ಗಣೇಶ ಮೂರ್ತಿ ಮರು ಸ್ಥಾಪನೆಗೆ ಅನುಮತಿ

ಗಣೇಶ ಮೂರ್ತಿ ಮರು ಸ್ಥಾಪನೆಗೆ ಅನುಮತಿ Permission for re-installation of Ganesha idol


ಲೋಕದರ್ಶನ ವರದಿ 

ಹೂವಿನಹಡಗಲಿ: 20-  ಪಟ್ಟಣದಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆವಿರೋಧ ಕುರಿತು ಶನಿವಾರ ತಾಪಂ ಕಚೇರಿಯಲ್ಲಿ ಹಿಂದೂ-ಮುಸ್ಲಿಂ ಮುಖಂಡರೊಂದಿಗೆ ಶಾಂತಿಸಭೆ ನಡೆಸಿದ ಡಿಸಿ ಕವಿತಾ ಎಸ್‌. ಮನ್ನಿಕೇರಿ, ಎಸ್ಪಿ ಎಸ್‌. ಜಾಹ್ನವಿ, ಗಣೇಶ ಮೂರ್ತಿ ಮರು ಪ್ರತಿಷ್ಠಾಪನೆ ಹಾಗೂ ವಿರೋಧಿಸಿದ್ದ ಇಸ್ಲಾಂಪೇಟೆ ಮೂಲಕವೇ ವಿಸರ್ಜನಾ ಮೆರವಣಿಗೆ ತೆರಳುವುದಕ್ಕೆ ಅನುಮತಿ ನೀಡಿ  ಪ್ರಕರಣ ವಿವಾದಕ್ಕೆ ತೆರೆ ಎಳೆದರು. ಈ ಕುರಿತು ಶುಕ್ರವಾರ ರಾತ್ರಿ ಮುಸ್ಲಿಂ ಯುವಕರು ಮತ್ತು ಮಹಿಳೆಯರು ಮೂರ್ತಿ ಮೆರವಣಿಗೆ ತಡೆದು ಇಸ್ಲಾಂಪೇಟೆಯಲ್ಲಿ ಪ್ರತಿಭಟನೆ ನಡೆಸಿದ್ದರು. ಇದನ್ನು ವಿರೋಧಿಸಿ ಹಿಂದೂಗಳು ನಿಯೋಜಿತ ಮಾರ್ಗದಲ್ಲೇ ಮೂರ್ತಿ ಮೆರವಣಿಗೆಗೆ ಸಾಗಲು ಪಟ್ಟುಹಿಡಿದಿದ್ದರು. ಸೂಕ್ಷ್ಮತೆ ಅರಿತ ಪೊಲೀಸರು, ಎರಡೂ ಕೋಮಿನವರೊಂದಿಗೆ ಚರ್ಚಿಸಿ ಬೇರೆ ಮಾರ್ಗದಲ್ಲಿ ಮೆರವಣಿಗೆ ಸಾಗಲು ಅನುವು ಮಾಡಿಕೊಟ್ಟಿದ್ದರು. ಈ ವಿವಾದ ತಣ್ಣಗಾಗದ ಹಿನ್ನೆಲೆಯಲ್ಲಿ ಮೂರ್ತಿ ಮರು ಪ್ರತಿಷ್ಠಾಪನೆ ಮತ್ತು ಉದ್ದೇಶಿತ ಮಾರ್ಗದಲ್ಲೇ ವಿಸರ್ಜನಾ ಮೆರವಣಿಗೆಗೆ ಅನುಮತಿ ನೀಡಿ ವಿವಾದಕ್ಕೆ ತೆರೆ ಎಳೆದರು. ಮಾಧ್ಯಮದವರನ್ನು ಹೊರಗಿಟ್ಟು ಸಭೆ ನಡೆಸಿದ್ದಕ್ಕೆ ಆಕ್ಷೇಪ ವ್ಯಕ್ತವಾಯಿತು.