ಖಾಯಂ ಜನತಾ ನ್ಯಾಯಾಲಯ ಪ್ರಮುಖ ಪಾತ್ರ ವಹಿಸುತ್ತದೆ

ಖಾಯಂ ಜನತಾ ನ್ಯಾಯಾಲಯ ಪ್ರಮುಖ ಪಾತ್ರ ವಹಿಸುತ್ತದೆ Permanent People's Court plays an important role

ಮುದ್ದೇಬಿಹಾಳ 31: ಸಾರ್ವಜನಿಕರ ಉಪಯುಕ್ತತೆಗಳ ವಿವಾದಗಳನ್ನು ಪರಿಹರಿಸುವಲ್ಲಿ ವಿವಿಧ ಪ್ರಕರಣಗಳನ್ನು ಅತ್ಯಂತ ಸರಳ ಮತ್ತು ಸುಲಲಿತವಾಗಿ ಇತ್ಯರ್ಥಪಡಿಸಲಾಗೊಳಿಸುವಲ್ಲಿ ಖಾಯಂ ಜನತಾ ನ್ಯಾಯಾಲಯ ಪ್ರಮುಖ ಪಾತ್ರ ವಹಿಸುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮುದ್ದೇಬಿಹಾಳ 5ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಸಚೀನ ಕೌಶಿಕ್, ಆರ್ ಎನ್  ತಿಳಿಸಿದರು. 

ಪಟ್ಟಣದ ಎಪಿಎಂಸಿ ಬಡಾವಣೆಯ ಕರ್ನಾಟಕ ಕೋಆಪ್ ಬ್ಯಾಂಕಿನ ಮಂಗಲಭವನದಲ್ಲಿ ತಾಲೂಕಾ ಕಾನೂನು ಸೇವೆಗಳ ಸಮೀತಿ ನ್ಯಾಯವಾದಿಗಳ ಸಂಘ, ತಾಲೂಕಾ ಆಡಳಿತ ಹಾಗೂಎಲ್ಲ ಸರಕಾರಿ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಖಾಯಂ ಜನತಾ ನ್ಯಾಯಾಲಯ  ವಿಶೇಷ ಕಾರ್ಯಗಾರ ಹಾಗೂ ಅಭಿಯಾನವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. 

ಖಾಯಂ ಜನತಾ ನ್ಯಾಯಾಲಯದಲ್ಲಿ ನ್ಯಾಯಾಧೀಶರು ಮತ್ತು ಇಬ್ಬರು ಸದಸ್ಯರಿದ್ದಾರೆ. ಸಾರ್ವಜನಿಕ ಸೇವೆಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಇಲ್ಲಿ ಅತಿ ಕಡಿಮೆ ಅವಧಿಯಲ್ಲಿ ಇತ್ಯರ್ಥ ಪಡಿಸಲಾಗುತ್ತಿದೆ . ಖಾಯಂ ಜನತಾ ನ್ಯಾಯಾಲಯವು ಪರ್ಯಾಯ ಪರಿಹಾರ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಕೇವಲ 6 ತಿಂಗಳ ಅವಧಿಯೋಳಗೆ ನ್ಯಾಯ ತೀರ​‍್ು ಇತ್ಯರ್ಥಗೊಳಿಸು ಇಲ್ಲಿ ಪೂರ್ಣ ಪ್ರಮಾಣದ ನ್ಯಾಯಾಧೀಶರೇ ಸೇವೆಯಲ್ಲಿರುತ್ತಾರೆ. ಖಾಯಂ ಜನತಾ ನ್ಯಾಯಾಲಯದಲ್ಲಿ ನಡೆಸುವ ಪ್ರಕರಣಗಳಿಗೆ ಸಾರ್ವಜನಿಕರು  ಯಾವೂದೇ ಒಂದು ನೈಯಾ ಪೈಸೆ ಹಣ ಭರಿಸುವ ಅಗತ್ಯವಿಲ್ಲ ಸರಳ ದಾಖಲೆ ಪ್ರಕ್ರಿಯೆ ಮತ್ತು ಅಗತ್ಯವಿದ್ದರೆ ಮಾತ್ರ ಸಾಕ್ಷಿ ವಿಚಾರಣೆ ನಡೆಯಲಿದೆ. ಯಾವುದೇ ನ್ಯಾಯಾಲಯ ಶುಲ್ಕ ಇರುವುದಿಲ್ಲ ಎಂದು ಅವರು ತಿಳಿಸಿದರು. 

