ಗಿಡಗಳನ್ನು ನೆಟ್ಟು ರಕ್ಷಿಸಿ ಬೆಳೆಸಿ ಅವು ನಮ್ಮನ್ನು ರಕ್ಷಿಸುತ್ತವೆ : ಡಾ.ಅನಿಲಕುಮಾರ ಇರಾಜ

ಗಿಡಗಳನ್ನು ನೆಟ್ಟು ರಕ್ಷಿಸಿ ಬೆಳೆಸಿ ಅವು ನಮ್ಮನ್ನು ರಕ್ಷಿಸುತ್ತವೆ : ಡಾ.ಅನಿಲಕುಮಾರ ಇರಾಜ Plant, protect and nurture trees to protect us: Dr. Anil Kumar Iraja

ತಾಳಿಕೋಟಿ 07 : ಬದಲಾದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಹಜವಾಗಿ ಬದುಕುವದನ್ನು ಜಗತ್ತಿನ ಜನ ಮರೆತಿದ್ದೇವೆ, ಆಧುನಿಕ ತಂತ್ರಜ್ಞಾನದ ಬೆಳವಣಿಗೆಯ ಪರಿಣಾಮವಾಗಿ ಪರಿಸರ ನಾಶ ಮಾಡುತ್ತ ನಾವು ನಮ್ಮ ಸರಳ ಬದುಕನ್ನು ಕಸಿದುಕೊಂಡು ಪರದಾಡುತಿದ್ದೇವೆ ,ಇದೇ ರೀತಿಯಲ್ಲಿ ಮುಂದುವರಿದರೆ ಮುಂದಿನ ತಲೆಮಾರಿನ ಜನರಿಗೆ ನಾವು ಸಂಪೂರ್ಣ ಕಲುಷಿತ ಭೂಮಿಯನ್ನು ಬಿಟ್ಟು ಹೋಗಬೇಕಾದೀತು, ಈಗಲೆ ಎಚ್ಚರಗೊಳ್ಳಬೇಕು ಎಂದು ಡಾ.ಅನಿಲಕುಮಾರ ಇರಾಜ ಅಭಿಪ್ರಾಯ ಪಟ್ಟರು. ಅವರು ಪಟ್ಟಣದ ಎಸ್‌.ಕೆ.ಬಾಲಕಿಯರ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಸಸಿ ನೆಟ್ಟು ಮಾತನಾಡುತ್ತ ಹೀಗೆ ಹೇಳಿದರು.  ಈ ಸಂದರ್ಭದಲ್ಲಿ ಶಿಕ್ಷಕರಾದ ಎಮ್‌.ಎಮ್‌.ಕಾಂಬಳೆ, ಪಿ.ಎಮ್‌.ಬೆಳಗಲ್ಲ, ಎಮ್‌.ವಾಯ್‌.ಕೇಸರಿ, ಪಿ.ಪಿ.ಬಸರಕೋಡ ಎಲ್‌.ಆರ್ ಹಯ್ಯಾಳ, ಸಹನಾ ಕಶೆಟ್ಟಿ, ಎಮ್‌.ವಾಯ್‌.ಚಲವಾದಿ, ಹರೀಶ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.