ಪಿ ಎಲ್ ಡಿ ಬ್ಯಾಂಕಿನ 58ನೇಯ ವಾರ್ಷಿಕ ಸರ್ವಸಾಧರಣ ಸಭೆ
PLD Bank's 58th Annual General Meeting
ಮುಂಡಗೋಡ 23: ಮುಂಡಗೋಡ ತಾಲೂಕಾ ಪ್ರಾಥಮಿಕ ಸಹಾಕಾರಿ ಕೃಷಿ ಮತ್ತು ಗ್ರಾಮಿಣ ಅಭಿವೃದ್ಧಿ ಬ್ಯಾಂಕ್ ನಿಯಮಿತ 58ನೇ ವಾರ್ಷಿಕ ಸರ್ವಸಾಧರಣ ಸಭೆ ಮಂಗಳವಾರ ಪಿ ಎಲ್ ಡಿ ಬ್ಯಾಂಕಿನ ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ಯಲ್ಲಪ್ಪ ಪಾಂಡಪ್ಪ ಭುಜಂಗಿ ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಂಡಗೋಡ ತಾಲೂಕಾ ಪ್ರಾಥಮಿಕ ಸಹಾಕಾರಿ ಕೃಷಿ ಮತ್ತು ಗ್ರಾಮಿಣ ಅಭಿವೃದ್ಧಿ ಬ್ಯಾಂಕು ಕಳೆದ 58 ವರ್ಷಗಳಿಂದ ತಾಲೂಕಿನ ರೈತರ ಸೇವೆಯನ್ನು ಮಾಡುತ್ತಾ ಬಂದಿದೆ. 4269ಕ್ಕಿಂತಲೂ ಹೆಚ್ಚಿನ ರೈತರಿಗೆ ರೂ. 34.28 ಕೋಟಿ ಗಿಂತಲೂ ಹೆಚ್ಚಿನ ಸಾಲ ಒದಗಿಸಿದೆ. ರೈತರಿಗೆ ನಿರಾವರಿ, ಕೃಷಿ ಯಾಂತ್ರೀಕರಣ,ಸಣ್ಣ ಸಾರಿಗೆ ವಾಹನ,ವ್ಯಾಪಾರಿ ಠೇವಣಿ ಸಾಲ, ಅತೀ ಸಣ್ಣ ರೈತರಿಗೆ ಆಧ್ಯತೆಯ ಮೇರೆಗೆ ಸಾಲ ಒದಗಿಸಲಾಗಿದೆ.ಈ ವರ್ಷವೂ ರೂ 224.69 ಲಕ್ಷ ಸಾಲ ಒದಗಿಸಲಾಗಿದೆ. ಈ ಹಿಂದಿನ 2023-24ನೇ ಸಾಲಿನ ಲಾಭ ರೂ. 13.55ಲಕ್ಷ ಆಗಿರುತ್ತಿದ್ದು, ಕೂಡಿಬಿದ್ದ ಹಾನಿ ರೂ. 193.27 ಲಕ್ಷಗಳಿದ್ದು, ಸನ್ 2024-25 ನೇ ಸಾಲಿನಲ್ಲಿ ನಷ್ಟ ರೂ. 47.27 ದಷ್ಟು ಒಟ್ಟು ಕೂಡಿಬಿದ್ದ ಹಾನಿ ರೂ. 240.98ಲಕ್ಷಕ್ಕೆ ಹೆಚ್ಚಿಗೆ ಆಗಿರುತ್ತದೆ. ವಸೂಲಿ ಆಗದೇ ಬರತಕ್ಕ ಸಾಲವು ರೂ. 74.82 ಬಾಕಿ ಉಳಿದಿದ್ದು ಕರಡು ಹಾಗೂ ಅನುಮಾನಾಸ್ಪದ ನಿಧಿ ರೂ. 38.75 ಲಕ್ಷ ಅನುವು ಮಾಡಿರುವುದರಿಂದ ಹಾಗೂ ರಾಜ್ಯ ಬ್ಯಾಂಕಿಗೆ ಕೊಡತಕ್ಕ ಬಡ್ಡಿ ಮತ್ತು ಮುಂದುವರೆದ ಬಡ್ಡಿ ರೂ. 91.17 ಲಕ್ಷ ಅನುವು ಮಾಡಿದ್ದರಿಂದಲೂ ಕೂಡಿ ಬಿದ್ದ ಒಟ್ಟು ಹಾನಿ ರೂ. 240.098 ಲಕ್ಷಕ್ಕೆ ಏರಿಕೆಯಾಗಿ ಮುಂದುವರೆದಿರುತ್ತದೆ.
ಈ ವೇಳೆಗೆ ಪಿ ಎಲ್ ಡಿ ಬ್ಯಾಂಕಿನ ಅಧ್ಯಕ್ಷರಾದ ಯಲ್ಲಪ್ಪ ಪಾಂಡಪ್ಪ ಭುಜಂಗಿ, ಉಪಾಧ್ಯಕ್ಷರು ನಬಿಸಾಬ ಮಿಶ್ರೀಕೋಟಿ, ಚಂದ್ರಶೇಖರ ಸದಾನಂದ ಗಾಣಿಗೇರ, ಫಕ್ಕೀರ್ಪ ಓಣಿಕೇರಿ, ಮಂಜುನಾಥ ಭೀಮರಾವ ಶೇಟ್, ಮಂಜುನಾಥ ಪಾಟೀಲ್, ರಾಮಣ್ಣ ಲಮಾಣಿ, ಬಸಪ್ಪಾ ನಾಯ್ಕ, ಅನ್ನಪೂರ್ಣ ತೆಗ್ಗಳ್ಳಿ , ನಾಗರಾಜ್ ಅಂಡಗಿ, ಶಿವಾಜಿ ಕುಡ್ಡಿಕೇರಿ, ನಿರ್ಮಾಲಾ ವಾಲ್ಮೀಕಿ, ಪಿ ಎಲ್ ಡಿ ಬ್ಯಾಂಕಿನ ಪ್ರ.ವ್ಯವಸ್ಥಾಪಕರು ಕಲ್ಯಾಣ್ ಕುಮಾರ್ ಪಿ ಚೌಶೇಟ್ಟಿ, ವ್ಯವಸ್ಥಾಪಕರು ರಮೇಶ್ ದಾಂಡೇಕರ, ಲೆಕ್ಕಾಧಿಕಾರಿ ಜಿ.ಕೆ ನಾಯ್ಕ, ಕಂಪ್ಯೂಟರ್ ಆಪರೇಟರ್ ಸಂದೀಪ್ ಪ್ರ ರಾಯ್ಕರ್, ಕಂಪ್ಯೂಟರ್ ಆಪರೇಟರ್ ವಿನಯ್ ಎ ಲಕ್ಷ್ಮಿಪೂರ, ಮಲ್ಲಿಕಾರ್ಜುನ ಹುಬ್ಬಳ್ಳಿ, ಎಸ್. ಡಿ. ಪಾಯಣ್ಣನವರ ಸಹಾಯಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 