ಅಧಿಕಾರ ಶೋ ಮಾಡಕ್ಕಲ್ಲ, ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡಲಿ - ಶಾಸಕ ಕೃಷ್ಣನಾಯಕ
Power is not for show; let the guarantee schemes be implemented – MLA Krishna Nayaka
ಹೂವಿನಹಡಗಲಿ: ಆ. 30- ಅಧಿಕಾರ ಶೋ ಮಾಡಕ್ಕಲ್ಲ, ಕಳೆದ ಐದಾರು ತಿಂಗಳಿಂದ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಪಾವತಿಯಾಗಿಲ್ಲ. ತಾಲ್ಲೂಕಿನಲ್ಲಿ ಬಸ್ಸುಗಳು ಮಾರ್ಗಮಧ್ಯೆ ನಿಲ್ಲುತ್ತಿವೆ. ಪರಿಷ್ಕರಣೆ ನೆಪದಲ್ಲಿ ಸಾಮಾಜಿಕ ಭದ್ರತೆಯ ಪಿಂಚಣಿಗಳು ಸ್ಥಗಿತವಾಗಿವೆ. ಅವರಿಗೆ ಕಾಳಜಿ ಇದ್ದರೆ ಈ ಗಮನಹರಿಸಲಿ ’ಎಂದು ಶಾಸಕ ಕೃಷ್ಣನಾಯಕ ತಿರುಗೇಟು ನೀಡಿದ್ದಾರೆ.ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ’ಪಿ.ಟಿ.ಪರಮೇಶ್ವರ ನಾಯ್ಕ ಅವರಿಗೆ ಸರ್ಕಾರ ಅಧಿಕಾರ ನೀಡಿರುವುದು.
ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಹೊರತು ಶೋ ಮಾಡಲು ಅಲ್ಲ. ನಾಲ್ಕು ಬಾರಿ ಶಾಸಕ, ಆದಂತವರಿಗೆ ಸಚಿವ ಕಾನೂನಿನ ಕನಿಷ್ಠ ತಿಳಿವಳಿಕೆ ಇಲ್ಲದಿರುವುದು ದುರಾದೃಷ್ಟಕರ’ ಎಂದರು.ಕಾನೂನು ಮೀರಿ ವರ್ತಿಸಿದ್ದರಿಂದಲೇ ಆಪ್ತ ಕಾರ್ಯದರ್ಶಿ ಸುಬ್ರಹ್ಮಣ್ಯ ಅವರು ಹುದ್ದೆ ತೊರೆದಿದ್ದಾರೆ. ಸಚಿವರ ಹೊರತಾಗಿಯೂ ಸರ್ಕಾರ ನೂರಾರು ಜನರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿದೆ. ಯಾರೂ ಎಸ್ಕಾ-ರ್ಟ್‌ನಲ್ಲಿ ಓಡಾಡುತ್ತಿಲ್ಲ. ಇವರು ಕ್ಷೇತ್ರದ ಜನರಿಗೆ ಹೆದರಿ ಎಸ್ಕಾರ್ಟ್ ಬಯಸುತ್ತಿ-ದ್ದಾರೆ’ ಎಂದು ಟಾಂಗ್ ನೀಡಿದರು.
’ಕೆರೆಗಳನ್ನು ತುಂಬಿಸುವ ವಿಚಾರವಾಗಿ ಸಾಮಾನ್ಯ ವ್ಯಕ್ತಿಯಾಗಿಅಧಿಕಾರಿಗಳ ಜತೆ ಚರ್ಚಿಸಿದ್ದರೆ ಅಭ್ಯಂತರ ಇರುತ್ತಿರಲಿಲ್ಲ. ನೈಜ ಕಾಳಜಿಯಿಂದ ಆಮಂತ್ರಿಸಿದ್ದರೆ ಸಭೆಯಲ್ಲಿ ನಾನೇಭಾಗವಹಿಸುತ್ತಿದ್ದೆ. ಅದರೆ, ಅವರು ಉಸ್ತುವಾರಿ ಸಚಿವರ ಮಾದರಿಯಲ್ಲಿ ಅಧಿಕಾರಿಗಳಿಗೆ ಪತ್ರ ಬರೆದು ಸಭೆ ಮಾಡಿದ್ದಾರೆ. ಇದರಿಂದ ಶಾಸಕನಾದ ನನ್ನ ಹಕ್ಕಿಗೆ ಚ್ಯುತಿಯಾಗಿದ್ದರಿಂದ ಸರ್ಕಾರಕ್ಕೆ ಪತ್ರ ಬರೆಯಬೇಕಾಯಿತು’ ಎಂದು ತಿಳಿಸಿದರು.ಬರಗಾಲ ನಿರ್ವಹಣೆಗೆ ?50 ಕೋಟಿ ಕೊಡಲಿ: ಬರಪೀಡಿತ ಪ್ರದೇಶವೆಂದು ಘೋಷಿಸಿರುವ ಸರ್ಕಾರ ಕ್ಷೇತ್ರದಲ್ಲಿ ಬರಗಾಲ ನಿರ್ವಹಣೆಗೆ ?50 ಕೋಟಿ ಅನುದಾನ ಬಿಡುಗಡೆಗೊಳಿಸಬೇ-ಕು. ಮಳೆ ಇಲ್ಲದೇ ಸಂಕಷ್ಟದಲ್ಲಿರುವ ರೈತರಿಗೆ ಎಕರೆಗೆ ?50 ಸಾವಿರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 