ವಿದ್ಯಾರ್ಥಿಗಳ ಕಲಿಕಾ ಪ್ರಗತಿಗೆ ಪಾಲಕರ ಸಹಕಾರ ಅಗತ್ಯ

ವಿದ್ಯಾರ್ಥಿಗಳ ಕಲಿಕಾ ಪ್ರಗತಿಗೆ ಪಾಲಕರ ಸಹಕಾರ ಅಗತ್ಯ  Parental cooperation is essential for the students' learning progress


ತಾಳಿಕೋಟಿ 23: ಪಟ್ಟಣದ ಎಸ್‌.ಎಸ್‌. ವಿದ್ಯಾಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಸಂಗಮೇಶ್ವರ ಪ್ರೌಢಶಾಲೆಯಲ್ಲಿ ಮಂಗಳವಾರ ಪಾಲಕರ ಸಮಾಲೋಚನಾ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ಸಚಿನ ಎಚ್‌. ಪಾಟೀಲ ವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ 10ನೇ ತರಗತಿಯ ಶಿಕ್ಷಕರು ಪ್ರಾಸ್ತಾವಿಕ ನುಡಿಗಳನ್ನಾಡಿದರು.  

ಹಿರಿಯ ಶಿಕ್ಷಕ ಎಸ್‌.ವಿ. ಜಾಮಗೊಂಡ ಮಾತನಾಡಿ, “ವಿದ್ಯಾರ್ಥಿಗಳು ಎಲ್ಲರೂ ಉತ್ತಮರಾಗಿದ್ದು, ತಮ್ಮ ಕಲಿಕಾ ಮಟ್ಟವನ್ನು ಮತ್ತಷ್ಟು ಸುಧಾರಿಸಿಕೊಳ್ಳಬೇಕು” ಎಂದು ಹೇಳಿದರು. ಮುಖ್ಯ ಅತಿಥಿ ಅಶೋಕ ಕಟ್ಟಿ ಮಾತನಾಡಿ, “ಉಳಿ ಪೆಟ್ಟು ಬೀಳದೆ ಯಾವ ಕಲ್ಲೂ ಶಿಲೆಯಾಗದು. ಅದೇ ರೀತಿ ವಿದ್ಯಾರ್ಥಿಗಳು ಕಷ್ಟಪಟ್ಟು ಕಲಿಯುವ ಮೂಲಕ ಉತ್ತಮ ಸಾಧನೆ ಮಾಡಬೇಕು” ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ ಎಂ.ಎಸ್‌. ರಾಯಗೊಂಡ, ಸಿದ್ದನಗೌಡ ಮುದನೂರ, ಎಚ್‌.ಬಿ. ಪಾಟೀಲ, ಬಿ.ಐ. ಹಿರೇಹೊಳಿ ಹಾಗೂ ಪಾಲಕರ ಪ್ರತಿನಿಧಿಗಳಾದ ಸುವರ್ಣ ಎಸ್‌. ಪತ್ತಾರ ಮತ್ತು ಶ್ಯಾಲೆಸಾ ಮಕಾನದಾರ ಉಪಸ್ಥಿತರಿದ್ದರು.

ಪ್ರಗತಿ ಪರೀಕ್ಷೆಯಲ್ಲಿ ಟಾಪ್‌-10 ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ‘ಸ್ಟಾರ್ ಆಫ್ ದಿ ಮಂತ್‌’ ಪದಕ ನೀಡಿ, ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪಾಲಕರು ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕ ಬಿ.ಐ. ಹಿರೇಹೊಳಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಎಸ್‌.ಸಿ. ಗುಡಗುಂಟಿ ವಂದಿಸಿದರು.