ಶ್ರೀನಗರದಲ್ಲಿ ಪ್ರಭಾಕರ್ ಕೋರೆ ಕೋ-ಆಪ್ ಸೊಸೈಟಿಯ ನವೀಕೃತ ಶಾಖೆ ಉದ್ಘಾಟನೆ
Prabhakar Kore Co-op Society's renovated branch inaugurated in Srinagar
ಬೆಳಗಾವಿ (ಮಾಂಜರಿ)17: ರಾಜ್ಯ ಸಭೆಯ ಮಾಜಿ ಸದಸ್ಯ ಹಾಗೂ ಕೆ ಎಲ್ ಈ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ ಪ್ರಭಾಕರ ಕೋರೆ ಹಾಗೂ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಅಜೀವ ಸದಸ್ಯೆ ಡಾ ಪ್ರೀತಿ ದೊಡ್ಡವಾಡ ಇವರ ಮಾರ್ಗದರ್ಶನದಲ್ಲಿ ಸಹಕಾರಿ ಸಂಘದಲ್ಲಿ ಕಾರ್ಯನಿರ್ವಹಿಸುತ್ತಿರುವ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಡಾ ಪ್ರಭಾಕರ್ ಕೋರೆ ಕೋ ಅಪ್ ಕ್ರೆಡಿಟ್ ಸೊಸೈಟಿಯ ರಾಜ್ಯದ ಶಾಖೆಗಳನ್ನು ಮೂಲೆ ಮೂಲೆಗಳಲ್ಲಿ ಸ್ಥಾಪಿಸಿ ಮುಂದಿನ ದಿನಮಾನಗಳಲ್ಲಿ ಸಹಕಾರಿ ಸಂಘದಲ್ಲಿ ಅಧುನಿಕ ತಂತ್ರಜ್ಞಾನ ಅಳವಡಿಕೆಯಿಂದ ಸದಸ್ಯರಿಗೆ ಮತ್ತು ಗ್ರಾಹಕರಿಗೆ ತ್ವರಿತ ಸೇವೆ ನೀಡಲು ಪ್ರಯತ್ನಿಸುತ್ತಿದ್ದೆವು ಮತ್ತು ಸಂಸ್ಥೆಯ ಮುಂದಿನ ದಿನಮಾನಗಳಲ್ಲಿ ನೆರೆಯ ಮಹಾರಾಷ್ಟ್ರ ರಾಜ್ಯದಲ್ಲಿ 20ಕ್ಕೂ ಹೆಚ್ಚು ಶಾಖೆಗಳನ್ನು ಪ್ರಾರಂಭಿಸುವುದಾಗಿ ಸಂಸ್ಥೆಯ ಆಮಂತ್ರಿತ ನಿರ್ದೇಶಕ ಹಾಗೂ ರಾಷ್ಟ್ರೀಯ ಸಕ್ಕರೆ ಕಾರ್ಖಾನೆ ಮಹಾಮಂಡಲ ನವದೆಹಲಿ ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಅಮಿತ್ ಕೋರೆ ಹೇಳಿದರು.
