಲ್ಲಿಸಲಾಗಿರುತ್ತದೆ. ಆದುದರಿಂದ ಎರಡನೇ ಸಲ ಫಾರಂ-3 ನವೀಕರಣಕ್ಕೆ ಮತ್ತೊಮ್ಮೆ ಹಿಂದಿನ ದಾಖಲೆಗಳನ್ನು ಕೇಳುವುದು ಸೂಕ್ತವಲ್ಲ. ಆದುದರಿಂದ ತೀರಾ ಅಗತ್ಯವಾಗಿರುವ ಚಾಲ್ತಿ ವರ್ಷದ ತೆರಿಗೆ ಪಾವತಿ ರಶೀದಿ ಮತ್ತು ಹಿಂದೆ ವಿತರಿಸಿದ ಹಳೇಯ ಫಾರಂ-3 ಪ್ರತಿ ಪಡೆದು ನವೀಕರಣ ದಾಖಲೆ ವಿತರಿಸಲು ಆಗ್ರಹಿಸಿದರು.
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್ 