ತಾಳಿಕೋಟಿ 02 : ಎಲ್ಲದರಲ್ಲಿಯೂ ರಾಜಕಾರಣವನ್ನು ಬೆರೆಸುವುದು ಕೆಲವರ ಕೆಟ್ಟ ಚಾಳಿಯಾಗಿದೆ. ಅಭಿವೃದ್ಧಿಯೆಂಬುದು ನಿರಂತರ ನಡೆಯುವ ಪ್ರಕ್ರಿಯೆ ಅದು ನಾನಿದ್ದಾಗ,ನನ್ನಿಂದಲೇ ಆಗಿದೆ ಎನ್ನುವುದು ಸರಿಯಲ್ಲ ಕ್ಷೇತ್ರದ ಬೆಳವಣಿಗೆಯಲ್ಲಿ ಹಿಂದೆ ಶಾಸಕರಾಗಿದ್ದವರೆಲ್ಲರ ಪಾಲಿದೆ, ರಾಜಕಾರಣ ಚುನಾವಣೆಗೆ ಸೀಮಿತವಾಗಬೇಕು ಅದು ಅಭಿವೃದ್ಧಿ ಕಾರ್ಯಗಳಲ್ಲಿ ಬರಬಾರದು ಎಂದು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ ಅಧ್ಯಕ್ಷ,ಶಾಸಕ ಅಪ್ಪಾಜಿ ನಾಡಗೌಡರು ಹೇಳಿದರು.
ಪಟ್ಟಣದ ಪುರಸಭೆ ಕಾರ್ಯಾಲಯ ಆವರಣದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಪುರಸಭೆ ತಾಳಿಕೋಟಿ ಇವರ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡ ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯ ಕುಡಿಯುವ ನೀರಿನ ಸರಬರಾಜು ವಿತರಣಾ ವ್ಯವಸ್ಥೆ ಕಲ್ಪಿಸುವ ಯೋಜನೆಗೆ ಭೂಮಿ ಪೂಜೆ ನೆರವೇರಿಸಿ ನಂತರ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. ಜನಸಂಖ್ಯೆ ಬೆಳದಂತೆ ಅಭಿವೃದ್ಧಿ ಮೂಲಸೌಕರ್ಗಳ ಬೇಡಿಕೆ ಹೆಚ್ಚುತ್ತದೆ, ತಾಳಿಕೋಟಿ ಪಟ್ಟಣ ತಾಲೂಕ ಕೇಂದ್ರವಾಗಿ ಪರಿವರ್ತನೆ ಆದ ನಂತರ ಇಲ್ಲಿ ಹಲವಾರು ಸೌಲಭ್ಯಗಳ ಅಗತ್ಯವಿದೆ ಅವುಗಳನ್ನು ಹಂತ ಹಂತವಾಗಿ ಮಾಡಲು ಪ್ರಯತ್ನಿಸುತ್ತಿದ್ದೇನೆ,ಇದೀಗ ಜನರಿಗೆ ಕುಡಿಯುವ ನೀರು ಸದಾ ಸಿಗುವಂತಾಗಲು ಈ ಯೋಜನೆಯನ್ನು ತರಲಾಗಿದೆ ಇದು ಕೇಂದ್ರ ಸರ್ಕಾರದ ಸಹಭಾಗಿತ್ವದ ಯೋಜನೆ ಯಾಗಿದ್ದು ಸುಮಾರು 37.38 ಕೋಟಿ ವೆಚ್ಚದಲ್ಲಿ ನಡೆಯಲಿದೆ, ಸ್ವಲ್ಪಮಟ್ಟಿಗೆ ಅನುದಾನದ ಕೊರತೆ ಇದ್ದರೂ ನಮ್ಮ ಸರ್ಕಾರವು ಗ್ಯಾರಂಟಿ ಯೋಜನೆಗಳ ಸಮರ್ಕ ಅನುಷ್ಠಾನದೊಂದಿಗೆ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೂ ಅನುದಾನ ಕೊಡುತ್ತಿದೆ,ಹಿಂದೆ ಆಡಳಿತದಲ್ಲಿದ್ದವರು ಅವೈಜ್ಞಾನಿಕ ಆರ್ಥಿಕ ಯೋಜನೆಗಳಿಂದಾಗಿ ಸುಮಾರು 2 ಲಕ್ಷ ಕೋಟಿಯಷ್ಟು ಬಾಕಿ ಇಟ್ಟು ಹೋಗಿದ್ದಾರೆ ಅದನ್ನು ಸರಿದೂಗಿಸಿಕೊಂಡು ನಾವು ಕೆಲಸ ಮಾಡುತ್ತಿದ್ದೇವೆ, ಎಲ್ಲರಿಗೂ ಸಮಬಾಳು, ಎಲ್ಲರಿಗೂ ಸಮಪಾಲು ನಮ್ಮ ಸರ್ಕಾರದ ಮೂಲ ಧ್ಯೇಯವಾಗಿದ್ದರೆ, ಅಭಿವೃದ್ಧಿ ನಮ್ಮ ಮೂಲ ಮಂತ್ರವಾಗಿದೆ ಪಟ್ಟಣದ ಅಭಿವೃದ್ಧಿಗೆ ನಾನು ಬದ್ಧನಾಗಿದ್ದು ಎಲ್ಲ ಕಾರ್ಯಗಳನ್ನು ಹಂತ ಹಂತವಾಗಿ ಮಾಡುತ್ತೇನೆ ಇದಕ್ಕೆ ನಿಮ್ಮೆಲ್ಲರ ಸಹಕಾರ ಬಹಳ ಮುಖ್ಯವಾಗಿದೆ ಎಂದರು.ಕ.ನ.ನೀ.ಸ. ಮತ್ತು ಒ.ಚ. ಮಂಡಳಿ ಕಾರ್ಯಪಾಲಕ ಅಭಿಯಂತರ ಗೋವಿಂದ ಎಸ್ ಪ್ರಾಸ್ತಾವಿಕವಾಗಿ ಮಾತನಾಡಿ ರಾಜ್ಯದ 313 ಪುರಸಭೆಗಳಲ್ಲಿ ಈ ಯೋಜನೆಯನ್ನು ಹಾಕಿಕೊಂಡಿದ್ದು ಇಲ್ಲಿಯವರೆಗೆ 147 ಪುರಸಭೆಗಳಲ್ಲಿ ಇದರ ಅನುಷ್ಠಾನವಾಗಿದೆ ಕಾಮಗಾರಿ ಗುಣಮಟ್ಟದ್ದಾಗಿರುವಂತೆ ನೋಡಿಕೊಳ್ಳಲಾಗುವುದು ಯೋಜನೆಯ ಯಶಸ್ವಿಗೆ ಪುರಸಭೆ ಸದಸ್ಯರ ಹಾಗೂ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದರು.
