ದೈಹಿಕ ಶಿಕ್ಷಕ ಗಡದ ಸೇವಾ ನಿವೃತ್ತಿ: ಬಿಳ್ಕೊಡುವ ಸಮಾರಂಭ
Physical education teacher Gadad's retirement from service: Farewell ceremony
ನೇಸರಗಿ 24: ಸಮೀಪದ ದೇಶನೂರ ಗ್ರಾಮದ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಆಶ್ರಮ ಶಾಲೆಯ ದೈಹಿಕ ಶಿಕ್ಷಕರಾದ ಎ.ಎಸ್. ವರ ಇವರ ಸೇವಾ ನಿವೃತ್ತಿಯ ನಿಮಿತ್ತ ಬಿಳ್ಕೊಡುವ ಸಮಾರಂಭ ನಡೆಯಿತು.
ಸಾನಿಧ್ಯವನ್ನು ಸ್ನಾನಿಕ ಅರುಳಪ್ಪರ ಮಠದ ಡಾ. ಫಾ. ಮೆನಿನೋ ಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ಬೆಳಗಾವಿ ಬಿಡಿಬಿಇ ಕಾರ್ಯದರ್ಶಿಗಳಾದ ಫಾ. ಜೆರಾಲ್ಡ್ ವಹಿಸಿದ್ದರು. ಮಕ್ಕಳೇ ದೇವರೆಂದು ಭಾವಿಸಿದ ಎ.ಎಸ್.ಗಡದವರ ಅವರು ಇಬ್ಬರು ಶಾಲಾ ಮಕ್ಕಳನ್ನು ಲಾಟರಿ ಮುಖಾಂತರ ಆಯ್ಕೆ ಮಾಡಿ ವಿಷ್ಣು ಕೊತ್ತಲ, ತನು ಎಮ್ಮಿ ಇವರ ಪಾದ ಪೂಜೆ ಮಾಡಿ ಶಾಲು ಹೊದಿಸಿ ಸನ್ಮಾನಿಸಿರುವದು ವಿಶೇಷವಾಗಿತ್ತು.ಇದೇ ವೇಳೆ ನಿವೃತ್ತರಾದ ಎ. ಎಸ್. ಗಡದವರ ಅವರು ಶಾಲೆಗೆ ಡಬ್ಬಲ್ ಡೋರ್ ದೊಡ್ಡ ಟ್ರೇಝರಿ, ಹಾಗೂ ಸ್ನಾನಿಕ ಅರುಳಪ್ಪರ ವಿರಕ್ತ ಮಠಕ್ಕೆ ರೂ. 11111=00 ಹಾಗೂ ಸಂವಿಧಾನ ಪೀಠಿಕೆ ಪೋಟೊವನ್ನು ದೇಣಿಗೆ ನೀಡಿದರು. ಬಿ.ಡಿ.ಬಿ.ಇ. ಹಾಗೂ ಸ್ನಾನಿಕ ಅರಳುಪ್ಪರ ಮಠ, ಎರಡೂ ಆಶ್ರಮ ಶಾಲೆಗಳ ಪರವಾಗಿ ಫಾ. ಜೆರಾಲ್ಡ್ ಡಿ ಸಿಲ್ವಾ, ಪೂಜ್ಯ ಡಾ.ಫಾ.ಮೆನಿನೋ, ಹಾಗೂ ಪ್ರಧಾನ ಗುರುಗಳು ಮತ್ತು ಸಿಬ್ಬಂದಿಗಳು ದೈಹಿಕ ಶಿಕ್ಷಕ ಎ.ಎಸ್. ಗಡದವರ ಅವರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಸಿಆರ್ ಸಿಗಳಾದ ರಾಜು ಹಕ್ಕಿ, ಗ್ರಾ.ಪಂ ಅಧ್ಯಕ್ಷೆ ಸುರೇಖಾ.ಬ. ಕೇದಾರಿ, ಉಪಾಧ್ಯಕ್ಷೆ ಶಂಕರಮ್ಮ, ಸಂ. ಚಡಿಚಾಳ, ದೇಶನೂರ ಪಿಕೆಪಿಎಸ್ ಅದ್ಯಕ್ಷ ಬಿ.ಬಿ.ಕೇದಾರಿ, ಮಾಜಿ ತಾ.ಪಂ ಸದಸ್ಯ ಎಸ್.ಬಿ.ಕಮತಗಿ, ದೈ.ಶಿ.ಪರೀವಿಕ್ಷಕ ಕೆ.ಎಸ್.ಕಾಂಬಳೆ, ಹಿ.ಪ್ರಾ.ಕೆ.ಹೆ.ಮ.ಆಶ್ರಮ ಶಾಲೆ ಪ್ರಧಾನ ಗುರುಗಳಾದ ಎಸ್.ಪಿ.ಪತ್ತಾರ, ಮೊಹರೆ .ಕಿ.ಪ್ರಾ.ಕೆ.ಜಿ.ಮ.ಆಶ್ರಮ ಶಾಲೆ ಪ್ರಧಾನ ಗುರುಗಳಾದ ಜಿ.ಬಿ.ಯರಗುದ್ದಿ, ಊರಿನ ಗಣ್ಯರು, ಶಿಕ್ಷಕರು ಇದ್ದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 