ಬರ ಪೀಡಿತ ಪ್ರದೇಶ ಘೋಷಣೆಗೆ ಅಧಿಕಾರಿಗಳು,ಜನಪ್ರತಿನಿಧಿಗಳು ನಿರ್ಲಕ್ಷ್ಯ : ಶರಣಬಸಪ್ಪ

ಬರ ಪೀಡಿತ ಪ್ರದೇಶ ಘೋಷಣೆಗೆ ಅಧಿಕಾರಿಗಳು,ಜನಪ್ರತಿನಿಧಿಗಳು  ನಿರ್ಲಕ್ಷ್ಯ : ಶರಣಬಸಪ್ಪ   Officials and elected representatives negligent regarding declaration of drought-hit areas: Sharanab


  ಯಲಬುರ್ಗಾ: ತಾಲೂಕಿನಲ್ಲಿ ಸಕಾಲದಲ್ಲಿ ಮಳೆ ಆಗದೆ ಇರುವದರಿಂದ ರೈತರು ಬೀಜ ಗೋಬ್ಬರ ಸೇರಿದಂತೆ ಭೂಮಿ ಬಿತ್ತನೆಗಾಗಿ ಸಾಲ ಶೂಲ ಮಾಡಿ ಕಂಗಾಲಾಗಿದ್ದಾರೆ ಆದರೆ ಯಲಬುರ್ಗಾ ತಾಲೂಕನ್ನು ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡುವಲ್ಲಿ ಸರ್ಕಾರ ತಪ್ಪು ನಿರ್ಧಾರವನ್ನು ತಗೆದುಕೊಂಡು ಎಡವಿ ಬಿಟ್ಟಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಯಲಬುರ್ಗಾ ತಾಲೂಕು ಅಧ್ಯಕ್ಷ ಶರಣಬಸಪ್ಪ ದಾನಕೈ ಅವರು ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿಲುವನ್ನು ಖಂಡಿಸಿದ್ದಾರೆ, ಮಳೆ ಕೊರತೆಯಿಂದ ಯಲಬುರ್ಗಾ, ಕುಷ್ಟಗಿ,ಕೊಪ್ಪಳ ತಾಲೂಕಿನ ರೈತರಿಗೆ ಅನ್ಯಾಯವಾಗಿದೆ ಆದ್ದರಿಂದ ಈ ತಾಲೂಕುಗಳನ್ನು ಮರು ಪರೀಶೀಲನೆ ಮಾಡಿ,ರೈತರ ಹಿತ ಕಾಪಾಡುವಲ್ಲಿ ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ (ವಾಸುದೇವ ಮೇಟಿ ಬಣದ ) ಯಲಬುರ್ಗಾ ತಾಲೂಕು ಅಧ್ಯಕ್ಷ ಶರಣಬಸಪ್ಪ ದಾನಕೈ ಅವರು ಬರ ಪೀಡಿತ ಪ್ರದೇಶವೇಂದು ಘೋಷಣೆ ಮಾಡಬೇಕು , ಒಂದು ವೇಳೆ ವಿಳಂಬವಾದರೆ ರೈತರೆಲ್ಲರು ಸೇರಿ  ಬೀದಿಗಳಿದು ಹೊರಾಟ ಮಾಡುತ್ತವೆ ಎಂದರು.