ಮುಸ್ಲಿಂ ಧಾರ್ಮಿಕ ಮುಖಂಡ ಸೈಯದ್ ಶಕೀಲ ಅಹ್ಮದ್ ಖಾಜಿ ಸಾನಿಧ್ಯ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಜುಬೇದಾ ಹುಸೇನ್ ಭಾಷಾ ಜಮಾದಾರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪುರಸಭೆ ಉಪಾಧ್ಯಕ್ಷೆ ಗೌರಮ್ಮ ಕುಂಬಾರ, ಮುಖ್ಯಾಧಿಕಾರಿ ಮೋಹನ ಜಾಧವ,ಗಣ್ಯರಾದ ವಿ.ಸಿ. ಹಿರೇಮಠ, ಬಿಎ ಸಿಂಧೆ, ಪ್ರಭುಗೌಡ ಮದರಕಲ್ಲ,ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗಮೇಶ ದೇಸಾಯಿ,ಪುರಸಭೆ ಸದಸ್ಯರಾದ ಅಕ್ಕಮಹಾದೇವಿ ಕಟ್ಟಿಮನಿ,ವಾಸುದೇವ ಹೆಬಸೂರ, ಮುತ್ತಪ್ಪ ಚಮಲಾಪೂರ, ಯಾಸಿನ್ ಮಮದಾಪೂರ,ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಪರುಶರಾಮ ತಂಗಡಗಿ, ಮುಸ್ತಫ ಚೌಧರಿ, ಅಣ್ಣಪ್ಪ ಜಗತಾಪ, ಮುದುಕಪ್ಪ ಬಡಿಗೇರ, ನಿಂಗಣ್ಣ ಕುಂಟೋಜಿ,ಡಿ.ವಿ.ಪಾಟೀಲ, ಜೈಸಿಂಗ್ ಮೂಲಿಮನಿ,ಮೆಹಬೂಬ್ಬಿ ಲಾಹೋರಿ, ಮೆಹಬೂಬ್ಬಿ ಮನಗೂಳಿ,ಸಂಗಪ್ಪ ಇಂಗಳಗಿ, ಕಸ್ತೂರಿಬಾಯಿ ಬಿರಾದಾರ,ಫಾತಿಮಾ ಖಾಜಾಬಸರಿ, ಶಾಂತಾಬಾಯಿ ಹೊಟ್ಟಿ,ಮಕಾಂದಾರ ಇಸ್ಮಾಯೀಲಬಿ, ಸಾಹೀದಾಬೇಗಮ್ ಬೇಪಾರಿ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಸಿದ್ದನಗೌಡ ಪಾಟೀಲ ನಾವದಗಿ, ವಿಜಯಸಿಂಗ್ ಹಜೇರಿ, ಕಾಶಿನಾಥ್ ಮುರಾಳ,ಕಾಶಿನಾಥ್ ಸಜ್ಜನ,ಎಂ.ಎಸ್. ಸರಶೆಟ್ಟಿ,ಎಇಇ ಬಸವರಾಜ್ ಬಾಗಲಕೋಟೆ ಕರ್ನಾಟಕ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ಅಧಿಕಾರಿಗಳು, ಪುರಸಭೆಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಇದ್ದರು. ಶ್ವೇತಾ ಯರಗಲ್ ಪ್ರಾರ್ಥಿಸಿದರು. ಎಸ್ ಕೆ ಪ್ರಶಿಕ್ಷಣಾರ್ಥಿಗಳು ನಾಡಗೀತೆ ಹಾಡಿದರು. ಸಾಹಿತಿ ಅಶೋಕ ಹಂಚಲಿ ಸ್ವಾಗತಿಸಿದರು,ಮುಖ್ಯ ಶಿಕ್ಷಕಿ ಸುಮಂಗಲಾ ಕೋಳೂರ ನಿರೂಪಿಸಿ ವಂದಿಸಿದರು.