ಪಾರ್ಥ ವಿಜಯ ಅರ್ಥಾತ್ ಜಠಾಸುರನ ವದೆ ಬಯಲಾಟ ಪ್ರದರ್ಶನ

ಪಾರ್ಥ ವಿಜಯ ಅರ್ಥಾತ್ ಜಠಾಸುರನ ವದೆ ಬಯಲಾಟ ಪ್ರದರ್ಶನ  Partha Vijaya means Jathasura's Vade Bayalata performance

ಲೋಕದರ್ಶನ ವರದಿ 

ಕಂಪ್ಲಿ 06:  ಗ್ರಾಮೀಣ ಪ್ರದೇಶದಲ್ಲಿ ನಾಟಕ, ಬಯಲಾಟ ನಡೆಯುತ್ತಿರುವುದರಿಂದ ಗ್ರಾಮೀಣ ಕಲೆಗಳು ಉಳಿಯುತ್ತಿವೆ ಎಂದು ತಿಮ್ಮಾಲಾಪುರ ಗ್ರಾಮದ ಮುಖಂಡರಾದ ಮುದಟ್ಟನೂರು ಭೀಮಪ್ಪ ಹೇಳಿದರು. ಕುರುಗೋಡು ತಾಲೂಕಿನ ತಿಮ್ಮಾಲಾಪುರ ಗ್ರಾಮದಲ್ಲಿ ಶುಕ್ರವಾರ ಹಂಪೆ ಹುಣ್ಣಿಮೆ  ಜಾತ್ರೆ  ಪ್ರಯುಕ್ತ ಅಂಜಿನೇಯ ಕೃಪಾ ಪೋಷಿತ ನಾಟಕ ಮಿತ್ರ ಮಂಡಳಿ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಬಳ್ಳಾರಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪಾರ್ಥ ವಿಜಯ ಅರ್ಥಾತ್ ಜಠಾಸುರನ ವದೆ  ಎಂಬ ಸುಂದರರವಾದ ಪೌರಾಣಿಕ ಬಯಲು ನಾಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಯುವಕರ ಕಲೆ, ಸಾಹಿತ್ಯದ ಮೇಲೆ ಅಧ್ಯತೆ ನೀಡಬೇಕು ಎಂದರು. ಸ್ಥಳೀಯ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಭಾಗವಹಿಸಿದ್ದರು. ಪ್ರದರ್ಶನ: ಕಿರಣ ಏಳುಬೆಂಚಿ (ಬಾಲಕೃಷ್ಣ), ಸ್ವಾರೆರಮೇಶ (ಧರ್ಮರಾಯ), ವದ್ದಿಗೇರಿ ನಾಗೇಂದ್ರ (ನಿವಾತಕ) ಬಿ.ಮಲ್ಲಿಕಾರ್ಜುನ(ಭೀಮಸೇನ), ಮುದ್ದಟನೂರು ಮಹೇಶ(ಕಾಲಕೇಯ) ಹೊಸಗೇರ​‍್ಪ (ಅರ್ಜುನ), ವಡ್ಡುಮಲ್ಲಿ (ದೇವೆಂದ್ರ) ಎಮ್ ಹೊಸಗೇರಿ (ಪರಮೇಶ್ವರ), ಮೋಹನ್‌ಕುಮಾರ (ವೆದವಾಸ) ವಡ್ಡುನಮಲ್ಲಿ (ಜಠಾಸುರ)  ಎನ್‌ಕಾಳಪ್ಪ (ಅಂಜಿನೇಯ) ಉಮಾದೇವಿ(ಶಚಿದೇವಿ), ಗೀತಾ (ದ್ರೌಪೆದಿ) ವ್ಯೆಟ್ ಉಮಾ (ಪಾರ್ವತಿ /ಉರ್ವಸಿ ) ಇವರು ಪತ್ರಧಾರಿಗಳಾಗಿ ನಾಟಕ ಪ್ರದರ್ಶಿಸಿ, ನೋಡುಗರ ಗಮನ ಸೆಳೆದರು. ಮಾನ್ಯಜರ್ ಗೋಸಬಾಳ್ ಪಂಪಾಪತಿ ಎಂ ಬಸವರಾಜ ಸಂಗೀತ ನಿರ್ದೇಶಕ ಟಿ.ಕೆ ಶಿವಶಂಕರ​‍್ಪ ಶಿಷ್ಯ ಎಸ್ ಕೆ ತೇಜರಾಜು ದೇವಲಾಪುರ ಸ್ಟೇಜ್ ಮಾನ್ಯೇಜರುಗಳಾದ ಮದಿರೆ ದೊಡ್ಡಬಸಪ್ಪ ಎನ್ ಬಾಲು ಏಳುಬೆಂಚಿ ಕಥಾ ಸಂಚಾಲಕರಾದ ಬನ್ನಿಹಟ್ಟಿ ತಿಮ್ಮಯ್ಯ ಗೋಸ್ ಬಾಳು ಬಸವರೆಡ್ಡಿ ಎನ್ ದ್ಯಾವಣ್ಣ ವಿ ಭೀಮಪ್ಪ ಹಿನ್ನಲೆ ಗಾಯಕರಾದ ಹೇಮರೆಡ್ಡಿ ದೇವೆಂದ್ರ​‍್ಪ ಜಿ.ಹುನುಮಂತಪ್ಪ ಜಿ ಗೋವಿಂದರಾಜು ವಸ್ತ್ರಲಂಕಾರರಾದ ಹಟ್ಟಿ ಗಣೇಶ ಯು ಯರ‌್ರ​‍್ಪ ಸಂಗೀತಾ ಬಳಗದವರಾದ  ತಬಲ ಜಿ ತಿಮ್ಮಯ್ಯ ನಾಗೇಶ ಸಾರಥಿ ಯಲ್ಲಪ್ಪ ಕೊಲಗಲ್ಲು ರಿದಮ್ ಪ್ಯಾಡ್ ಕರಿಬಸವನಗೌಡ ರಂಗಸಂಚಿಕೆ ಮಲ್ಲಿಕಾಜುನ ಚಾರಿ ಮುಖಂಡರಾದ ಪಂಪಾಪತಿ ಮೂಗಿನ ಬಸವರಾಜ ಮಾವಿನಹಳ್ಳಿ ಕುಮಾರೆಪ್ಪ ನಾಟಕಕ್ಕೆ ಸಾಥ್ ನೀಡಿದರು.