ಸರಿಯಾಗಿ ನೀರು ಬಿಡದ ಎಲ್ ಆಂಡ್ ಟಿ ಕಂಪನಿ ವಿರುದ್ಧ ಜನರ ಆಕ್ರೋಶ

ಸರಿಯಾಗಿ ನೀರು ಬಿಡದ ಎಲ್ ಆಂಡ್ ಟಿ ಕಂಪನಿ ವಿರುದ್ಧ ಜನರ ಆಕ್ರೋಶ People's anger against L&T company for not releasing water properly

ಧಾರವಾಡ 27: ನಗರದ ನಿಸರ್ಗ ನಗರದಲ್ಲಿ ಎಲ್ ಆಂಡ್ ಟಿ ಕಂಪನಿಯವರು ಸರಿಯಾಗಿ ನೀರು ಬಿಡುತ್ತಿಲ್ಲವೆಂದು ನಗರದ ವಾಸಿಗಳು ಆರೋಪಿಸುತ್ತಿದ್ದಾರೆ.  

ದಿ. 26ರಂದು ನೀರುಬಿಡಬೇಕಾಗಿತ್ತು, ಯಾರಿಗೂ ಸರಿಯಾಗಿ ಮಾಹಿತಿ ನೀಡದೆ ಏಕಾಏಕಿ ನೀರು ಬಿಡುವ ದಿನಾಂಕವನ್ನು ಬದಲಾಯಿಸಿ ದಿ. 25 ರಂದು ನೀರು ಬಿಟ್ಟಿರುತ್ತಾರೆ. ಹೀಗಾಗಿ ಕೆಲವು ಜನ ನೀರು ತುಂಬಿಯೇ ಇರುವುದಿಲ್ಲ. ನಗರದ ಜನ ಸರಿಯಾಗಿ ನೀರಿನ ಬಿಲ್ಲನ್ನು ಕಟ್ಟಿದ್ದರು ನೀರುಕೊಡದ ಎಲ್ ಆಂಡ್ ಟಿ ಕಂಪನಿ. ಈ ಕಂಪನಿಯ ನೌಕರರು,. ಜನರ ಕೂಡಾ ಸರಿಯಾದ ನಡವಳಿಕೆಯೂ ಇರುವುದಿಲ್ಲ ಬಹಳ ಒರಟಿನಿಂದ ಮಾತನಾಡುತ್ತಾರೆ ಎಂಬ ಮಾತು ಕೇಳಿಬರುತ್ತಿವೆ. ನಾವು ವ್ಯಾಟ್ಸಪ್ ಗ್ರುಪ್ದಲ್ಲಿ ಮ್ಯಾಸೆಜ ಹಾಕಿದ್ದೆವು ಎಂದು ಎಲ್ ಆಂಡ್ ಟಿ  ಕಂಪನಿ ನೌಕರರಾದ ಇಸ್ಮಾಯಿಲ್ ಮತ್ತು ಪಾರುಕ್  ತಮ್ಮ ತಪ್ಪನ್ನು ಒಪ್ಪಿಕೊಳ್ಳದೆ  ವಾದಿಸುತ್ತಾರೆ.  ವ್ಯಾಟ್ಸಪ್ ಗ್ರುಪ್ ಚೆಕ್ ಮಾಡಿದರೆ ಕಂಪನಿಯವರು ಮಾಡಿದ ಯಾವ ವ್ಯಾಟ್ಸಪ್ ಗ್ರುಪ್ ಇರುವುದಿಲ್ಲ. ಯಾರೋ ನಾಲ್ಕು ಜನ ಸೇರಿ ಮಾಡಿದ ಕೆಲವೆ ಜನ ಇರುವ ವ್ಯಾಟ್ಸ ಗ್ರುಪ್ ಗಳನ್ನು ನಂಬಿ ಇವರು ನೀರು ಬಿಡುವ ಸಮಯ ದಿನಾಂಕವನ್ನು ಬದಲಾಯಿಸುತ್ತಿದ್ದಾರೆ. ಹೀಗಾದರೆ ಹಿರಿಯ ನಾಗರಿಕರಿಗೆ, ಮನೆಯಲ್ಲಿ ಒಬ್ಬರೆ ಇರುವವರಿಗೆ ತುಂಬಾ ತೊಂದರೆಯಾಗುತ್ತಿದೆ.  

ನಗರದಲ್ಲಿ ಪೈಪಲೈನ್ ರಿಪೇರಿ ಮಾಡಿ ಒಂದು ಗುಂಡಿಯನ್ನು ಹಾಗೆಯೇ ಬಿಟ್ಟಿದ್ದಾರೆ, ಅದರಲ್ಲಿ ಸಾಕಸ್ಟು ಮಹಿಳೆಯರು ಸ್ಕೂಟಿ ಹಾಕಿಕೊಂಡು ಬಿದ್ದು ಎಲ್ ಆಂಡ್ ಟಿ ಕಂಪನಿಯವರಿಗೆ ಶಾಪ್ ಹಾಕುತ್ತಿದ್ದಾರೆ. ಕೂಡಲೆ ಸಂಬಂಧಿಸಿದ ಮೇಲಾಧಿಕಾರಿಗಳು ಇತ್ತ ಗಮನಹರಿಸಲು ನಗರದ ನಿವಾಸಿಗಳಾದ ಸಾಹಿತಿ ನಾರಾಯಣ ಭಜಂತ್ರಿ ಆಗ್ರಹಿಸಿದ್ದಾರೆ.