ಒನಕೆ ಓಬವ್ವನ ಸಾಹಸ ಇಂದಿಗೂ ಸ್ಫೂರ್ತಿಯಾಗಿದೆ: ಡಾ. ಶಿರೂರ
Onake Obavva's adventure continues to inspire even today: Dr. Shiroora
ಲೋಕದರ್ಶನ ವರದಿ
ಜಮಖಂಡಿ 14: ಒನಕೆ ಓಬವ್ವ ಧೈರ್ಯ ಮತ್ತು ದೇಶಭಕ್ತಿಯ ಪ್ರತೀಕವಾಗಿದ್ದಾರೆ. ಚಿತ್ರದುರ್ಗದ ಕೋಟೆಯ ಬಾಗಿಲಲ್ಲಿ ಒಬ್ಬ ಶತ್ರುವನ್ನೂ ಒಳಗೆ ನುಗ್ಗದಂತೆ ತಡೆಯಲು ಒಬ್ಬಳೇ ಹೋರಾಡಿದ ಅವರ ಸಾಹಸ ಇಂದಿಗೂ ಸ್ಫೂರ್ತಿಯಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಸುನಂದಾ ಎಸ್, ಶಿರೂರ ಹೇಳಿದರು.
ನಗರದ ಮಹಿಳಾ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ರಾಜ್ಯಶಾಸ್ತ್ರ ವಿಭಾಗ ಹಾಗೂ ಐ.ಕ್ಯೂ.ಎ.ಸಿ. ಘಟಕದ ಅಡಿಯಲ್ಲಿ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಯ್ನಾಡಿನ ರಕ್ಷಣೆಗೆ ತಮ್ಮ ಪ್ರಾಣವನ್ನೇತ್ಯಾಗ ಮಾಡಿದ ಓಬವ್ವ ಅವರ ಧೈರ್ಯವು ಮಹಿಳೆಯರ ಶೌರ್ಯ, ತ್ಯಾಗ ಮತ್ತು ಸಂಕಲ್ಪದ ಮಹತ್ತ್ವವನ್ನು ನಮಗೆ ನೆನಪಿಸುತ್ತದೆ. ಅವರ ಜೀವನವು ಪ್ರತಿಯೊಬ್ಬಯುವತಿಯಿಗೂ ಪ್ರೇರಣೆ ಯದಾರಿ ತೋರಿಸುತ್ತದೆ. ಸತ್ಯ, ಧೈರ್ಯಮತ್ತು ದೇಶಪ್ರೇಮದ ಅಡಿಗಲ್ಲುಗಳ ಮೇಲೆ ನಿಂತು ಬದುಕುವ ಪಾಠವನ್ನು ಕಲಿಸುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಅನುಸೂಯಾ ಮಬ್ರುಮಕರ, ಸುಜಾತಾ ಬಸಪ್ಪಗೋಳ, ಎಸ್. ಬಿ. ತೇರದಾಳ, ಸಂಜೀವ ಕಾಂಬಳೆ, ವಿನಾಯಕ ಹಿಮಕರ, ಸುನಂದಾ ಸಣ್ಣಕ್ಕಿ, ಗಂಗಪ್ಪ ನಾಯಕ, ಸಂತೋಷ ಯಡಹಳ್ಳಿ ಸೇರಿದಂತೆ ಅನೇಕರು ಇದ್ದರು.
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್ 