ಅಥಣಿ ಸುಧಾ ಭಜನಾ ಮಂಡಳದಿಂದ ಏಕಾದಶಿ ನಿಮಿತ್ಯ ಪಲ್ಲಕ್ಕಿ ಉತ್ಸವ

ಅಥಣಿ ಸುಧಾ ಭಜನಾ ಮಂಡಳದಿಂದ ಏಕಾದಶಿ ನಿಮಿತ್ಯ ಪಲ್ಲಕ್ಕಿ ಉತ್ಸವ  Pallakki Utsava organized by Athani Sudha Bhajana Mandali on the occasion of Ekadashi

ಅಥಣಿ 25 : ಆಶಾಢ ಏಕಾದಶಿ ನಿಮಿತ್ಯ   ಸುಧಾ ಮಹಿಳಾ ಭಜನಾ ಮಂಡಳದ ಭಗಿನಿಯರು ಕೋಲಾಟ, ನೃತ್ಯದೊಂದಿಗೆ ಗ್ರಾಮ ಪ್ರದಕ್ಷಿಣೆ ಹಾಕುವ ಮೂಲಕ   ವಿಠ್ಠಲ ಮಂದಿರಕ್ಕೆ ಆಗಮಿಸಿದರು.  ಸುಧಾ ಭಜನಾ ಮಂಡಳದ ಭಗಿನಿಯರು ಸ್ಥಳೀಯ   ನರಸಿಂಹ ದೇವಸ್ಥಾನದಲ್ಲಿ ಪಲ್ಲಕ್ಕಿಗೆ, ನರಸಿಂಹ ದೇವರಿಗೆ ಆರತಿ ಮಾಡಿದ ನಂತರ ಮೆರವಣಿಗೆ ಮೂಲಕ ಹೊರಟು ಬಾರೆ ಭಾಗ್ಯದ ನಿಧಿಯೇ, ಇಟ್ಟಿಗೆ ಮೇಲೆ ನಿಂತಾನಮ್ಮ , ಗುರು ಮಧ್ವರಾಯರಿಗೆ, ರಂಗಾ ನಿನ್ನ ಕೊಂಡಾಡುವೆ,  ಪತಿಯು ನಮಗೆ ಸಂಪದವೀಯಲಿ ಸೇರಿದಂತೆ ಅನೇಕ ದಾಸರ ಪದಗಳನ್ನು ಹಾಡುತ್ತ, ಕುಣಿಯುತ್ತ, ವಿಠ್ಠಲನ ನಾಮಸ್ಮರಣೆ ಮಾಡುತ್ತ ಕೋಲಾಟ ಆಡಿದರು, ತುಳಸಿ ಕಟ್ಟೆ ತಲೆ ಮೇಲೆ ಹೊತ್ತು ಮಹಿಳೆಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಈ ಮೆರವಣಿಗೆ ಜೋಶಿ ಗಲ್ಲಿ, ಹಬ್ಬು ಗಲ್ಲಿ, ದೇಶಪಾಂಡೆ ಗಲ್ಲಿಯ ಮೂಲಕ  ವಿಠ್ಠಲ ಮಂದಿರ ತಲುಪಿ ಸಮಾವೇಶ ಗೊಂಡಿತು. ಮೆರವಣಿಗೆ ಬರುವ ದಾರಿಯುದ್ದಕ್ಕೂ ಜನರು ಆರತಿ ಮಾಡಿ ಬರಮಾಡಿಕೊಂಡರು. ಹರಿವಾಣ ಸೇವೆಯನ್ನು ದೇವರಿಗೆ ಅರ​‍್ಿಸಲಾಯಿತು, ವಿಠ್ಠಲ ದೇವರಿಗೆ ಆರತಿ ಮಾಡಲಾಯಿತು. ಏಕಾದಶಿ ವೃತದ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶಿಷ್ಠವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು   ಸುಧಾ ಭಜನಾ ಮಂಡಳದ ರಮಾ ಕುಲಕರ್ಣಿ ಹೇಳಿದರು.  ಮೆರವಣಿಗೆಯಲ್ಲಿ   ಸುಧಾ ಭಜನಾ ಮಂಡಳಿಯ ಸದಸ್ಯೆಯರು ಉತ್ಸಾಹದಿಂದ ಪಾಲ್ಗೊಂಡಿದ್ದರು.