ಈ ವೇಳೆ ವಿಜಯಪುರ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರು ಹಗಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರು ಹಾಗೂ ಕಾರ್ಯದರ್ಶಿ ಅರವಿಂದ ಹಾಗರಗಿ  ಅವರು ಮಾತನಾಡಿ ಸಾರಿಗೆ ಸೇವೆ, ಅಂಚೆ, ವಿದ್ಯುತ್, ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆ, ಶಿಕ್ಷಣ ಸಂಸ್ಥೆ, ರಿಯಲ್ ಎಸ್ಟೇಟ್, ವಿಮೆ, ವೈದ್ಯಕೀಯ ನಿರ್ಲಕ್ಷ್ಯತೆ ಮತ್ತಿತರ ಪ್ರಕರಣಗಳನ್ನು ಇಲ್ಲಿ ಕೈಗೆತ್ತಿಕೊಳ್ಳಲಾಗುವುದು. ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳ ವಿವಿಧ ಸಾಲ ಸಂಬಂಧಿತ ವ್ಯಾಜ್ಯಗಳನ್ನು ಇಲ್ಲಿ ಪರಿಹರಿಸಿಕೊಳ್ಳಬಹುದು. ಇಲ್ಲಿನ ಆದೇಶವು ಅಂತಿಮವಾಗಿದ್ದು ಮೇಲ್ಮನವಿಗೆ ಅವಕಾಶವಿಲ್ಲ. ಎಲ್ಲ ಸೇವೆಗಳಲ್ಲಿ ನೂನ್ಯತೆ ಉಂಟಾದಾಗ ಅರ್ಜಿ ಸಲ್ಲಿಸಿ ಜನತಾ ನ್ಯಾಯಾಲಯದಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಕರ್ನಾಟಕ ರಾಜ್ಯದಲ್ಲಿ ಒಟ್ಟು 6 ಖಾಯಂ ಜನತಾ ನ್ಯಾಯಾಲಯ ಕಾರ‌್ಯನಿರ್ವಹಿಸುತ್ತಿದ್ದು  ನಮ್ಮ ಭಾಗಕ್ಕೆ ಕಲಬುರ್ಗಿಯಲ್ಲಿ ಈ ನ್ಯಾಯಾಲಯ ಸ್ಥಾಪಿಸಲಾಗಿದ್ದು ಪ್ರತಿ ತಿಂಗಳಿಗೊಮ್ಮ ವಿಜಯಪುರ ಜಿಲ್ಲಾನ್ಯಾಯಾಲಯದಲ್ಲಿ ಕಾರ‌್ಯನಿರ್ವಹಿಸುತ್ತಿದ್ದು ಸಂಬಂಧಿತ ಜಿಲ್ಲೆಯ ಜನರು ತಮ್ಮ ದೂರುಗಳನ್ನು ಖಾಯಂ ಜನತಾ ನ್ಯಾಯಾಲಯಕ್ಕೆ ಸಲ್ಲಿಸಬಹುದಾಗಿದೆ ಎಂದರು. 

