ಸಮಾಜೋಪಯೋಗಿ ಕಾರ್ಯ ಮಾಡಿದಲ್ಲಿ ಹೆಸರು ಅಜರಾಮರ: ಡಾ. ಸಿದ್ದು ಹುಲ್ಲೋಳಿ
One's name becomes immortal through service to society: Dr. Siddu Hullolli
ಲೋಕದರ್ಶನ ವರದಿ
ಜಮಖಂಡಿ 06: ಸಮಾಜಕ್ಕೆ ಉಪಯೋಗವಾಗುವ ಒಳ್ಳೆಯ ಕೆಲಸ ಮಾಡಿದರೆ ಮಾತ್ರ ಹೆಸರು ಅಜರಾಮರವಾಗಿರುತ್ತದೆ. ಹಣವನ್ನು ಮತ್ತು ಜನರನ್ನು ಗಳಿಸಬಹುದು ಆದರೆ ಅದು ಶಾಶ್ವತವಾಗಿರುವುದಿಲ್ಲ. ಸಮಾಜಕ್ಕಾಗಿ ಯಾರು ದುಡಿಯುತ್ತಾರೆ ಅವರು ಶಾಶ್ವತವಾಗಿರಲು ಸಾಧ್ಯ ಎಂದು ಬೆಳಗಾವಿ ಮಹಾನಗರ ಪಾಲಿಕೆ ಉಪಆಯುಕ್ತ ಡಾ,ಸಿದ್ದು ಹುಲ್ಲೋಳಿ ಹೇಳಿದರು.
ನಗರದ ಪಾರ್ಶ್ವನಾಥ ದಿಗಂಬರ ಜೈನ ಮಂದಿರದಲ್ಲಿ ನಡೆದ ಜೈನ ಅಲ್ಪಸಂಖ್ಯಾತರ ನೌಕರರ ಅಭಿವೃದ್ಧಿ ಟ್ರಸ್ಟ್ ಕಮೀಟಿ ಹಾಗೂ ಸಮಸ್ತ ಜೈನ ಸಮಾಜದ ಸಹಯೋಗದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ 10ನೇ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಭಾವಂತ ಮಕ್ಕಳನ್ನು ಬೆನ್ನುತಟ್ಟುವ ಕೆಲಸವನ್ನು ಜೈನ ಸಮಾಜ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಪ್ರತಿವರ್ಷ ಪ್ರತಿಭಾ ಪುರಸ್ಕಾರದಲ್ಲಿ ಸನ್ಮಾನ ಮಾಡಿಕೊಂಡಿರುವ ಮಕ್ಕಳು ಮುಂದೆ ಯಾವ ಹುದ್ದೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಕಲೆಯನ್ನು ಹಾಕಿ ಅವರ ಪರಿಚಯವನ್ನು ಪ್ರತಿವರ್ಷದ ಕಾರ್ಯಕ್ರಮದಲ್ಲಿ ಪ್ರಸಾರ ಮಾಡಬೇಕು ಎಂದರು.
ಜಮಖಂಡಿ ನಗರದಲ್ಲಿ ವಿಶ್ವವಿದ್ಯಾನಿಲಯ ಆಗಲು ಅದು ಜೈನ ಸಮಾಜ ಮುಖಂಡ ಸಂದೀಪ ಬೆಳಗಲಿ ಅವರ ಸತತ ಪ್ರಯತ್ನದಿಂದ ವಿಶ್ವವಿದ್ಯಾನಿಲಯವಾಗಿದೆ. ಸಂಘಟನೆ ಎಂದರೆ ಪ್ರತಿಷ್ಠೆ ಅಲ್ಲ. ಸಂಘಟನೆಯಲ್ಲಿ ಇರುವ ವ್ಯಕ್ತಿಗಳು ಕೂಲಿಕಾರರಾಗಿ ದುಡಿದರೆ ಮಾತ್ರ ಸಂಘಟನೆ ಬೆಳೆಯಲು ಸಾಧ್ಯ ಎಂದರು.
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ 