ನಾಳೆ ಕೊಪ್ಪಳದಲ್ಲಿ ಕವಿ ಸಮ್ಮೇಳನ ಹಾಗೂ ಕುಲ್ ಹಿಂದ್ ಮುಷಾಯರಾ , ಪೋಸ್ಟರ್ ಬಿಡುಗಡೆ
Poet's conference and Kul Hind Mushaira to be held in Koppal tomorrow, poster release
ನಾಳೆ ಕೊಪ್ಪಳದಲ್ಲಿ ಕವಿ ಸಮ್ಮೇಳನ ಹಾಗೂ ಕುಲ್ ಹಿಂದ್ ಮುಷಾಯರಾ , ಪೋಸ್ಟರ್ ಬಿಡುಗಡೆ
ಕೊಪ್ಪಳ 23: ನಗರದ ಸಾಹಿತ್ಯ ಭವನದಲ್ಲಿ ದಿ, 25 ರ ಶನಿವಾರ ರಾತ್ರಿ 9:00 ಗಂಟೆಗೆ ಅಖಿಲ ಭಾರತ ಬೃಹತ್ ಕವಿಗೋಷ್ಠಿ ಹಾಗೂ ಕುಲ್ ಹಿಂದ್ ಮುಷಾಯರಾ ಕಾರ್ಯಕ್ರಮ ಪ್ರತಿ ವರ್ಷದಂತೆ ಈ ವರ್ಷವೂ ಸಹ ಕರ್ನಾಟಕ ಉರ್ದು ಅಕಾಡೆಮಿ ಅವರ ಸಂಯುಕ್ತ ಆಶ್ರಯ ದಲ್ಲಿ ಜರುಗಲಿದ್ದು ಇದರ ಪೋಸ್ಟರ್ ಅನ್ನು ನಗರ ಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಮತ್ತು ಮೌಲಾನ ಹಾಫೀಸ್ ಮಹಮ್ಮದ್ ಮೊಹಿಯುದ್ದೀನ್ ಖಾದ್ರಿ ತಸ್ಕಿನಿ ರವರು ಜಂಟಿಯಾಗಿ ಬಿಡುಗಡೆ ಗೊಳಿಸಿ ಮಾತನಾಡಿ ಕಾರ್ಯಕ್ರಮ ಯಶಸ್ವಿಗೊಳಿಸಲು ಮನವಿ ಮಾಡಿಕೊಂಡರು, ಮಾಜಿ ಸದಸ್ಯ ಹಾಗೂ ಸಮಾಜದ ಮುಖಂಡ ಎಂ ಮಾನ್ವಿ ಪಾಶಾ ಮತ್ತು ನಗರ ಆಶ್ರಯ ಸಮಿತಿ ಸದಸ್ಯ ಹುಸೇನ್ ಪೀರಾ ಮುಜಾವರ್ ಕಾರ್ಯ ಕ್ರಮದ ವಿವರ ಪ್ರಕಟಗೊಳಿಸಿದರು,ಕೊಪ್ಪಳದಲ್ಲಿ ಜರುಗಿದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ವಿಶೇಷ ಆಮಂತ್ರಿತರಾಗಿ ಗಣ್ಯರು ಪಾಲ್ಗೊಂಡು ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಪಡೆದುಕೊಂಡ ಬಳಿಕ ಸಾರ್ವಜನಿಕರಿಗೆ ಮಾಹಿತಿ ನೀಡಲು ಕಾರ್ಯಕ್ರಮದ ವಿವರಣೆ ಪ್ರಕಟಗೊಳಿಸಿದರು,ನಗರದ ಫಿರ ದೋಸ್ ಸಾಂಸ್ಕೃತಿ ಕ್ರೀಡೆ ಮತ್ತು ತರಬೇತಿ ಸಂಸ್ಥೆ ಯ ವತಿಯಿಂದ ಜರುಗಲಿರುವಸದರಿ ಬೃಹತ್ ಕವಿ ಸಮ್ಮೇಳನ ಹಾಗೂ ಉರ್ದು ಕುಲ್ ಹಿಂದ್ ಮುಷಾಯರಾ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರ ಮಟ್ಟದ ಉರ್ದು ಹಿಂದಿ ಸಾಹಿತಿ ಮತ್ತು ಕವಿಗಳು ಪಾಲ್ಗೊಂಡು ಕವನ ವಾಚನ ಮಾಡಲಿದ್ದಾರೆ,ಅಂದು ರಾತ್ರಿ ಒಂಬತ್ತು ಗಂಟೆಯಿಂದ ಬೆಳಗಿನ ಜಾವ ದ ವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ನಮ್ಮ ದೇಶದ ಹಿರಿಯ ಕವಿ ಮತ್ತು ಸಾಹಿತಿಗಳಾದ ಗಾಜಿಯಾ ಬಾದಿನ ಗೋವಿಂದ್ ಗುಲ್ಶನ್, ಶಕೀಲ್ ಅಹಮದ್ ಮುಂಬೈ, ನದೀಮ್ ಶಾದ್ ದೇವಬಂಧ ,ಸುರೇಂದರ್ ಸಿಂಗ್ ಶಜರ್, ಅಬರಾರ ಕಾಶಿಫ್ ಅಮರಾವತಿ, ಅನಾ ದೆಹಲ್ವಿ ದೆಹಲಿ,
ಹಾಮಿದ ಭೂಸಾವಲ್ಲಿ, ಚಾಚಾ ಪಾಲಠುರಿ ತೆಲಂಗಾಣ, ಚಾಂದನಿ ಪಾಂಡೆ ಕಾನ್ಪುರ್, ಸಿರಾಜ್ ಸೋಲಾಪುರಿ ಮುಂಬೈ, ಸುಹಾನಾ ನಾಜ್ ಮುಂಬೈ, ವೀನೀತ್ ಶಂಕರ್ ಪುಣೆ, ರಾಧಿಕಾ ಮಿತ್ತಲ್ ದೆಹಲಿ, ಮಡ್ಡಿ ಕ್ರಸ್ಟಿ ಪುಣೆ, ಹಾಗೂ ರಾಯಚೂರಿನ ಡಾ, ಇಫ್ತೆ ಕಾರ್ ಶಕೀಲ್, ಮತ್ತು ಸ್ಥಳೀಯ ಕೊಪ್ಪಳದ ಹಿರಿಯ ಸಾಹಿತಿ ಮತ್ತು ಕವಿಗಳಾದ ಅನ್ವರ್ ಹುಸೇನ್, ಮೌಲಾನ ಮಹಮ್ಮದ್ ಅಲಿ ಹಿಮಾಯಿತಿ ಹಾಗೂ ವಿಜಾರತ್ ಅಲಿ ತಾಯರ್ ರವರು ತಮ್ಮ ಕವನ ವಾಚನ ಮಾಡಲಿದ್ದಾರೆ ಇದರಲ್ಲಿ ಇಬ್ಬರು ಹಾಸ್ಯ ಕವಿಗಳು ಪಾಲ್ಗೊಂಡು ಎಲ್ಲರನ್ನು ಭಾರಿ ಪ್ರಮಾಣದ ಹಾಸ್ಯಮಯ ಕವನ ವಾಚನ ಮಾಡಿ ಜನರನ್ನು ರಂಜಿಸಲಿದ್ದಾರೆ, ಮುಷಾಯಿರ ಕಾರ್ಯಕ್ರಮದ ನಿರೂಪಣೆಯನ್ನು ಕೊಪ್ಪಳದ ಉರ್ದು ಸಾಹಿತಿ ವಾಗ್ಮಿ ಮಹಮ್ಮದ್ ಬದಿಯುದ್ದೀನ್ ಅಹಮದ್ ನವೀದ ನೆರವೇರಿಸಲಿದ್ದಾರೆ,ಕಾರ್ಯಕ್ರಮದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ವಿವಿಧ ಗಣ್ಯರು ಅಧಿಕಾರಿ ವರ್ಗದವರು ಕರ್ನಾಟಕ ಉರ್ದು ಅಕಾಡೆಮಿಯ ಅಧ್ಯಕ್ಷ ಮತ್ತು ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು, ಈ ಸಂದರ್ಭದಲ್ಲಿ ಸಮಾಜದ ಯುವ ನಾಯಕ ಸಲೀಂ ಅಳವಂಡಿ ,ಹಿರಿಯ ಸಾಹಿತಿ ಅನ್ವರ ಹುಸೇನ್, ಸಮದ ಸಿದ್ದಿಕಿ,ಸಾಧಿಕ್ ಅಲಿ, ಇಬ್ರಾಹಿಂ ಪಟೇಲ್ ವಿಜಾರತ್ ಅಲಿ, ದಾವುದ ಹುನಗುಂದ, ಯುವ ನಾಯಕ ಹಬೀಬ್ ಖಾನ್, ಸಿದ್ದೀಕ್ ಹುಸೇನ್ ಕರ್ಕಿಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು,
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 