ಈ ನ್ಯಾಯಾಲಯಗಳಿಗೆ ಬರುವ ಪ್ರಕರಣಗಳಲ್ಲಿ ವಿವಾದಕ್ಕೊಳಗಾದ ಸ್ವತ್ತಿನ ಮೌಲ್ಯ 1 ಕೋಟಿ ರೂ. ಮೀರಿರಬಾರದು. ಖಾಯಂ ಜನತಾ ನ್ಯಾಯಾಲಯವು ಜಿಲ್ಲಾ ನ್ಯಾಯಾಧೀಶರಾಗಿರುವ ಅಥವಾ ಜಿಲ್ಲಾ ನ್ಯಾಯಾಧೀಶರಾಗಿದ್ದ , ಜಿಲ್ಲಾ ನ್ಯಾಯಾಧೀಶರಿಗಿಂತ ಹೆಚ್ಚಿನ ಶ್ರೇಣಿಯ ನ್ಯಾಯಿಕ ಅಧಿಕಾರಿಯಾಗಿರುವ ವ್ಯಕ್ತಿಯೊಬ್ಬರನ್ನು ಅದರ ಅಧ್ಯಕ್ಷ ರನ್ನಾಗಿ ಮತ್ತು ಸಾರ್ವಜನಿಕ ಉಪಯುಕ್ತ ಸೇವೆಗಳಿಗೆ ಸಾಕಷ್ಟು ಅನುಭವ ಇರುವ ಇಬ್ಬರು ನ್ಯಾಯವಾದಿಗಳನ್ನು  ಸದಸ್ಯರನ್ನಾಗಿ ಹೊಂದಿರುತ್ತದೆ. ಖಾಯಂ ಜನತಾ ನ್ಯಾಯಾಲಯವು ಹೊರಡಿಸುವ ಪ್ರತಿಯೊಂದು ಐತೀರ​‍್ಪನನು ಸಿವಿಲ್ ನ್ಯಾಯಾಲಯದ ಡಿಕ್ರಿಯೆಂದೇ ಪರಿಭಾವಿಸಲಾಗುವುದು. ಈ ಅಧಿನಿಯಮದಡಿ ಹೊರಡಿಸಲಾದ ಐತೀರ​‍್ು ಅಂತಿಮವಾದದ್ದು. ಅದನ್ನು ಯಾವುದೇ ಮೂಲದಾವೆಯಲ್ಲಿ , ಅರ್ಜಿಯಲ್ಲಿ ಅಥವಾ ಅಮಲ್ದಾರಿ ವ್ಯವಹಾರದಲ್ಲಿ ಪ್ರಶ್ನಿಸುವಂತಿಲ್ಲ ಎಂದು ಅವರು ತಿಳಿಸಿದರು. 

ಈ ವೇಳೆ ಮುದ್ದೇಬಿಹಾಳ ಸಿವಿಲ್ ನ್ಯಾಯಾಧೀಶರಾದ ರಾಮಮೂರ್ತಿ ಎನ್,  ಕಲಬುರ್ಗಿಯ ಖಾಯಂ ಜನತಾ ನ್ಯಾಯಾಲದ ಸದಸ್ಯರಾದ ವಿಜಯವಿಠ್ಠಲ ಕುಲಕರ್ಣಿ, ತಾಲೂಕಾ ನ್ಯಾಯವಾದಿಗಳ ಸಂಗದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ,  ತಹಶಿಲ್ದಾರ ಕೀರ್ತಿ ಚಾಲಕ, ತಾಲೂಕಾ ಪಂಚಾಯತ್ ಕಾರ್ಯನಿರ್ವಾಹ ಅಧಿಕಾರಿ ವೆಂಕಟೇಶ ವಂದಾಲ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ಸಹಾಯಕ ಸರಕಾರಿ ಅಭಿಯೋಜಕ ನಾಗರಾಜ ಕೆ ಪೂಜಾರ, ಅಫರ ಸರಕಾರಿ ವಕೀಲರಾದ ಎಚ್ ಎಲ್ ಸರೂರ, ಸಹಾಯಕ ಸರಜಕಾರಿ ಅಭಿಯೋಜಕ ಬಸವರಾಜ ಆಹೇರಿ, ಸಿಡಿಪಿಓ ಶಿವಮೂರ್ತಿ ಕುಂಬಾರ, ಸಿಪಿಐ ಮಹಮ್ಮದ ಫಸಿವುದ್ದೀನ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಸೇರಿದಂತೆ ಹಲವರು ಇದ್ದರು.