ಅಧಿಕಾರಿಗಳ ಸಂಘದ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಸುವ ಸಲುವಾಗಿ ಡಾ. ಶಕೀಲಾ ಎನ್‌. ಅವರಿಗೆ ಮನವಿ

ಅಧಿಕಾರಿಗಳ ಸಂಘದ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಸುವ ಸಲುವಾಗಿ ಡಾ. ಶಕೀಲಾ ಎನ್‌. ಅವರಿಗೆ ಮನವಿ Officers' Association appeals to Dr. Shakeela N. to fulfill various demands

ಹಾವೇರಿ 11 :   ಕರ್ನಾಟಕ ರಾಜ್ಯ ಎನ್ ಹೆಚ್ ಎಂ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳ ಸಂಘದ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಸುವ ಸಲುವಾಗಿ ಉಪನಿರ್ದೇಶಕರುರಾಜ್ಯ ರಕ್ತ ಕೋಶ ಹಾಗೂ ರಕ್ತ ಶೇಖರಣಾ ಘಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ ಡಾ. ಶಕೀಲಾ ಎನ್‌. ಅವರಿಗೆ ಮನವಿ ಸಲ್ಲಿಸಲಾಯಿತು.ರಾಜ್ಯ ಸಂಘಟನಾ ಕಾರ್ಯದರ್ಶಿಯವರಾದ ಮಹಾಂತೇಶ ಹೊಳೆಮ್ಮನವರ ಪ್ರಸ್ತಾಪವಾಗಿ ತಮ್ಮ ಮನವಿಯ ಸಮಸ್ಯೆಯನ್ನು ವಿವರಿಸಿ ರಕ್ತ ಶೇಖರಣಾ ಘಟಕದ ಪ್ರಯೋಗಶಾಲಾ ತಂತ್ರಜ್ಞರಾದ ನಾವುಗಳು ತಮ್ಮ ಮಾರ್ಗದರ್ಶನದಲ್ಲಿ ಕಳೆದ ಹತ್ತಾರು ವರ್ಷಗಳಿಂದ ರಾಜ್ಯದ ಪ್ರತಿಯೊಂದು ಜಿಲ್ಲೆಯ ವಿವಿಧ ಹಂತದ ತಾಲೂಕ ಮಟ್ಟದ ಆಸ್ಪತ್ರೆ, ತಾಯಿ ಮಕ್ಕಳ ಆಸ್ಪತ್ರೆ, ಸಮುದಾಯ ಕೇಂದ್ರದ ಆಸ್ಪತ್ರೆಗಳಲ್ಲಿ ನಿರಂತರವಾಗಿ ದಿನದ 24*7 ಘಂಟೆಗಳ ಕಾಲ ತುರ್ತು ಸಂದರ್ಭದಲ್ಲಿ ತಮ್ಮ ಮಾರ್ಗಸೂಚಿಗಳ ಅನ್ವಯ ಹಲವಾರು ಜನರ ಜೀವ ಉಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ.

ಕಳೆದ 2016 ನೇ ಸಾಲಿನಿಂದಲೂ ಕಾರ್ಯನಿರ್ವಹಿಸುತ್ತಿರುವ ನಾವುಗಳು ಪ್ರಸ್ತುತವಾಗಿ ಹಲವಾರು ಸಮಸ್ಯೆಗಳುನ್ನು ಎದುರಿಸುತ್ತಿದ್ದು ಸ್ಥಳೀಯವಾಗಿ ಈಗಾಗಲೇ ನಮ್ಮ ಹಂತದ ಕೇಂದ್ರಗಳಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ ಪ್ರಯುಕ್ತ ತಮ್ಮ ಮೂಲಕ ಪರಿಹಾರ ಮತ್ತು ಮಾರ್ಗದರ್ಶನ ನೀಡಿದ್ದಲ್ಲಿ ಮತ್ತಷ್ಟು ಸುಲಲಿತವಾದ ಸೇವೆ ಸಾರ್ವಜನಿಕರಿಗೆ ನೀಡಲು ಸಹಾಯಕವಾಗಲಿದೆ, ಖಂಡಿತ ವಾಗಿಯೂ ತಾವುಗಳು ಸ್ಪಂದಿಸುವ ಆಶಾಭಾವನೆ ನಾವೆಲ್ಲರೂ ಹೊಂದಿರುತ್ತೇವೆ.ರಕ್ತ ಕೇಂದ್ರಕ್ಕೆ ಸಂಬಂದಿಸಿದ ಸಮಸ್ಯೆಗಳು ಈ ರೀತಿ ಇರುತ್ತವೆ ಜಿಲ್ಲಾ ಮಟ್ಟದ ರಕ್ತ ಕೇಂದ್ರಗಳಿಂದ ರಕ್ತ ಶೇಖರಣಾ ಕೇಂದ್ರಕ್ಕೆ ರಕ್ತದ ಸರಬರಾಜಿಗೆ ಆಂಬುಲೆನ್ಸ್‌ ಕಡ್ಡಾಯವಾಗಿ ಒದಗಿಸುವುದು, ಮತ್ತು ಸ್ಥಳೀಯ ಹಂತದಲ್ಲಿ ರಕ್ತದಾನ ಶಿಬಿರ ಆಯೋಜನೆಗೆ ಪ್ರೊತ್ಸಾಹ ನೀಡುವುದು ಮತ್ತು ಪ್ರಯೋಗಶಾಲಾ ತಂತ್ರಜ್ಞರಿಗೆ ರಕ್ತದಾನ ಶಿಬಿರದಲ್ಲಿ ಭಾಗಿಯಾಗಲು ಪ್ರಯಾಣ ಭತ್ಯೆ ಹಾಗೂ ಇನ್ನಿತರ ಭತ್ಯೆ ನೀಡುವುದು/ ಮಲೇರಿಯಾ ಕಾರ್ಯಕ್ರಮದಲ್ಲಿ ನೀಡಿರುವಂತೆ ದ್ವಿಚಕ್ರ ವಾಹನ ಗಳನ್ನು ನೀಡುವುದು,

ರಕ್ತ ಶೇಖರಣಾ ಕೇಂದ್ರಕ್ಕೆ ಅವಶ್ಯಕತೆ ಇರುವ ಸಾಮಗ್ರಿಗಳನ್ನು ಸರಿಯಾದ ಸಮಯಕ್ಕೆ ಒದಗಿಸುವುದು, ರಕ್ತ ಶೇಖರಣಾ ಕೇಂದ್ರದ ಪ್ರಯೋಗಶಾಲಾ ತಂತ್ರಜ್ಞರ ನಿಯೋಜನೆ ಮತ್ತು ಪ್ರಯೋಗಲಯದ ಇನ್ನಿತರ ವಿಭಾಗದಲ್ಲಿ ಹೆಚ್ಚುವರಿ ಕಾರ್ಯನಿರ್ವಹಿಸುತ್ತಿರುವುದು ರದ್ದುಪಡಿಸುವುದು, ಹಾಗೂ ರಕ್ತ ಶೇಖರಣಾ ಘಟಕದ ಪ್ರಯೋಗಶಾಲಾ ತಂತ್ರಜ್ಞರಿಗೆ ವರ್ಷಕ್ಕೆ ಕನಿಷ್ಠ ಒಂದು ಬಾರಿಯಾದರು ರಾಜಮಟ್ಟದ ಕಾರ್ಯಾಗಾರಕ್ಕೆ / ತರಬೇತಿ ಶಿಬಿರ ಆಯೋಜಿಸುವುದು ಮತ್ತು ಪಾಲ್ಗೊಳ್ಳಲು ಅವಕಾಶ ಕಲ್ಪಿಸುವುದು ಮನವಿ ಮಾಡಿಕೊಂಡರು. ಇದೇ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಶರಣಗೌಡ ಹಚಡದ, ರಾಚಣ್ಣಗೌಡ ಕರಡ್ಡಿ ಇತರರು ಉಪಸ್ಥಿತರಿದ್ದರು.