ಅವರು ಗುರುವಾರದಂದು ಬೆಳಗಾವಿ ಶ್ರೀನಗರದಲ್ಲಿರುವ ಪ್ರಭಾಕರ್ ಕೋರೆ ಕೋ-ಆಪ್ ಕ್ರೆಡಿಟ್ ಸೊಸೈಟಿಯ ನವೀಕೃತ ಶಾಖೆಯನ್ನು ಉದ್ಘಾಟಿಸಿ ಹಾಗೂ ಶಾಖೆಯನ್ನು ರೂಪಾಯಿ 10 ಕೋಟಿ ಠೇವಣಿ ಸಂಗ್ರಹ ಸಂಕಲ್ಪ ಪೂರ್ತಿ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು. ಅಮೀತ ಕೋರೆ ಮಾತನಾಡಿ ಸಹಕಾರಿ ಕ್ಷೇತ್ರ ಪ್ರಗತಿಗಾಗಿ ಸಂಸ್ಥೆಯ ಶಾಖೆಗಳನ್ನು ಪ್ರಾರಂಭಿಸುವುದು ಮತ್ತು ಆರ್ಥಿಕವಾಗಿ ಬಲಪಡಿಸುವುದು ಅವಶ್ಯಕವಾಗಿದ್ದು ಶಾಖೆಯು ಅತಿ ಕಡಿಮೆ ಅವಧಿಯಲ್ಲಿ ರೂ.10 ಕೋಟಿಗೂ ಮಿಕ್ಕಿ ಠೇವು ಸಂಗ್ರಹಿಸಿದ್ದು ಹಾಗೆಯೆ ಸಾಮಾನ್ಯ ಜನರ ಅಭಿವೃದ್ಧಿಗಾಗಿ ರೂ.1.50 ಕೋಟಿ ಸಾಲವನ್ನು ನೀಡಿರುತ್ತದೆ. ವಾರ್ಷಿಕ ವಹಿವಾಟು ರೂ.22076.36 ಕೋಟಿಗೂ ಹೆಚ್ಚು ನಿವ್ವಳ ಲಾಭ 5.25.30 ಕೋಟಿಗೂ ಮಿಕ್ಕಿ ಲಾಭವನ್ನು ಹೊಂದಿದೆ ಎಂದು ಅವರು ಹೇಳಿದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಮಹಾಂತೇಶ್ ಪಾಟೀಲ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲ್ಲಿಕಾರ್ಜುನ್ ಕೋರೆ ಕೆಎಲ್‌ಇ ಸಂಸ್ಥೆಯ ಅಜೀವ ಸದಸ್ಯ ಹಾಗೂ ಸಂಸ್ಥೆಯ ನಿರ್ದೇಶಕಿ ಡಾ ಪ್ರೀತಿ ದೊಡ್ಡವಾಡ ಹಾಜರಿದ್ದರು.
ನವೀಕೃತ ಶಾಖೆಯ ಕಾರ್ಯಾಲಯ ಹಾಗೂ 10 ಕೋಟಿ ಸಂಗ್ರಹಣೆ ಸಂಕಲ್ಪ ಪೂರ್ತಿ ಸಮಾರಂಭವು ಅಮಿತ್ ಕೋರೆ ಮತ್ತು ಡಾ. ಪ್ರೀತಿ ದೊಡ್ಡವಾಡ ಇವರ ಹಸ್ತದಿಂದ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಪಾಟೀಲ ಉಪಾಧ್ಯಕ್ಷ ಸಿದ್ದಗೌಡ ಮಗದುಮ್ಮ ನಿರ್ದೇಶಕರಾದ ಮಲ್ಲಿಕಾರ್ಜುನ ಕೋರೆ ಡಾ. ಪ್ರೀತಿ ದೊಡವಾಡ, ಅಣ್ಣಾಸಾಹೇಬ ಸಂಕೇಶ್ವರಿ, ಬಸನಗೌಡ ಆಸಂಗಿ, ಸುಕುಮಾರ್ ಚೌಗುಲೆ, ಪಿಂಟು ಹಿರೇಕುರುಬರ, ಅಮಿತ್ ಜಾಧವ, ಪ್ರಫುಲ್ ಶೆಟ್ಟಿ, ಅನಿಲ ಪಾಟೀಲ, ಶೋಭಾ ಜಕಾತೆ, ಪಾರ್ವತಿ ಧರನಾಯಿಕ, ಜಯಶ್ರೀ ಮೇದಾರ, ಶ್ರೀಕಾಂತ ಉಮರಾನೆ, ವಿವೇಕ ಕಮತೆ ಸ್ಥಳಿಯ ಸಲಹಾ ಸಮಿತಿ ಅಧ್ಯಕ್ಷ ಧರೆಪ್ಪ ಕೇರೂರೆ, ನಿರ್ದೇಶಕರಾದ ಮಹಾಂತೇಶ ಸೊಬರದ, ಬಸವರಾಜ ಹಮ್ಮಣ್ಣವರ, ಚಿದಾನಂದ ಬುಕಿಟಗಾರ, ಸೋಮಶೇಖರ ಹಿರೇಮಠ, ಮಯಾಪ್ಪ ತುಳಸಿಗೇರಿ, ಮನೀಷ ಭವಾನೆ ಮತ್ತು ಸುಭಾಷ ಏಣಗಿ ಉಪಸ್ಥಿತರಿದ್ದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಿ ಎ. ಕರೋಶಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 