ಸ್ತ್ರೀ ಸಬಲೀಕರಣಕ್ಕೆ ಶರಣರ ಕೊಡುಗೆ ಅನನ್ಯ: ವೀಣಾ ಕಾಶಪ್ಪನವರ
Oath-taking ceremony of the women's unit of the District Mahasabha
ಜಿಲ್ಲಾ ಮಹಾಸಭೆಯ ಮಹಿಳಾ ಘಟಕದ ಪದಗ್ರಹಣ ಸಮಾರಂಭ
ಬೆಳಗಾವಿ ಸೆ.17: ಹನ್ನೆರಡನೆ ಶತಮಾನದ ಅನುಭವ ಮಂಟಪದ ಮೂಲಕ ಸಿೊಥ ಸಮಾನತೆಯನ್ನು ನೀಡಿ ಸ್ತ್ರೀ ಸಬಲೀಕರಣದ ಧ್ವನಿಯನ್ನು ವಿಸ್ತರಿಸಿದವರು ಬಸವಣ್ಣನವರು ಹಾಗೂ ಉಳಿದೆಲ್ಲ ಶರಣರು. ಅವರ ನೀಡಿದ ಅಭಿವ್ಯಕ್ತಿ ಫಲವೇ ಇಂದು ನಮ್ಮ ಸಮಾಜದ ಮಹಿಳೆ ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆಯನ್ನು ಗೈದಿದ್ದಾಳೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷಿೊಥಯ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು.ಅವರು ಬೆಳಗಾವಿಯ ಕನ್ನಡ ಭವನದಲ್ಲಿ ಜರುಗಿದ ಜಿಲ್ಲಾ ಮಹಾಸಭೆ ಮಹಿಳಾ ಘಟಕದ ಪದಗ್ರಹಣ ಸಮಾರಂಭದಲ್ಲಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಬಸವಾದಿ ಶಿವಶರಣರು ಎಂಟುನೂರು ವರ್ಷಗಳ ಹಿಂದೆಯೇ ಮಹಿಳೆಯನ್ನು ಸಮಾನವಾಗಿ ಕಂಡರು. ಅವಳ ಆತ್ಮಬಲವನ್ನು ಹೆಚ್ಚಿಸಿದರು. ಕಾಯಕದಲ್ಲಿ ಸಮಾನತೆಯನ್ನು ನೀಡಿದರು. ಸಮಾಜದ ಮುನ್ನೆಲೆ ಅವಳನ್ನು ತಂದರು ಎಂಬದನ್ನು ಗಮನಿಸಬೇಕು.
ಹೆಣ್ಣು ಮಕ್ಕಳಿಗೆ ವಿಶೇಷವಾದ ಶಕ್ತಿಯಿದೆ. ಅವಳು ದೈವ ಸ್ವರೂಪಗಳು ಎಂಬುದನ್ನು ನಮ್ಮ ಸಂಸ್ಕೃತಿ ಎತ್ತಿತೋರಿಸುತ್ತದೆ. ಅವಳು ಸರಸ್ವತಿ ದುರ್ಗೆ, ಚಾಮುಂಡಿ ಹೀಗೆ ಎಲ್ಲವೂ ಆಗಿದ್ದಾಳೆ. ಅವಳು ಅಬಲೆ ಅಲ್ಲ. ಮಹಿಳೆಯನ್ನು ಗೌಣವಾಗಿ ಕಾಣುವ ಪ್ರಶ್ನೆ ಸಮಾಜದಲ್ಲಿ ಉದ್ಭವಿಸಬಾರದು ಅಷ್ಟೇ. ಮಹಾಸಭೆಯು ಇಂದು ಸಾಕಷ್ಟು ವಿಸ್ತರಿಸುತ್ತಿದೆ. ಮಹಿಳೆಯರಿಗೆ ಹೆಚ್ಚಿನ ಕಲ್ಪಿಸುತ್ತಿದೆ. ನಾವೆಲ್ಲರೂ ಒಂದು ಶಕ್ತಿಯಾಗಿ ಬೆಳೆಯಬೇಕು. ನಾವೆಲ್ಲ ಮನೆಬಿಟ್ಟು ಹೊರಗೆ ಬರುವಂಥಾಗಬೇಕು. ನಮ್ಮೊಳಗೆ ಸಂಘಟನೆ ಬಹುಮುಖ್ಯವೆನಿಸಿದೆ. ರಾಜ್ಯದಲ್ಲಿ ಏಕೈಕ ಜಿಲ್ಲಾ ಘಟಕದ ಅಧ್ಯಕ್ಷೆಯಾಗಿ ಬಹುಮೌಲಿಕ ಸೇವೆಯನ್ನು ಸಲ್ಲಿಸುತ್ತಿರುವವರು ರತ್ನಪ್ರಭಾ ಬೆಲ್ಲದ ಅವರು. ಅವರೊಂದು ನಮಗೆಲ್ಲ ನಿದರ್ಶನವಾಗಿದ್ದಾರೆ. ಮುಂಬರುವ ದಿನಗಳಲ್ಲಿ ಮಹಿಳಾ ಇನ್ನಷ್ಟು ರಚನಾತ್ಮಕವಾದ ಕೆಲಸಗಳನ್ನು ಮಾಡಲೆಂದು ಹೇಳಿದರು.ಮಹಾಸಭೆಯ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಮೂಕ್ತಂಬಾ ಬಿ ಅವರು ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತ ಹಾನಗಲ್ ಕುಮಾರಸ್ವಾಮಿಗಳಿಂದ ಪ್ರಾರಂಭಗೊಂಡಿ ಮಹಾಸಭೆ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಸಮಾಜವನ್ನು ಉನ್ನತಿಗೊಳಿಸಬೇಕೆಂಬುದಕ್ಕಾಗಿತ್ತು. ಆ ನೆಲೆಯಲ್ಲಿ ನಾವು ಸಾಕಷ್ಟು ಪ್ರಗತಿಯನ್ನು ಸಾಧಿಸುತ್ತಿದ್ದೇವೆ. 1940 ಸಂದರ್ಭದಲ್ಲಿಯೇ ವೀರಶೈವ ಲಿಂಗಾಯತ ಧರ್ಮವನ್ನು ಧರ್ಮವನ್ನಾಗಿ ರೂಪಿಸಬೇಕೆಂಬ ಒತ್ತಾಯವಿತ್ತು ಅದು ಈಡೇರಲಿಲ್ಲ.
ರಾಜಕೀಯವಾಗಿ ನಾವು ಪ್ರಭಾವಿಗಳಾಗದಿದ್ದರೆ ನಮ್ಮ ಸಮಾಜವು ತುಳಿತ್ತಕ್ಕೊಳಗಾಗುತ್ತದೆ. 121 ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿರುವ ಮಹಾಸಭೆಯು ಸಂಘಟನೆಗೆ ಬಹು ಆದ್ಯತೆಯನ್ನು ನೀಡುತ್ತಾ ಬಂದಿದೆ. ಅಧ್ಯಕ್ಷರಾಗಿರುವ ಶಾಮನೂರು ಶಿವಶಂಕರ್ಪನವರ ಕೊಡುಗೆ ಬಹುಮೌಲಿಕ. ಹಿಂದಿನ ಎಲ್ಲ ಅಧ್ಯಕ್ಷರು ಮಹಾಸಭೆಯನ್ನು ತಳಮಟ್ಟದಲ್ಲಿ ಕಟ್ಟಿಬೆಳೆಸಿದ್ದಾರೆ. ಬೆಳಗಾವಿ ಜಿಲ್ಲಾ ಘಟಕವು ಸಾಕಷ್ಟು ಕೆಲಸವನ್ನು ಮಾಡುತ್ತಿದೆ. ಜಾತಿಗಣತಿಯಲ್ಲಿ ವೀರಶೈವ ಲಿಂಗಾಯತ ಎಂದು ನಮೂದಿಸುವದನ್ನು ಯಾರೂ ಮರೆಯಬಾರದು. ಮಹಿಳೆಯರು ಸಮಾಜದ ಮುಖ್ಯವಾಹಿನಿಯಲ್ಲಿ ನಿಲ್ಲುವಂತೆ ಮಹಾಸಭೆಯು ಎಲ್ಲ ಉಪಕ್ರಮಗಳನ್ನು ಕೈಗೊಳ್ಳುತ್ತಿದೆ. ಕಾಯಕ ಸಂಸ್ಕೃತಿಯನ್ನು ಬಿತ್ತಿ ಬೆಳೆಸುತ್ತಿದೆ. ಸಮಾನತೆಯನ್ನು ನೀಡಿದೆ. ಎಲ್ಲರೂ ಇದರ ಸದುಪಯೋಗ ಪಡೆಯುವಂತಾಗಬೇಕೆಂದು ಹೇಳಿದರು.ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಅವರು ಅಧ್ಯಕ್ಷೀಯ ನುಡಿಗಳನ್ನಾಡಿ ಮಹಿಳೆಯರಲ್ಲಿ ಆತ್ಮವಿಶ್ವಾಸ ಹಾಗೂ ದೃಢಸಂಕಲ್ಪವನ್ನು ಮೂಡಿಸುವ ಕೆಲಸವನ್ನು ಮಹಾಸಭೆಯು ನಿರಂತರವಾಗಿ ಮಾಡುತ್ತಿದೆ. ಕಾಯಕಕಟ್ಟೆ ಮೂಲಕ ಸ್ವಾವಲಂಬತನವನ್ನು ತಂದಿದೆ. ಇಂದು ಅನೇಕ ಮಹಿಳೆಯರು ಇದರ ಲಾಭವನ್ನು ಪಡೆದುಕೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಮಹಿಳಾ ಘಟಕವು ಮತ್ತಷ್ಟು ಸಬಲಗೊಳ್ಳಲಿದೆ ಎಂದು ಹೇಳಿದರು. ದಿವ್ಯ ಸಾನ್ನಿಧ್ಯ ವಹಿಸಿದ್ದ ನಿಡಸೋಸಿ ಶ್ರೀಮಠದ ಪೂಜ್ಯ ನಿಜಲಿಂಗೇಶ್ವ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತಾ, ಶರಣರು ಕಾಯಕ ಸಂಸ್ಕೃತಿಯನ್ನು ಬಿತ್ತಿಬೆಳೆದರು. ಪುರುಷ ಸಿೊಥ ಎಂಬ ಭೇದವನ್ನು ಅಳಿಸಿ ಸರ್ವಸಮಾನತೆಯನ್ನು ನೀಡಿದರು. ಬಸವಣ್ಣನವರ ಸಮಾನತೆಯ ಪರಿಕಲ್ಪನೆ ಯುಗಯುಗಳಿಗೂ ವಿಸ್ತರಿಸಿದೆ. ಮಹಿಳೆಯರಿಗೆ ಅಂಥ ಅಭಿವ್ಯಕ್ತಿ ಕಲ್ಪಿಸಿದರು. ಮಹಿಳೆ ಸ್ವಾವಲಂಬಿಯಾಗಿಯೇ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಹೇಳಿದರು. ಇಂದು ಮಹಿಳೆಯರ ಅಭ್ಯುದಯಕ್ಕಾಗಿ ನಮ್ಮ ನಿಡಸೋಸಿ ಮಠವು ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದೆ ಎಂದು ನುಡಿದರು.ವೇದಿಕೆಯ ಮೇಲೆ ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಆಶಾ ಪ್ರಭಾಕರ ಕೋರೆ, ವಿದ್ಯಾ ಗೌಡರ, ಶಾರದಾ ಪಾಟೀಲ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಹಾಸಭೆಯ ನೂತನ ಸದಸ್ಯೆಯರಿಗೆ ಪ್ರಮಾಣಪತ್ರಗಳನ್ನು ನೀಡಿ ಗೌರವಿಸಿತು. ಉಮೇಶ ಬಾಳಿ, ಅಣ್ಣಾ ಸಾಹೇಬ ಕೊರಬು, ಸರೋಜನಿ ನಿಶಾನದಾರ, ರಮೇಶ ಕಳಸಣ್ಣವರ, ಸೋಮಲಿಂಗ ಮಾವಿನಕಟ್ಟಿ, ಯ.ರು.ಪಾಟೀಲ ಮೊದಲಾದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 