ಓಂ ನಮಃ ಶಿವಾಯ ತಾರಕ ಮಂತ್ರದ ಮಂಗಲೋತ್ಸವ
Om Namah Shivaya Taraka Mantra's Mangalotsava
ಲೋಕದರ್ಶನ ವರದಿ
ಹಾರೂಗೇರಿ, 17 : ಇಲ್ಲಿನ ಶ್ರೀ ಗುರು ಚನ್ನವೃಷಭೇಂದ್ರ ದೇವರಕೊಂಡಜ್ಜನವರ ಲೀಲಾಮಠದಲ್ಲಿ ಮಹಾಶಿವರಾತ್ರಿ ಸಪ್ತಾಹದ ಓಂ ನಮಃ ಶಿವಾಯ ತಾರಕ ಮಂತ್ರದ ಶತಮಾನೋತ್ಸವ ನಿಮಿತ್ತ ನಿರಂತರ 7 ದಿನಗಳವರೆಗೆ ನಡೆದ ಭಜನಾ ಸಪ್ತಾಹ ಮಂಗಳವಾರ ಮಂಗಲೋತ್ಸವ, ಪೂಜಾ, ವಿಧಿ-ವಿಧಾನಗಳೊಂದಿಗೆ ಸಂಪನ್ನವಾಯಿತು.
ಸಹಸ್ರಾರು ಭಕ್ತರು ಶ್ರೀ ಚನ್ನವೃಷಭೇಂದ್ರ ದೇವರಕೊಂಡಜ್ಜ ಮತ್ತು ಶ್ರೀ ಡಾ.ಶಿವಾನಂದ ಭಾರತಿ ಸ್ವಾಮೀಜಿ ಮೂರ್ತಿಗಳಿಗೆ ಪೂಜೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು. 7 ದಿನಗಳವರೆಗೆ ನಿರಂತರ ಭಜನೆಗಾಗಿ 10ಕ್ಕೂ ಹೆಚ್ಚು ಪುರುಷ ಮತ್ತು ಮಹಿಳೆಯರ ತಂಡಗಳನ್ನು ರಚಿಸಲಾಗಿತ್ತು.
ಶ್ರೀಮಠದ ಕಾರ್ಯದರ್ಶಿ ಅಪ್ಪಾಸಾಬ ಕುಲಕರ್ಣಿ ಮಂಗಲ ಗೀತೆ ಹಾಡಿ, ಮಾತನಾಡುತ್ತ ಮನೆಗಳಲ್ಲಿ ಓಂ ನಮಃ ಶಿವಾಯ ತಾರಕ ಮಂತ್ರದ ಭಜನೆಯನ್ನು ನಿತ್ಯ ಮಾಡುವುದರಿಂದ ಇಂದ್ರಿಯದ ಮೇಲೆ ನಿಯಂತ್ರಣ ಬರುತ್ತದೆ. ಭಕ್ತಿ ಹೆಚ್ಚಾದಂತೆ ಆಯಾಸ ಕಡಿಮೆಯಾಗುತ್ತದೆ. ಏಕೆಂದರೆ ಆ ಭಕ್ತಿಯಲ್ಲಿ ದೇವರಕೊಂಡಜ್ಜನವರ ದಿವ್ಯ ಶಕ್ತ ಅಡಗಿದೆ ಎಂದರು.
ಶ್ರೀಮಠದ ಸದ್ಭಕ್ತರಾದ ಶಿವಗೊಂಡ ಧರ್ಮಟ್ಟಿ, ಬಾಬು ಪರಮಗೌಡರ, ಶ್ರೀಶೈಲಗೌಡ ಉಮರಾಣಿ, ವಿಠ್ಠಲರಾವ ಬಂತಿ, ಸಿದ್ದಪ್ಪ ಗವಣ್ಣವರ, ನೇಮಿನಾಥ ಕೊತ್ತಲಗಿ, ಮಲಗೌಡ ಉಮರಾಣಿ, ಯಮನಪ್ಪ ಬಂಡಗಾರ, ವಿಜಯ ಬಂತಿ, ಪದ್ಮರಾಜ ಕರ್ಣವಾಡಿ, ತಮ್ಮಣ್ಣಿ ಕುರಿ, ಲಾಲಸಾಬ ಜಮಾದಾರ, ಎಸ್.ವಾಯ್.ಸನದಿ, ಮುತ್ತ-ಪ್ಪ ಗಸ್ತಿ, ಭಗವಂತ ಸೂರಣ್ಣವರ, ಚನ್ನಬಸು ಸದಲಗಿ, ಅಪ್ಪಾಸಾಬ ಹಿಡಕಲ್, ಕಾಶಪ್ಪ ನಾಗನೂರ, ರಾಘವೇಂದ್ರ ದೇಶಪಾಂಡೆ, ಸುರೇಶ ಧರ್ಮಟ್ಟಿ, ಮಹಾವೀರ ಅಸ್ಕಿ, ಜ್ಯೋತೆಪ್ಪ ಉಮರಾಣಿ, ಶಶಿಧರ ಶಿಂಗೆ, ಗೋಪಾಲ ಧರ್ಮಟ್ಟಿ, ಬಾಬು ಹಳ್ಳೂರ ಮೊದಲಾದವರು ಉಪಸ್ಥಿತರಿದ್ದರು.
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ 