ದಿ. 25 ರಂದು ‘ಲೂಸಿ ಗುರುಮಾತೆಯ ಸಾಂಪ್ರತ’ ಪುಸ್ತಕ ಲೋಕಾರ್ಪಣೆ
On 25th, book launch of 'Lucy Gurumatae Samprata'
ಧಾರವಾಡ, 24 ; ಕರ್ನಾಟಕ ವಿದ್ಯಾವರ್ಧಕ ಸಂಘವು, “ಶ್ರೀಮತಿ ಲೂಸಿ ಕೆ. ಸಾಲ್ಡಾನರವರ ದತ್ತಿ” ಕಾರ್ಯಕ್ರಮ ಅಂಗವಾಗಿ ದಿ. 25 ರಂದು ಸಂಜೆ 6 ಗಂಟೆಗೆ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಡಾ. ವಾಯ್ ಬಿ. ಕಡಕೋಳ ಸಂಪಾದಕತ್ವದ ‘ಲೂಸಿ ಗುರುಮಾತೆಯ ಸಾಂಪ್ರತ’ ಪುಸ್ತಕ ಲೋಕಾರೆ್ಣ ಹಮ್ಮಿಕೊಂಡಿದೆ.
ಧಾರವಾಡ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಪುಸ್ತಕ ಲೋಕಾರೆ್ಣ ಮಾಡುವರು.
ಬೆಂಗಳೂರಿನ ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ಜಿ. ಶಿವಣ್ಣ, ಧಾರವಾಡ ಅಪ್ನಾದೇಶ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಟಿ. ವೀಣಾ ಹಾಗೂ ಧಾರವಾಡ ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ಕಾರ್ಯಾಧ್ಯಕ್ಷ ಎಲ್.ಐ. ಲಕ್ಕಮ್ಮನವರ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಕೋಶಾಧ್ಯಕ್ಷ ಸತೀಶ ತುರಮರಿ ಅಧ್ಯಕ್ಷತೆ ವಹಿಸುವರು.
ನಿವೃತ್ತ ಶಿಕ್ಷಕಿ ಲೂಸಿ ಕೆ. ಸಾಲ್ಡಾನ ಮತ್ತು ಮುನವಳ್ಳಿಯ ಶಿಕ್ಷಕ ಸಾಹಿತಿ ಡಾ. ವಾಯ್. ಬಿ. ಕಡಕೋಳ ಗೌರವ ಉಪಸ್ಥಿತರಿರುವರು.
ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 