ರಾಜ್ಯ ಸರ್ಕಾರದ ದುರಾಡಳಿತಕ್ಕೆ ಜನ ಬೇಸತ್ತಿದ್ದಾರೆ:ಕಾರಜೋಳ
People are tired of the state government's mismanagement: Karajola
ಬಳ್ಳಾರಿ 17: (17) ರಂದು ಸಿದ್ದರಾಮಯ್ಯ ನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರೆ ವರ್ಷ ಆಗಿದೆ. ಅವರ ದುರಾಡಳಿತಕ್ಕೆ ಜನ ಬೇಸತ್ತಿದ್ದಾರೆ. ಸರ್ಕಾರಕ್ಕೆ ಜನ ಹಿಡಿಶಾಪ ಹಾಕುತ್ತಿದ್ದಾರೆ ಎಂದು . ಮಾಜಿ ಸಚಿವ, ಸಂಸದ ಗೋವಿಂದ ಕಾರಜೋಳ ಅಭಿಪ್ರಾಯಪಟ್ಟರು. ನಗರದಲ್ಲಿಂದು ಆಯೋಜಿಸಿರುವ ಬಿಜೆಪಿ ಪ್ರತಿಭಟನಾ ರಾಲಿಯಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು, ಪತ್ರಕರ್ತರೊಂದಿಗೆ ಮಾತನಾಡಿ, ಕಾಂಗ್ರೆಸ್ ನ ಕೊನೆ ಸಿಎಂ ಸಿದ್ದರಾಮಯ್ಯ ಆಗುತ್ತಾರೆ. ನಾನು ಶರಣರ ನಾಡಿನಿಂದ ಬಂದಿದ್ದೇನೆ. ನಾವು ಏನ್ ಹೇಳ್ತಿವೋ ಅದೆಲ್ಲಾ ಆಗಿದೆ. ಬಳ್ಳಾರಿ ನೆಲದಲ್ಲಿ ಗುಂಡಿನ ದಾಳಿ ಮಾಡಿಸಿ ಅವರ ಶಾಸಕ ಅಮಾಯಕನನ್ನು ಕೊಂದಿದ್ದಾನೆ. ಕೂಡಲೇ ಭರತ್ ರೆಡ್ಡಿಯನ್ನ ಬಂಧಿಸಬೇಕಿತ್ತು. ಆದರೆ, ಅವರ ಮೇಲೆ ಕೇಸ್ ಹಾಕಿಲ್ಲ. ನಾವು ಪ್ರತಿಭಟನೆ ಮಾಡಲು 50 ಲಕ್ಷ ಡಿಪೋಸಿಟ್ ಇಡಬೇಕು ಅಂತಾರೆ. ಸಾರ್ವಜನಿಕ ಸಭೆ ಸಮಾರಂಭಗಳಿಗೆ ಬ್ರಿಟಿಷರೂ ಅಡ್ಡಿ ಪಡಿಸಿಲ್ಲ. ಅವರು ದುರಾಡಳಿತ ಮಾಡಿದಾಗ ಜನ ಬ್ರಿಟಿಷರನ್ನು ಓಡಿಸಿದರು. ಇದೀಗ ಸಿದ್ದರಾಮಯ್ಯ ಅವರನ್ನ ಓಡಿಸಲು ಕಾಲ ಹತ್ತಿರ ಬಂದಿದೆ ಎಂದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 