ಪೋಷಕರ ಸಭೆ ಹಾಗೂ ಎಸ್ಡಿಎಂಸಿ ಅಧ್ಯಕ್ಷ, ಸದಸ್ಯರ ಆಯ್ಕೆ

ಪೋಷಕರ ಸಭೆ ಹಾಗೂ ಎಸ್ಡಿಎಂಸಿ ಅಧ್ಯಕ್ಷ, ಸದಸ್ಯರ ಆಯ್ಕೆ  Parents' Meeting and Election of SDMC President and Members


ಲಕ್ಷ್ಮೇಶ್ವರ "  01:  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ-2ರಲ್ಲಿ ವಿದ್ಯಾರ್ಥಿಗಳ ಪಾಲಕರ ಸಭೆ ಹಾಗೂ ಎಸ್ಡಿಎಂಸಿ ಅಧ್ಯಕ್ಷ ಮತ್ತು ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆಯಿತು.  ಸಭೆಗೆ ಆಗಮಿಸಿದ್ದ ವಿದ್ಯಾರ್ಥಿಗಳ ಪಾಲಕರು ಒಮ್ಮತದಿಂದ ಎಸ್ಡಿಎಂಸಿ ಅಧ್ಯಕ್ಷರಾಗಿ ಶಿವಾನಂದ ಲಿಂಗಶೆಟ್ಟಿ ಅವರನ್ನು ಹಾಗೂ ಉಪಾಧ್ಯಕ್ಷರಾಗಿ ರಶ್ಮಿ ಭೀಮಣ್ಣವರ ಅವರನ್ನು ಆಯ್ಕೆ ಮಾಡಿದರು. ಇದೇ ಸಂದರ್ಭದಲ್ಲಿ ಸದಸ್ಯರನ್ನೂ ಆಯ್ಕೆ ಮಾಡಲಾಯಿತು.  

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಲೆಯ ಪ್ರಧಾನ ಗುರುಮಾತೆ ಎಸ್‌.ಎಚ್‌. ಉಮಚಗಿ ಅವರು, ಮಕ್ಕಳ ಶಿಕ್ಷಣದ ಕುರಿತು ಶಿಕ್ಷಕರಷ್ಟೇ ಅಲ್ಲದೆ ಪಾಲಕರಿಗೂ ಜವಾಬ್ದಾರಿ ಇದೆ ಎಂದು ಹೇಳಿದರು. ಮಕ್ಕಳು ಶಾಲೆಯಲ್ಲಿ ಕಲಿಯುವುದರ ಜೊತೆಗೆ ಮನೆಯಲ್ಲಿ ಅವರ ವಿದ್ಯಾಭ್ಯಾಸದ ಬಗ್ಗೆ ಪಾಲಕರು ಗಮನಹರಿಸಬೇಕು. ಮಕ್ಕಳ ವಿದ್ಯಾಭ್ಯಾಸದಲ್ಲಿ ಯಾವುದೇ ಸಮಸ್ಯೆ ಕಂಡುಬಂದರೆ ಶಾಲೆಗೆ ತಿಳಿಸಿ, ಶಿಕ್ಷಕರೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.  

ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರ ಹಲವು ಸೌಲಭ್ಯಗಳನ್ನು ಒದಗಿಸುತ್ತಿದೆ. ಪಾಲಕರು ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಮಕ್ಕಳ ಶಿಕ್ಷಣದ ಕಡೆಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಅವರು ತಿಳಿಸಿದರು.  

ಸಭೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಆಯ್ಕೆ ನಡೆಯಿತು. ಸದಸ್ಯರಾಗಿ ಮಮ್ಮದ್ ರಫಿ ಮುಳಗುಂದ, ಸರಾ​‍್ರಜ್ ಮುಳಗುಂದ, ಬಿ.ಬಿ. ಪರಾನ ಅಕ್ಕಿ, ಮೌಲಾಬಿ ಸುರಣಗಿ, ರೊಕ್ಕಯ್ಯ ದಂಡಿನ, ಪ್ರವೀಣ ಬಂಕಾಪುರ, ಸಿದ್ದಲಿಂಗಯ್ಯ ಬಾಗವಾಡ, ಮೃತ್ಯುಂಜಯ ಅಕ್ಕಿ, ಬಸವರಾಜ ಟೋಕಳೆ, ಅನ್ನಪೂರ್ಣ ಜಗದಮನಿ, ಗೀತಾ ಲಿಂಗಶೆಟ್ಟಿ, ಶಿಲ್ಪಾ ಚವಡಿ, ರೂಪಾ ಉಮಚಗಿ, ಶೋಭಾ ಬಸಾಪುರ ಸೇರಿದಂತೆ ಹಲವರನ್ನು ಆಯ್ಕೆ ಮಾಡಲಾಯಿತು.  

ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಎಸ್‌.ಎಸ್‌. ಜಿರಂಕಳಿ, ಎಸ್‌.ಎಂ. ಹಾಳದೊಡ್ಡ, ಕೆ.ಆರ್‌. ಮುದಕಣ್ಣವರ, ಪಿ.ಎಸ್‌. ಹವಾಲ್ದಾರ, ಎಲ್‌.ಎಂ. ದುಂಡಪ್ಪನವರ, ಎನ್‌.ಎಸ್‌. ಬಂಕಾಪುರ, ಪಿ.ಎಂ. ಆಡೂನೂರು, ಸಿ.ಎಫ್‌. ಪಾಟೀಲ, ಭಾಗ್ಯಶ್ರೀ ಪೂಜಾರ, ಪೂರ್ಣಿಮಾ ಆದಿ, ಶಾಂಭವಿ ಅಕ್ಕಿ, ಮಮತಾಜ್ ಸೊರಟೂರು, ತೇಜಸ್ವಿನಿ ಅಂಕಲಕೋಟಿ, ಆಯ್ಯಾ ಶೋಭಾ, ಶೃತಿ ಹಾಗೂ ಶಾಲೆಯ ಎಲ್ಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.