ಫಿನಿಕ್ಸ್‌ ಇಂಟರ್ನ್ಯಾಶನಲ್ ಶಾಲೆ ವಿದ್ಯಾರ್ಥಿ ನೀಟ್ ಸಾಧನೆ: ಸಂತೋಷ ದಾಸ್

ಫಿನಿಕ್ಸ್‌ ಇಂಟರ್ನ್ಯಾಶನಲ್ ಶಾಲೆ ವಿದ್ಯಾರ್ಥಿ ನೀಟ್ ಸಾಧನೆ: ಸಂತೋಷ ದಾಸ್  Phoenix International School student's NEET performance: Santosh Das

ಶಿಗ್ಗಾವಿ 31 :ನಮ್ಮ ವಿದ್ಯಾರ್ಥಿಯ ಸಾಧನೆ ಶಾಲೆಯ ಹೆಗ್ಗಳಿಕೆಯ ಮೈಲುಗಲ್ಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ವೈದ್ಯರನ್ನು ದೇಶಕ್ಕೆ ನೀಡುವುದು ನಮ್ಮ ಪಿನಿಕ್ಸ್‌ ಸಮೂಹ ಸಂಸ್ಥೆಯ ಗುರಿ ಎಂದು ಪ್ರಾಂಶುಪಾಲ ಸಂತೋಷ ದಾಸ ಹೇಳಿದರು. ಪಟ್ಟಣದಲ್ಲಿ ಪ್ರತಿಷ್ಠಿತ ಫಿನಿಕ್ಸ್‌ ಇಂಟರ್ನ್ಯಾಷನಲ್ ಶಾಲೆಯ 2023-24ನೇ ಬ್ಯಾಚ್‌ನ ವಿದ್ಯಾರ್ಥಿ ಪ್ರದೀಪ್ ವಡ್ಡರ ಇತ್ತೀಚೆಗೆ ನೀಟ್ ಪರೀಕ್ಷೆಯಲ್ಲಿ ಉತ್ತಮ ಶ್ರೇಯಾಂಕ ಪಡೆದಿದ್ದಕ್ಕಾಗಿ ಮಂಗಳೂರಿನ ಖ್ಯಾತ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಅಭ್ಯಾಸ ಮಾಡಲು ಅವಕಾಶ ದೊರೆತಿದೆ ಎಂದರು.  

ಶೈಕ್ಷಣಿಕ ಉಸ್ತುವಾರಿ ಶಶಾಂಕ ಕೌಜಲಗಿ ಮಾತನಾಡಿ ಸಾಧನೆ ವಿದ್ಯಾರ್ಥಿಯ ಪರಿಶ್ರಮದ ಜೊತೆಗೆ ಶಾಲೆಯು ನೀಡಿದ ನೀಟ್ ತರಬೇತಿ ಹಾಗೂ ಶಿಕ್ಷಕರ ಮಾರ್ಗದರ್ಶನದ ಫಲ ಎಂದರು.  ವಿದ್ಯಾರ್ಥಿಗಳ ಯಶಸ್ಸಿಗೆ ಭಾಜನರಾದ ಶಾಲೆಯ ಶಿಕ್ಷಕರನ್ನು ಸನ್ಮಾನಿಸಲಾಯಿತು. ನಂತರಪೋಷಕರು ಮಗುವಿನ ಯಶಸ್ಸಿಗೆ ಹೆಮ್ಮೆ ವ್ಯಕ್ತಪಡಿಸಿ, ಶಾಲೆಯ ಬೆಂಬಲಕ್ಕಾಗಿ ಧನ್ಯವಾದಗಳನ್ನು ಅರ​‍್ಿಸಿದರು. ಗ್ರಾಮಸ್ಥರು, ಸಹಪಾಠಿಗಳು ಮತ್ತು ಶಿಕ್ಷಕರು ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದು ಹಾರೈಸಿದರು.   

ವಿದ್ಯಾರ್ಥಿಗೆ ಶಾಲೆಯ ಆಡಳಿತ ಮಂಡಳಿಯ ಎಂ ಎಂ. ತಿರ್ಲಾಪುರ,ನರಹರಿ ಕಟ್ಟಿ, ರಾಣಿ ತಿರ್ಲಾಪುರ , ಹಾಗೂ ಬೋಧಕ ಹಾಗೂ ಬೋಧಕೇತರ ಸಿಬ್ಬಂಧಿ ಉಪಸ್ಥಿತರಿದ್ದರು.